April 29, 2024

MALNAD TV

HEART OF COFFEE CITY

ನಗರದ ಬಟ್ಟೆ ಅಂಗಡಿಯಲ್ಲಿ ನಿಗೂಢ ಸ್ಪೋಟ: ಎದುರಿಗಿದ್ದ ಆಟೋ ಎರಡು ಪಲ್ಟಿ

1 min read

ಚಿಕ್ಕಮಗಳೂರು: ನಗರದ ಎಂಇಎಸ್ ವಿದ್ಯಾಸಂಸ್ಥೆಗೆ ಸೇರಿದ ಮಳಿಗೆಯೊಂದರಲ್ಲಿ ನಿಗೂಢ ಸ್ಪೋಟ ಸಂಭವಿಸಿ ಇಡೀ ಅಂಗಡಿ ಬೆಂಕಿಗಾಹುತಿಯಾಗಿದ್ದು ಘಟನೆಯಲ್ಲಿ ಆಟೋ ಪುಡಿ ಪುಡಿ ಯಾಗಿದ್ದು ಬಟ್ಟೆ ಅಂಗಡಿ ನಡೆಸುತ್ತಿದ್ದ ಹರೀಶ್ ಎಂಬುವವರಿಗೆ ಸುಟ್ಟ ಗಾಯಗಳಾಗಿ ಆಸ್ಪತ್ರೆ ಸೇರಿದ್ದಾರೆ.

ಕಳೆದ ರಾತ್ರಿ ನಗರದ ರತ್ನಗಿರಿ ರಸ್ತೆಯಲ್ಲಿರುವ ಎಂಇಎಸ್ ಕಾಲೇಜು ಕಟ್ಟಡದಲ್ಲಿರುವ ಪ್ರಿನ್ಸ್ ಕಲೆಕ್ಷನ್ ಎಂಬ ಬಟ್ಟೆ ಅಂಗಡಿಯಲ್ಲಿ ಸ್ಪೋಟ ಸಂಭವಿಸಿ ಏಕಾಏಕಿ ಮಳಿಗೆ ಹೊತ್ತಿ ಉರಿದಿದೆ. ಮೇಲ್ನೋಟಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ಸಂಭವಿಸಿದೆ ಎನ್ನಲಾಗುತ್ತಿದ್ದರೂ ಮಳಿಗೆಯಲ್ಲಿ ಇದ್ದ ಸ್ಪೋಟಕ ಅನಾಹುತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸ್ಪೋಟದ ರಭಸಕ್ಕೆ ಅಂಗಡಿಯ ರೋಲಿಂಗ್ ಶೆಟರ್ ಡೆಂಟ್ ಆಗಿದ್ದ ಭಾರೀ ಅಗ್ನಿ ಆವರಿಸಿದೆ. ಸ್ಪೋಟದ ವೇಳೆ ಅಂಗಡಿ ಹೊರಗೆ ನಿಲ್ಲಿಸಿದ್ದ ಆಟೋ ಪಲ್ಟಿ ಹೊಡೆದು ನಜ್ಜುಗುಜ್ಜಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಿದ್ದಾರೆ.

ಎಂಇಎಸ್ ಕಾಲೇಜಿನಲ್ಲಿ ಪರೀಕ್ಷೆ ಗಳು ನಡೆಯುತ್ತಿದ್ದು ಇಡೀ ಕಾಲೇಜು ಹಾಗೂ ಹತ್ತಾರು ಮಳಿಗೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಘಟನೆಯಲ್ಲಿ ಅಂಗಡಿ ನಡೆಸುತ್ತಿದ್ದ ಹರೀಶ್ ಎಂಬಾತನಿಗೆ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 8 ಲಕ್ಷಕ್ಕೂ ಹೆಚ್ಚು ವಸ್ತುಗಳು ಬೆಂಕಿಗಾಹುತಿ ಆಗಿವೆ. ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆಗೆ ಕಾರಣವಾದ ಸ್ಪೋಟಕದ ಬಗ್ಗೆ ತನಿಖೆ ನಡೆಯುತ್ತಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!