May 2, 2024

MALNAD TV

HEART OF COFFEE CITY

ಮಾಜಿ ಅಧ್ಯಕ್ಷರುಗಳ ಪರಿಶ್ರಮದಿಂದ ಪೊಲೀಸ್ ಚೌಕಿ ನಿರ್ಮಾಣ

1 min read

ಚಿಕ್ಕಮಗಳೂರು : ಲೋಕಾರ್ಪಣೆಗೊಂಡ ಪೊಲೀಸ್ ಚೌಕಿಯ ಹಿಂದೆ ನಗರಸಭೆಯ ಹಿಂದಿನ ಮಾಜಿ ಅಧ್ಯಕ್ಷರುಗಳ ಹಾಗೂ ಸದಸ್ಯರುಗಳ ಪರಿಶ್ರಮವಿದೆ ಎಂದು ನಗರ ಸಭೆ ಸದಸ್ಯ ಟಿ. ರಾಜಶೇಖರ್ ಹೇಳಿದರು.
ಈ ಬಗ್ಗೆ ಮಲ್ನಾಡ್ ಟಿವಿಯೊಂದಿಗೆ ಮಾತನಾಡಿದ ಅವರು ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯ ಮುಂಭಾಗದ ವೃತ್ತದಲ್ಲಿ ನಿರ್ಮಿತವಾಗಿರುವ ಪೊಲೀಸ್ ಚೌಕಿಯು ನಗರದ ಸೌಂದರ್ಯವನ್ನು ಹೆಚ್ಚಿಸಿದ್ದು, ಈ ಪೊಲೀಸ್ ಚೌಕಿ ನಿರ್ಮಾಣವಾಗಲು 2019 ನೆ ಸಾಲಿನಲ್ಲಿ ಶಿಲ್ಪಾ ರಾಜಶೇಖರ್ ನಗರಸಭೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 12 ಲಕ್ಷದ 90 ಸಾವಿರ ರೂಪಾಯಿಗಳನ್ನು ಆಗಿನ ಎಸ್.ಪಿ ಆಗಿದ್ದ ಅಣ್ಣಾಮಲೈ ರವರ ಕೋರಿಕೆ ಮೇರೆಗೆ 14 ನೇ ಹಣಕಾಸಿನಲ್ಲಿ ಅನುದಾನ ನೀಡಲಾಗಿತ್ತು. ಈ ವೃತ್ತವು ತುಂಬ ಅತ್ಯುತ್ತಮವಾಗಿ ಮೂಡಿಬಂದಿದೆ. ಇದಕ್ಕೆ ಸಹಕಾರ ನೀಡಿದ ಶಾಸಕ ಸಿ.ಟಿ ರವಿಯವರಿಗೆ, ಆಗಿನ ನಗರಸಭ ಅಧ್ಯಕರಾದ ಶಿಲ್ಪ ರಾಜಶೇಖರ್, ಮುತ್ತಯ್ಯ, ಉಪಾಧ್ಯಕ್ಷರಾದ ಸುಧೀರ್ ಹಾಗು ಸದಸ್ಯರುಗಳಿಗೆ ಸಾರ್ವಜನಿಕರ ಪರವಾಗಿ ಕೃತಜ್ಞತೆ ಅರ್ಪಿಸುತ್ತೇವೆ ಎಂದು ಹೇಳಿದರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!