April 29, 2024

MALNAD TV

HEART OF COFFEE CITY

ಪಿ.ಎಂ ಕೇರ್ ಫಾರ್ ಚೈಲ್ಡ್ ಸ್ಕೀಂಗೆ ಚಾಲನೆ

1 min read

ಚಿಕ್ಕಮಗಳೂರು : ಕೋವಿಡ್ ಸೋಂಕಿನಿoದ ಮೃತಪಟ್ಟ ಕುಟುಂಬದ ಮಕ್ಕಳ ಮುಂದಿನ ಭವಿಷ್ಯವನ್ನು ಸುಭದ್ರಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಆಶಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಪಿ.ಎಂ ಕೇರ್ ಫಾರ್ ಚೈಲ್ಡ್ ಸ್ಕೀಂ ಯೋಜನೆಗೆ ಪ್ರಧಾನಿಗಳು ಆನ್‌ಲೈನ್ ವಿಡೀಯೋ ಕಾನ್ಪರೇನ್ಸ್ ಮೂಲಕ ಚಾಲನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂಸದೆ ಶೋಭಾಕರಂದ್ಲಾಜೆ ನೇತೃತ್ವದಲ್ಲಿ ಆರಂಭವಾದ ಆನ್‌ಲೈನ್ ವಿಡೀಯೋ ಕಾನ್ಪರೇನ್ಸ್ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಕೋವಿಂಡ್ ಸೋಂಕಿನಿAದ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಭಾರತಾಂಬೆಯೇ ತಾಯಿಯಾಗಿದ್ದು, ಅವರನ್ನು ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಳಿದೆ. ಇವರ ಆರ್ಥಿಕ ಸ್ವಾವಲಂಭನೆಗಾಗಿ ಪಿ.ಎಂ ಕೇರ್ ಫಾರ್ ಚೈಲ್ಡ್ ಸ್ಕೀಂ ಯೋಜನೆಯನ್ನು ಜಾರಿಗೆ ತರುತ್ತಿದ್ದು, ಫಲಾನುಭವಿಯು 23 ವರ್ಷಕ್ಕೆ ಬಂದಾಗ ಇಡಿಗಂಟಿನ ರೂಪದಲ್ಲಿ 10,00,000/- ರೂಪಾಯಿಗಳ ಆರ್ಥಿಕ ನೆರವನ್ನು ನೀಡಲಾಗುವುದು. ಅಲ್ಲದೆ ಅವರ ವಿದ್ಯಾಭ್ಯಾಸ ಮತ್ತು ಉನ್ನತ ಶಿಕ್ಷಣಕ್ಕೆ ನೆರವು, ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿರ್ದೇಶದನ್ವಯ 50.000 ರೂಗಳನ್ನು ರಾಜ್ಯ ವಿಪತ್ತು ನಿರ್ವಣಾ ನಿಧೀಯಿಂದ ಒದಗಿಸಲಾಗಿದೆ ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!