April 29, 2024

MALNAD TV

HEART OF COFFEE CITY

ಉತ್ತಮ ಕಾರ್ಯನಿರ್ವಹಿಸಿದ ಅಧಿಕಾರಿಗಳು ವರ್ಗಾವಣೆ ನಿವೃತ್ತಿ ನಂತರವೂ ಜನಮಾನಸದಲ್ಲಿ ಉಳಿಯುತ್ತಾರೆ – ಜಿಲ್ಲಾಧಿಕಾರಿ ಕೆ ಎನ್ ರಮೇಶ್

1 min read

ಅಧಿಕಾರಾವಧಿಯಲ್ಲಿ ಜನಸ್ನೇಹಿಯಾಗಿ ಮತ್ತು ಜನಪರವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ವರ್ಗಾವಣೆ ಅಥವಾ ನಿವೃತ್ತಿ ನಂತರವೂ ಜನಮಾನಸದಲ್ಲಿ ಉಳಿಯುತ್ತಾರೆ ಎಂದು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಹೇಳಿದರುನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತುಮಕೂರಿಗೆ ವರ್ಗಾವಣೆಗೊಂಡಿರುವ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ ಪ್ರಭು ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರುಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಅಥವಾ ನಿವೃತ್ತಿ ಸಹಜ ಪ್ರಕ್ರಿಯೆ ಮತ್ತು ಅನಿವಾರ್ಯ. ವರ್ಗಾವಣೆ ಅಥವಾ ನಿವೃತ್ತಿ ಎಲ್ಲರಿಗೂ ಆಗುತ್ತದೆ ಆದರೆ ಅವರು ಅಧಿಕಾರ ಅವಧಿಯಲ್ಲಿ ನಡೆದು ಕೊಂಡ ರೀತಿ ಮಾಡಿದ ಜನಪರ ಕಾರ್ಯಗಳು ಮುಖ್ಯವಾಗುತ್ತವೆ ಎಂದರುಅಧಿಕಾರಿಗಳು ಬರುತ್ತಾರೆ ಹೋಗುತ್ತಾರೆ ಅದು ಮುಖ್ಯವಲ್ಲ ಅಧಿಕಾರಿಗಳಿಗೆ ಎಲ್ಲಾ ಕಡೆಗಳಲ್ಲೂ ಪೂರಕವಾದ ವಾತಾವರಣ ಇರುವುದಿಲ್ಲ ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೂರಕ ಉತ್ತಮವಾದ ವಾತಾವರಣವಿದೆ ಇಲ್ಲಿ ಜಿ ಪ್ರಭು ಸೇರಿದಂತೆ ಎಲ್ಲಾ ಅಧಿಕಾರಿಗಳು ಕಳೆದ ಎರಡು ವರ್ಷಗಳಲ್ಲಿ ಚುನಾವಣೆ ಸೇರಿದಂತೆ ಎಲ್ಲಾ ಸಂದರ್ಭಗಳಲ್ಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರುಜಿ. ಪ್ರಭು ಅವರು ಒಬ್ಬ ಅತ್ಯುತ್ತಮ ಜನಪರ ಅಧಿಕಾರಿ ಸರಳ ನಗುಮುಖದ ವ್ಯಕ್ತಿತ್ವದ ಅವರು ಅಭಿವೃದ್ಧಿಯಲ್ಲಿ ತಮ್ಮೊಂದಿಗೆ ಉತ್ತಮವಾಗಿ ಸಹಕರಿಸಿದ್ದರು ಎಂದ ಜಿಲ್ಲಾಧಿಕಾರಿಗಳು ಪ್ರಭು ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತನಾಡಿ ವ್ಯಕ್ತಿ ಮುಖ್ಯವಲ್ಲ, ವ್ಯಕ್ತಿತ್ವ ಮುಖ್ಯ ನಾವು ನಿರ್ವಹಿಸುವ ಕರ್ತವ್ಯದಿಂದ ನಮ್ಮನ್ನು ಗುರುತಿಸುತ್ತಾರೆ. ಚುನಾವಣೆ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ಒಂದು ತಂಡದ ರೀತಿಯಲ್ಲಿ ಕೆಲಸ ಮಾಡಲಾಗಿದೆ. ನಾವು ನಿರ್ವಹಿಸುವ ಕಾರ್ಯಗಳು ಮುಂದಿನ ಪೀಳಿಗೆಗೆ ಮಾದರಿಯಾಗಿರ ಬೇಕು ಎಂದ ಅವರು ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ಗ್ರಾಮೀಣ ಪ್ರದೇಶದ ಶಾಲೆಗಳ ಅಭಿವೃದ್ಧಿಗೆ ಹಲವು ಕಾರ್ಯಗಳನ್ನು ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ ಜ್ಞಾನ ವೈಭವ ವಸ್ತು ಪ್ರದರ್ಶನವ್ನನು ವಿಭಿನ್ನ ರೀತಿಯಲ್ಲಿ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು ಎಂದರು. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳ ಹುಲ್ಲಹಳ್ಳಿ ಮಾತನಾಡಿ ಗರ್ವ ಬಿಟ್ಟರೆ ಸರ್ವವನ್ನು ಗೆಲ್ಲಲು ಸಾಧ್ಯ, ಅಧಿಕಾರದಲ್ಲಿರುವಾಗ ದರ್ಪ ತೋರದೆ ಉತ್ತಮ ಕೆಲಸ ನಿರ್ವಹಿಸಿದರೆ ಜನ ಅಧಿಕಾರಿಗಳನ್ನು ಗುರುತಿಸುತ್ತಾರೆ. ಇದಕ್ಕೆ ಸಾಕ್ಷಿ ಜಿ. ಪ್ರಭು ಅವರು ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!