May 6, 2024

MALNAD TV

HEART OF COFFEE CITY

ಕಟೀಲ್ ರವರ ಕೊಳಕು ಮನಸ್ಥಿತಿ ಅನಾವರಣವಾಗಿದೆ, ಕೂಡಲೇ ನಳಿನ್ ಕುಮಾರ್ ಕಟೀಲ್ ರನ್ನ ಸಂಸದ ಸ್ಥಾನದಿಂದ ವಜಾಗೊಳಸಬೇಕು – ಕಾರ್ತಿಕ್ ಜಿ ಚೆಟ್ಟಿಯಾರ್

1 min read

ಚಿಕ್ಕಮಗಳೂರು : ರಾಹುಲ್ ಗಾಂಧಿಯವರ ಬಗ್ಗೆ ಅತ್ಯಂತ ಕೀಳುಮಟ್ಟದ ಹಾಗೂ ಆಧಾರರಹಿತ ಹೇಳಿಕೆ ಕೊಟ್ಟಿರೋ ನಳೀನ್ ಕುಮಾರ್ ಕಟೀಲ್ ಕೊಳಕು‌ ಮನಃಸ್ಥಿತಿಯನ್ನು ಸದ್ಯ ಅನಾವರಣಗೊಂಡಿದೆ, ಕೂಡಲೇ ಸಂಸದ ಸ್ಥಾನದಿಂದ ಕೆಳಗಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಮಾಹಿತಿ ಮತ್ತು ತಂತ್ರಜ್ಞಾನ ಜಿಲ್ಲಾಧ್ಯಕ್ಷ ಕಾರ್ತಿಕ್ ಜಿ ಚೆಟ್ಟಿಯಾರ್ ಆಗ್ರಹ ಮಾಡಿದ್ದಾರೆ.

ರಾಹುಲ್ ಗಾಂಧಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತಾನಾಡಲು ಕಟೀಲ್‌ರವರಿಗೆ ಯಾವ ನೈತಿಕತೆಯಿದೆ. ರಾಜೀವ್‌ ಗಾಂಧಿ, ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹೆಗ್ಗಳಿಕೆ ನೆಹರೂ ಕುಟುಂಬದವರದ್ದು. ದೇಶಕ್ಕಾಗಿ ಬಿಜೆಪಿಯವರ ತ್ಯಾಗವೇನು.? ಕಟೀಲ್‌ರವರ ಕೊಡುಗೆಯೇನು.?
ಶ್ರೀ ರಾಹುಲ್ ಗಾಂಧಿ ರವರ ವಿರುದ್ಧ ನಳಿನ್ ಕುಮಾರ್ ಕಟೀಲ್ ರವರು ನೀಡಿರುವ ಕೀಳು ಮಟ್ಟದ ಸುಳ್ಳು ಹೇಳಿಕೆಯನ್ನು ತಕ್ಷಣವೇ ವಾಪಸ್ ಪಡೆದು ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಕಾರ್ತೀಕ್ ಆಗ್ರಹಪಡಿಸಿದ್ದಾರೆ ರಾಹುಲ್ ಗಾಂಧಿರವರನ್ನು ಡ್ರಗ್ ಅಡಿಟ್ ಮತ್ತು ಪೆಡ್ಲರ್ ಎಂದು ಕಟೀಲ್ ರವರು ಬಳಸಿರುವಂತಹ ಭಾಷೆಯನ್ನು ಗಮನಿಸಿದಾಗ ಅವರು ಬೆಳೆದುಬಂದಿರುವ ಸಂಸ್ಕಾರವನ್ನು ತೋರಿಸುತ್ತಿದೆ ಮತ್ತು ಶ್ರೀ ಕಟೀಲ್ ರವರು ಒಬ್ಬ ಸಂಸದರಾಗಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು
ದುರದೃಷ್ಟಕರದ ಸಂಗತಿಯಾಗಿದೆ ಇವರು ಈ ಸ್ಥಾನದಲ್ಲಿ ಮುನ್ನಡೆಯಲುಅನರ್ಹರಾಗಿದ್ದಾರೆ ಆದ್ದರಿಂದ ಶ್ರೀ ಕಟೀಲ್ ರವರನ್ನು ಸಂಸತ್ ಸದಸ್ಯ ಸ್ಥಾನದಿಂದ ವಜಾಮಾಡಬೇಕೆಂದು ರಾಷ್ಟ್ರಪತಿಗಳಿಗೆ ಒತ್ತಾಯಿಸುತ್ತೆನೆ ಹರಕುಬಾಯಿ ರಾಜಕಾರಣಿಯಾಗಿ ಬಾಲಿಶತನದ ಹಾಗೂ ಜೋಕರ್ ರೀತಿಯ ಹೇಳಿಕೆನೀಡಿರುವ ಶ್ರೀ ಕಟೀಲ್ ರಿಗೆ ಮಾನಸಿಕ ಸ್ಥಿಮಿತತೆಇಲ್ಲವೇ ಇಲ್ಲ ಎಂಬುದನ್ನು ಅವರು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ನಾಲಿಗೆಯ ಚಪಲಕ್ಕೆ ಮಾತನಾಡುತ್ತಿರುವ ಕಟೀಲ್ರು ಪದೇ – ಪದೇ ಸುಳ್ಳುಗಳನ್ನು ಹೇಳುತ್ತ ಅವರು ಸಂಸದರ ಸ್ಥಾನಕ್ಕೆ ಅಗೌರವ ತರುವಂತ ಕೆಲಸಕ್ಕೆ ಕೈ ಹಾಕಿದ್ದಾರೆ ಅವರನ್ನು ಸಂಸದ ಸ್ಥಾನದಿಂದ ವಜಾ ಸಹಿತ ಬಿಜೆಪಿ ಪಕ್ಷ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿ ಹಾಗೂ ಕಾನೂನಿನ ಪ್ರಕಾರ ಕ್ರಮ ತೆಗೆದುಗೊಳ್ಳಲು ಒತ್ತಾಯಿಸಿದ್ದಾರೆ.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!