May 17, 2024

MALNAD TV

HEART OF COFFEE CITY

ಮಲೆನಾಡು ಭಾಗದಲ್ಲಿ ಮುಂದುವರೆದ ಮಳೆ, ಪತ್ತೆಯಾಗದ ಬಾಲಕಿಯ ಮೃತದೇಹ

1 min read

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಆರ್ಭಟ ಮುಂದುವರೆದಿದ್ದು, ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಕೆಲಸಮಯ ಬಿಡುವು ನೀಡಿದರೇ, ಮತ್ತೇ ಬಿರುಸುಗೊಳ್ಳುತ್ತಿದೆ. ಇಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲೇ ಹರಿಯುತ್ತಿವೆ.ಮೂರು ದಿನಗಳಿಂದ ಬಿರುಸುಗೊಂಡ ಮಳೆ, ಮಂಗಳವಾರ ಹಗಲು ಮತ್ತು ರಾತ್ರಿ ವೇಳೆ ಮಳೆಯಾಗಿದೆ. ಬುಧವಾರ ಮುಂಜಾನೆ ಮಳೆ ಬಿರುಸುಗೊಂಡಿದ್ದು, ಮಧ್ಯಾಹ್ನದ ವೇಳೆಗೆ ಕೊಂಚ ಕಡಿಮೆಯಾದರು. ಸಂಜೆ ವೇಳೆಗೆ ಅಲ್ಲಲ್ಲಿ ಬಿರುಸುಗೊಂಡಿದೆ. ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.ಜಿಲ್ಲೆಯ ಮೂಡಿಗೆರೆ, ಕಳಸ, ಹೊರನಾಡು, ಚಾರ್ಮಾಡಿಘಾಟಿ, ಕೊಪ್ಪ, ಶೃಂಗೇರಿ, ಬಾಳೆ ಹೊನ್ನೂರು, ನರಸಿಂಹರಾಜಪುರ ಸುತ್ತಮುತ್ತ ಮಳೆಯಾಗುತ್ತಿದ್ದು ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಕಡೂರು ತರೀಕೆರೆ ಭಾಗದಲ್ಲೂ ನಿರಂತರ ಸಾಧಾ ರಣ ಮಳೆಯಾಗುತ್ತಿದೆ.
ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲೇ ಹರಿಯುತ್ತಿದ್ದು, ಹಳ್ಳ ಕೊಳ್ಳಗಳು ಅಬ್ಬರಿಸಿ ಹರಿಯುತ್ತಿವೆ. ಮಳೆಯಿಂದ ಅಲ್ಲಲ್ಲಿ ಮನೆಗಳಿಗೆ ಹಾನಿಯಾಗಿದೆ. ಮನೆಮೇಲೆ ಮರಬಿದ್ದು ಜಖಂಗೊಂಡಿದ್ದರೇ, ಗೋಡೆಕುಸಿದು ಮನೆಗಳಿಗೆ ಹಾನಿಯಾಗಿದೆ. ರಸ್ತೆಗಳ ಮೇಲೆ ಗುಡ್ಡದ ಮಣ್ಣು ಮತ್ತು ಮರಗಳು ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದ್ದು ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

ಶೃಂಗೇರಿ ಶಾರದಾ ದೇವಸ್ಥಾನ ಸಮೀಪದಲ್ಲಿರುವ ಕಪ್ಪೆಶಂಕರ ಮಂಟಪ ಕಳೆದ ಮೂರು ದಿನಗಳಿಂದ ತುಂಗಾನದಿ ನೀರಿನಲ್ಲಿ ಮುಳುಗಿದೆ. ನದಿಪಾತ್ರದ ರಸ್ತೆಗಳಿಗೆ ಪೊಲೀಸ್ ಇಲಾಖೆ ಬ್ಯಾರಿಕೇಡ್‍ಗಳನ್ನು ಹಾಕಿ ಸಂಚಾರವನ್ನು ಬಂದ್‍ಗೊಳಿಸಿದೆ. ಅಲ್ಲಲ್ಲಿ ಅಡಕೆ ಮತ್ತು ಕಾಫಿತೋಟಗಳಿಗೆ ನೀರು ನುಗ್ಗಿದ್ದು ಅಲ್ಲಲ್ಲಿ ಮಳೆ ಅವಂತರಗಳನ್ನು ಸೃಷ್ಟಿಸಿದೆ.
ಮೋಡ ಕವಿದ ವಾತವರಣ ಮುಂದೂವರೆದಿದ್ದು ಶೀತಗಾಳಿ ಬೀಸುತ್ತಿದೆ. ಮಳೆಯಿಂದ ಕೂಲಿಕಾರ್ಮಿಕರು ಕೆಲಸಕ್ಕೆ ತೆರಳಲು ಸಾಧ್ಯವಾಗದೇ ಮನೆಯಲ್ಲೆ ಉಳಿದುಕೊಳ್ಳುವಂತಾ ಗಿದೆ. ಒಟ್ಟಾರೆ ಬಾರೀ ಮಳೆಗೆ ಜನರು ತತ್ತರಿಸಿದ್ದಾರೆ.

ಮುಂದುವರೆದ ಬಾಲಕಿ ಹುಟುಕಾಟ:

ಜು.4ರಂದು ಸಂಜೆ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಹೊಸಪೇಟೆ ಗ್ರಾಮದ 7ವರ್ಷದ ಬಾಲಕಿ ಸುಪ್ರೀತ ಕಾಫಿತೋಟದಲ್ಲಿ ತುಂಬಿ ಹರಿಯುವ ಹಳ್ಳದಲ್ಲಿ ಕೊಚ್ಚಿ ಹೋಗಿದ್ದು, ಬಾಲಕಿ ಶೋಧಕಾರ್ಯ ಮೂರನೇ ದಿನವು ಮುಂದೂವರೆದಿದ್ದು, ಬಾಲಕಿಯ ಸುಳಿವು ದೊರೆತ್ತಿಲ್ಲ.
ಸಂಜೆ ಹಾಗೂ ಮಂಗಳವಾರ ಬೆಳಿಗ್ಗೆಯಿಂದ ಸಂಜೆವರೆಗೂ ಅಗ್ನಿಶಾಮಕ ದಳದ ಸಿಬ್ಬಂದಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ತರಬೇತಿ ಪಡೆದ ತಂಡದ ಸದಸ್ಯರು ಹಾಗೂ ಸ್ಥಳೀಯರು ಶೋಧ ಕಾರ್ಯ ನಡೆಸಿದರು. ಬಾಲಕಿ ಸುಳಿವು ದೊರೆತ್ತಿಲ್ಲ. ಈ ನಿಟಿ ನಲ್ಲಿ ಜಿಲ್ಲಾಡಳಿತ ಬೆಂಗಳೂರಿನಿಂದ ಎಸ್‍ಡಿಆರ್‍ಎಫ್ ತಂಡ ಕರೆಸಿದ್ದು, ಬುಧವಾರ ಬೆಳಿಗ್ಗೆ ಯಿಂದ ಎಸ್‍ಡಿಆರ್‍ಎಫ್ ತಂಡದ ಸದಸ್ಯರು ಶೋಧ ಕಾರ್ಯ ನಡೆಸಿದರು. ಬಾಲಕಿಯ ಸುಳಿವು ದೊರೆತ್ತಿಲ್ಲ.
ಜಿಲ್ಲಾಡಳಿತ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದು ಎಸ್‍ಡಿಆರ್‍ಎಫ್ 22 ಮಂದಿ 35 ಸ್ಥಳೀಯರು ಸೇರಿದಂತೆ 57 ಜನರು ಶೋಧಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಶೀಘ್ರದಲ್ಲೇ ಬಾಲಕಿಯ ಸುಳಿವು ದೊರೆಯುವ ವಿಶ್ವಾಸವನ್ನು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ವ್ಯಕ್ತಪಡಿ ಸಿದ್ದಾರೆ.

‘ಬಾಲಕಿ ಶೋಧ ಕಾರ್ಯಕ್ಕೆ ಎಸ್‍ಡಿಆರ್‍ಎಫ್ ತಂಡವನ್ನು ಬೆಂಗಳೂರಿನಿಂದ ಕರೆಸಿದ್ದು ಬುಧವಾರದಿಂದ ಶೋಧಕಾರ್ಯ ಆರಂಭಿಸಿದ್ದಾರೆ. ಶೀಘ್ರವೇ ಬಾಲಕಿ ಸುಳಿವು ಸಿಗುವ ವಿಶ್ವಾಸವಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, ಧರ್ಮಸ್ಥಳ ಗ್ರಾಮೀಣಾಭಿವದೃದ್ಧಿ ಸಂಘದ ತರ ಬೇತಿ ಪಡೆದ ಸದಸ್ಯರು ಹಾಗೂ ಸ್ಥಳೀಯರು ಎಸ್‍ಡಿಆರ್‍ಎಫ್ ತಂಡದ ಸದಸ್ಯರು ತೀವ್ರಶೋಧ ಕಾರ್ಯ ನಡೆಸುತ್ತಿದ್ದಾರೆ. ಇಂದು ಅಥವಾ ನಾಳೆ ಬಾಲಕಿ ಸುಳಿವು ಸಿಗುವ ವಿಶ್ವಾಸವಿದೆ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜು.9ರ ವರೆಗೆ ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿ ಕೇಂದ್ರಗಳಿಗೂ ರಜೆ ಘೋಷಣೆ ಮಾಡಲಾಗಿದೆ.’
-ಕೆ.ಎನ್.ರಮೇಶ್, ಜಿಲ್ಲಾಧಿಕಾರಿ.

ಮಳೆಗೆ 42 ಮನೆಗಳಿಗೆ ಹಾನಿಯಾಗಿದೆ. 5ಮನೆಗಳು ಸಂಪೂರ್ಣ ಶಿಥಿಲಗೊಂಡಿದ್ದು, 16 ಮನೆಗಳು ಭಾಗಶಃ ಹಾನಿಯಾಗಿದೆ. 21 ಮನೆಗಳಿಗೆ ಶೇ.15ರಿಂದ 25ರಷ್ಟು ಹಾನಿಯಾಗಿದೆ. ಒಂದು ಹಸು ಮೃತಪಟ್ಟಿದೆ.’

ಮಳೆ ವಿವರ:
ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಬುಧವಾರ ಬೆಳಿಗ್ಗೆ 8ರವರೆಗೆ ಜಿಲ್ಲೆಯ ವಿವಿಧ ತಾಲ್ಲೂಕಿನ ಹಲವೆಡೆ ಬಿದ್ದಿರುವ ಮಳೆಯ ವಿವರ ಮಿಲಿಮೀಟರ್‍ಗಳಲ್ಲಿ ಇಂತಿದೆ.
ಚಿಕ್ಕಮಗಳೂರು ಕಸಬಾ 15.2, ವಸ್ತಾರೆ 42.2, ಆಲ್ದೂರು 59.2, ಜೋಳದಾಳ್ 42.2, ಅತ್ತಿಗುಂಡಿ 56.3, ಕೆ.ಆರ್.ಪೇಟೆ 48.3, ಬ್ಯಾರುವಳ್ಳಿ 44, ಕಳಸಾಪುರ 14, ದಾಸರಹಳ್ಳಿ 10.2, ಮೂಡಿಗೆರೆ 42.2, ಕೊಟ್ಟಿಗೆಹಾರ 100, ಗೋಣಿಬೀಡು 43, ಜಾವಳಿ 84.3, ಹಿರೇಬೈಲು 110,ಕಳಸ 78.2, ಹೊಸಕೆರೆ 90, ಬೆಳ್ಳೂರು 68.2, ನರಸಿಂಹರಾಜಪುರ 47.8, ಬಾಳೆಹೊನ್ನೂರು 56, ಮೇಗರಮಕ್ಕಿ 58, ಶೃಂಗೇರಿ 106, ಕಿಗ್ಗ 142.6 ಕೆರೆಕಟ್ಟೆ 183.4, ಕೊಪ್ಪ 145, ಹರಿಹgಪುರ 139, ಜಯಪುರ 88, ಬಸರಿಕಟ್ಟೆ 86.3, ಕಮ್ಮರಡಿ 118, ತರೀಕೆರೆ 24.6, ಲಕ್ಕವಳ್ಳಿ 49.4, ರಂಗೇನಹಳ್ಳಿ 38, ಲಿಂಗದಹಳ್ಳಿ 31, ಉಡೇವಾ20.8, ತಣಿಗೆಬೈಲು 43.2, ತ್ಯಾಗದಬಾಗಿ 30, ಹುಣಸಘಟ್ಟ 22, ಕಡೂರು 12, ಸಖರಾಯಪಟ್ಟಣ 16.6, ಸಿಂಗಟಗೆರೆ 8.6, ಪಂಚನಹಳ್ಳಿ 1, ಎಮ್ಮೆದೊಡ್ಡಿ 20.2, ಯಗಟಿ 11.2, ಗಿರಿಯಾಪುರ 9, ಬಾಸೂರು 8, ಚೌಳಹಿರಿಯೂರು 18.1, ಅಜ್ಜಂಪುರ 18, ಶಿವನಿ 13.4ಬುಕ್ಕಾಂಬುದಿಯಲ್ಲಿ 12.2 ಮಿಲಿಮೀಟರ್ ಮಳೆಯಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!