April 27, 2024

MALNAD TV

HEART OF COFFEE CITY

ಕೊರೊನಾ ರೂಲ್ಸ್ ಇಂದಿನಿಂದಲೇ ಜಾರಿ: ಡಿ.ಎಚ್.ಒ ಡಾ. ಅಶ್ವಥ್ ಬಾಬು ಹೇಳಿಕೆ

1 min read

ಚಿಕ್ಕಮಗಳೂರು: ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ನಿಯಂತ್ರಣ ಕ್ರಮಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಎಲ್ಲಾ ಸಿದ್ದತೆ ನಡೆಸಿದೆ ಎಂದು ಡಿ.ಎಚ್ ಒ ಡಾ. ಅಶ್ವಥ್ ಬಾಬು ತಿಳಿಸಿದರು.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಅಶ್ವಥ್ ಬಾಬು ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯ ಮಾಸ್ಕ್ ಧರಿಸಲು ಆದೇಶ ಬಂದಿದೆ, ಐಎಲ್ಐ, ಸಾರಿ ಕೇಸ್ ಗಳ ತಪಾಸಣೆ, ಜೊತೆಗೆ ಜ್ವರ ಹಾಗೂ ಆರೋಗ್ಯ ಸಮಸ್ಯೆಗಳ ಪ್ರಕರಣಗಳ ಕುರಿತು ಆಸ್ಪತ್ರೆಗಳಲ್ಲಿ ನಡೆಸಿರುವ ಸಿದ್ದತೆ ಬಗ್ಗೆ ತಿಳಿಸಿದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದ ಎಚ್ಚೆತ್ತಿರುವ ಸರ್ಕಾರ ಎಲ್ಲಾ ಜಿಲ್ಲೆಗಳಿಗೂ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅಲ್ಲದೇ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಹರಡದಂತೆ ನಿಗಾ ವಹಿಸುವುದು ಅಲ್ಲದೇ ಖಾಸಗಿ ಆಸ್ಪತ್ರೆಗಳಿಗೂ ಸಹಾ ಇಲಾಖೆಯ ಸೂಚನೆಗಳನ್ನು ಅನುಸರಿಸಲು ಸೂಚನೆ ಹಾಗೂ ಮಾರ್ಗಸೂಚಿ ಪಟ್ಟಿ ನೀಡಲಾಗುವುದು ಎಂದು ತಿಳಿಸಿದ ಡಾ. ಅಶ್ವಥ್ ಬಾಬು ಸಾರ್ವಜನಿಕರಿಗೆ ಹೆಚ್ಚೆಚ್ಚು ಆರೋಗ್ಯ ಕುರಿತಾದ ಅರಿವು, ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ಇದೇ ವೇಳೆ ಮಾತನಾಡಿದ ಅವರು ಸದ್ಯ, ಜಿಲ್ಲೆಗೆ ಬರುವ ಹೊರ ರಾಜ್ಯದ ಪ್ರವಾಸಿಗರನ್ನು ನಿರ್ಬಂಧಿಸುವ ಯಾವುದೇ ಆದೇಶ ರಾಜ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿಲ್ಲ ಎಂದರು. ಡಿಸೆಂಬರ್ ಮಾಹೆ ಆಗಿರುವುದರಿಂದ ನರಸಿಂಹರಾಜಪುರ ತಾಲೂಕಿನಲ್ಲಿ ಕೆಲ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿದೆ ಎಂದು ಸಹಾ ಅವರು ತಿಳಿಸಿದರು. 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!