May 17, 2024

MALNAD TV

HEART OF COFFEE CITY

ಕಳೆದ ರಾತ್ರಿ ಮಳೆ ಆರ್ಭಟ : ಕೆಲವೆಡೆ ದಾಖಲೆ ಮಳೆ : ನದಿಯಾದ ಕಳಸಾಪುರ ಗ್ರಾಮ

1 min read

 

ಚಿಕ್ಕಮಗಳೂರು ಜಿಲ್ಲೆಯ ಇತಿಹಾಸದಲ್ಲೇ ದಾಖಲೆಯ ಮಳೆ ಕಳೆದ ರಾತ್ರಿ ಸುರಿದಿದೆ. ಕೇವಲ 1 ಗಂಟೆಯಲ್ಲಿ ಸಾರಗೋಡು ಗ್ರಾಮದಲ್ಲಿ 200 ಮಿಲಿ ಮೀಟರ್ ಮಳೆಯಾಗಿದ್ದು, ರಣರಕ್ಕಸ ಮಳೆಗೆ ಕಾಫಿನಾಡಿಗರು ಬೆಚ್ಚಿ ಬೆರಗಾದರು,

ಸಾರಗೋಡಿ ಗ್ರಾಮದಲ್ಲಿ ಒಂದೇ ಗಂಟೆಯಲ್ಲಿ ಹಿಂದೆಂದೂ ಕಾಣದ 200 ಮಿಲಿಮೀಟರ್ ಗೂ ಅಧಿಕ ವರ್ಷಧಾರೆಯಾಗಿದೆ, ಸಾರಗೋಡು, ಹುಯಿಗೆರೆ ಸುತ್ತಮುತ್ತ ಸಹಾ ಕಳೆದ ರಾತ್ರಿ ಭಾರೀ ಮಳೆ ಸುರಿದಿದೆ,
ರಸ್ತೆ ಮೇಲೆ ನದಿಯಂತೆ ಮಳೆ ನೀರು ಹರಿದಿದ್ದು, ಹಲವೆಡೆ ಮನೆಗಳಿಗೂ ನೀರು ನುಗ್ಗಿದ್ದು, ಕಾಂಪೌಂಡ್ ಗಳು ಕುಸಿತಗೊಂಡಿವೆ, ದಾಖಲೆ ಪ್ರಮಾಣದ ಮಳೆ ಕಂಡು ಸ್ಥಳೀಯರು ಕಂಗಾಲಾಗಿದ್ದಾರೆ,
ಈ ನಡುವೆ ಕಳಸಾಪುರ ಗ್ರಾಮದ ಹೃದಯ ಭಾಗದಲ್ಲೇ ನದಿಯೊಂದು ಸೃಷ್ಠಿಯಾಗಿದೆ, ವರುಣನ ಆರ್ಭಟಕ್ಕೆ ಅರ್ಧಕರ್ಧ ಗ್ರಾಮವೇ ಮುಳುಗಡೆ ಆಗಿದೆ, ಕಳಸಾಪುರ ಗ್ರಾಮದಲ್ಲಿ ಕಳೆದ ರಾತ್ರಿ ವರುಣ ಅಬ್ಬರಿಸಿದ್ದಾನೆ,
ಇದರಿಂದಾಗಿ ಗ್ರಾಮದ ಹಲವು ರಸ್ತೆ ಮನೆಗಳು ಜಲಾವೃತಗೊಂಡಿವೆ
ಇದ್ದಕ್ಕಿದ್ದಂತೆ ಸುರಿದ ಭಾರಿ ಮಳೆಗೆ ಜನ ಕಂಗಾಲಾಗಿದ್ದು, ನೋಡ ನೋಡುತ್ತಿದ್ದಂತೆ ಗ್ರಾಮದ ರಸ್ತೆಗಳು ನದಿಯಂತಾಗಿದ್ದು ಗ್ರಾಮ ಅಂಚಿನ ಶೆಟ್ಟಿಕೆರೆ ಕೋಡಿ ಬಿದ್ದ ಹಿನ್ನೆಲೆ ಈ ಅನಾಹುತ ಸಂಭವಿಸಿದೆ ರಸ್ತೆಯ ಮೇಲೆ ಭೋರ್ಗರಿಯುತ್ತಿರೋ ಮಳೆಯ ನೀರು ಗ್ರಾಮದಲ್ಲಿ ಇತಿಹಾಸದಲ್ಲೇ ಕಂಡು ಕೇಳರಿಯದ ಮಳೆಗೆ ಸಾಕ್ಷಿಯಾಗಿದೆ,
ಗ್ರಾಮದ ಹೃದಯ ಭಾಗದಲ್ಲಿ ಕೃತಕ ನದಿ ಸೃಷ್ಟಿಯಾದಂತಾಗಿದೆ , ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಶೆಟ್ಟಿಕೆರೆ ಗ್ರಾಮದ ಕೆರೆ ನೀರು ಅಪಾಯಕ್ಕೆ ಕಾದು ಕುಳಿತಿದೆ, ಇದರಿಂದಾಗಿ ಕಳಸಾಪುರ ಗ್ರಾಮದಲ್ಲಿ ಭಯ ಆತಂಕ ಸೃಷ್ಟಿಯಾಗಿದೆ, ನೆರೆಗೆ ಕಂಗಾಲಾದ ಸಾವಿರಾರು ಜನರು ಭೀತಿ ವ್ಯಕ್ತಪಡಿಸಿದ್ದಾರೆ, ತಡರಾತ್ರಿಯಿಂದ ಸುರಿದ ಭಾರಿ ಮಳೆಗೆ ಕಳಸಾಪುರ ಗ್ರಾಮ ತತ್ತರವಾಗಿದ್ದು, ಬಿಟ್ಟು ಬಿಡದೆ ಸುರಿದ ಮಳೆಗೆ ಇಡೀ ಗ್ರಾಮವೇ ಜಲಾವೃತವಾಗಿದೆ, ಸದ್ಯ ಮಳೆ ಬಿಡುವು ಕೊಟ್ಟರು ನಿಲ್ಲದ ನೆರೆ ಆತಂಕ ಸಹಾ ಭಯ ಉಂಟುಮಾಡಿದೆ , ಶೆಟ್ಟಿ ಕೆರೆಯಿಂದ ಹರಿದ ನೀರು ಮುಂಜಾನೆಯಿಂದ ನೆರೆಯಿಂದ ಗ್ರಾಮಸ್ಥರು ಕಂಗಾಲಾಗುವಂತೆ ಮಾಡಿದೆ,
ಗ್ರಾಮದ ಹೃದಯ ಭಾಗದಲ್ಲಿ ಭೋರ್ಗರೆಯುತ್ತಿರುವ ಕೋಡಿ ನೀರು ಜನರ ಕಣ್ಣೆದುರೇ ಕೊಚ್ಚಿ ಹೋಗುತ್ತಿರುವ ಮರದ ದಿಮ್ಮಿಗಳು ಮಳೆಯ ಆರ್ಭಟಕ್ಕೆ ಸಾಕ್ಷಿ ಆಗಿವೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!