April 29, 2024

MALNAD TV

HEART OF COFFEE CITY

ಹಣ, ಹೆಂಡದ ಹೊಳೆ ಹರಿಸಿ ಬಿಜೆಪಿ ಗೆಲುವು_ರೂಬೆನ್ ಮೊಸಸ್

1 min read

 

ಚಿಕ್ಕಮಗಳೂರು: ನಗರದ ಅಭಿವೃದ್ಧಿಗೆ ಶಾಸಕ ಸಿ.ಟಿ ರವಿ ಕೊಡುಗೆ ಶೂನ್ಯ. ಹೀಗಾಗಿ ವಿಧಾನ ಪರಿಷತ್ ಹಾಗೂ ನಗರಸಭೆ ಚುನಾವಣೆ ಬಿಜೆಪಿ ತನ್ನ ವರ್ಚಸ್ಸು ಹಾಗೂ ಅಭಿವೃದ್ಧಿಯಿಂದ ಗೆಲುವು ಸಾಧಿಸಿಲ್ಲ ಹಣ, ಹೆಂಡದ ಹೊಳೆ ಹರಿಸಿದ್ದರಿಂದ ಗೆಲುವು ಸಾಧಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬೆನ್ ಮೊಸೆಸ್ ಆರೋಪಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಸಿ.ಟಿ.ರವಿ ನಾಲ್ಕು ಬಾರೀ ಶಾಸಕರಾದರೂ ಅವರ ಸಾಧನೆ ಶೂನ್ಯ. ಯುಜಿಡಿ, ಅಮೃತ್ ಯೋಜನೆಯನ್ನು ಇದುವರೆಗೂ ಪೂರ್ಣಗೊಳಿಸಿಲ್ಲ, ಬಸವನಹಳ್ಳಿಕೆರೆ ಹಾಳು ಬಿದ್ದಿದೆ ಎಂದ ಅವರು, ಮಾತ್ತೆತ್ತಿದರೇ ಮೆಡಿಕಲ್, ಕಾಲೇಜು ಇಂಜಿನಿಯರಿಂಗ್ ಜಪಿಸುತ್ತಾರೆ ಎಂದು ಟೀಕಿಸಿ ದರು.

ಸಿ.ಟಿ.ರವಿ ಅವಧಿಯಲ್ಲಿ ಒಂದೇ ಒಂದು ಆಶ್ರಯ ಮನೆ ನೀಡಿಲ್ಲ, ಕೇವಲ ತಿಳುವಳಿಕೆ ಪತ್ರ, ಮನವರಿಕೆ ಪತ್ರ ನೀಡಿ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅವಧಿಯಲ್ಲಿ ಚಿಕ್ಕಮಗಳೂರು ನಗರಕ್ಕೆ 1550 ಮನೆಗಳು ಮಂಜೂರಾಗಿದ್ದು, ಮನೆಗಳನ್ನು ಬಡವರಿಗೆ ನೀಡದೆ ಸಂಚು ರೂಪಿಸಿದರು.

ಇತ್ತೀಚೆಗೆ ವಸತಿ ಸಚಿವರೊಂದಿಗೆ ಸಭೆ ನಡೆದ ಸಂದರ್ಭದಲ್ಲಿ 1311 ಮನೆಗಳು ಬ್ಲಾಕ್ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದು ಸಿದ್ಧರಾಮಯ್ಯ ಅವರ ಅವಧಿಯಿಂದ ಇಲ್ಲಿ ಯತನಕ ಮನೆಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ದೂಷಿಸಿದರು.

ಇನ್ನೂ ಜಿಲ್ಲಾಡಳಿತ ಸಂಪೂರ್ಣವಾಗಿ ಸಿ.ಟಿ.ರವಿಯವರ ಕೈಗೊಂಬೆಯಾಗಿ ಕೆಲಸ ಮಾ ಡುತ್ತಿದೆ. ನಗರಸಭೆ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿನ ಲೋಪವೇ ಇದಕ್ಕೆ ಸಾಕ್ಷಿ ಎಂದ ಅವರು, ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲುವ ಭಯದಿಂದ ಶಾಸಕರು ಅಭ್ಯರ್ಥಿಗಳಿಗೆ 15ಲಕ್ಷ ರೂ. ನೀಡಿದ್ದಾರೆ. ರಾಮನಹಳ್ಳಿ ಬಿಜೆಪಿ ಅಭ್ಯರ್ಥಿ ನಡೆಸಿದ ದೂರವಾಣಿ ಸಂಭಾಷಣೆಯಿಂದ ಇದು ಬಹಿರಂಗವಾಗಿದೆ ಎಂದರು.

ವಿಧಾನ ಪರಿಷತ್ ಮತ್ತು ನಗರಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆ ಪಿ ಹಣ ಮತ್ತು ಹೆಂಡದ ಹೊಳೆಯನ್ನೇ ಹರಿಸಿದೆ. ಎರಡು ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಅಲೆಯ ಇದ್ದರೂ ಹಣಬಲ ಮತ್ತು ಹೆಂಡದಿಂದ ಗೆಲುವು ಸಾಧಿಸಿದ್ದಾರೆ ಹೊರತು, ಸ್ವಂತ ವರ್ಚಸ್ಸಿನಿಂದ ಅಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮತ್ತು ಮಾಹಿತಿ ತಂತ್ರಜ್ಞಾನ ಅಧ್ಯಕ್ಷ ಕಾರ್ತಿಕ್ ಜಿ.ಚೆಟ್ಟಿಯಾರ್, ಸಾಮಾಜಿಕ ಜಾಲತಾಣ ಮತ್ತು ಮಾಹಿ ತಿ ತಂತ್ರಜ್ಞಾನ ರಾಜ್ಯ ಕಾರ್ಯದರ್ಶಿ ಚೇತನ, ಸಿಲ್ವಸ್ಟರ್ ಇದ್ದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!