May 18, 2024

MALNAD TV

HEART OF COFFEE CITY

ಕೋಡಿ ಬಿದ್ದ ಹಿರೇಕೊಳಲೆ ಕೆರೆ ಸಿ. ಟಿ ರವಿ ದಂಪತಿ ಬಾಗಿನ

1 min read

ಚಿಕ್ಕಮಗಳೂರು: ಭಾರತೀಯ ಸನಾತನ ಸಂಸ್ಕøತಿ ಪ್ರಕೃತಿಯ ಜೊತೆಗೆ ಬದುಕಿರುವ ಸಂಸ್ಕøತಿ. ಸೃಷ್ಠಿ ನಮಗಾಗಿ ಅಲ್ಲ, ನಾವು ಸೃಷ್ಠಿಯ ಒಂದು ಭಾಗ ಎನ್ನುವ ಉದಾತ್ತ ಚಿಂತನೆಯನ್ನು ಇದು ಹೊಂದಿದ್ದು, ಆದ್ದರಿಂದಲೇ ಪಂಚಭೂತಗಳಲ್ಲಿ ದೇವರನ್ನು ಕಾಣುತ್ತೇವೆ. ಪಂಚಭೂತ ಗಳಿಲ್ಲದೇ ಯಾವುದೇ ಜೀವ ಉಳಿಯಲು ಸಾಧ್ಯವಿಲ್ಲ ಎಂದರು.ತಾಲ್ಲೂಕಿನ ಹಿರೇಕೊಳಲೆ ಕೆರೆ ತುಂಬಿ ಕೋಡಿಬಿದ್ದಿದ್ದು, ಈ ಹಿನ್ನಲೆಯಲ್ಲಿ ಶಾಸಕ ಸಿ.ಟಿ.ರವಿ ಬಾಗಿನ ಅರ್ಪಿಸಿ ನಂತರ ಮಾತನಾಡಿದರು. ಪ್ರಕೃತಿ ನಮಗಾಗಿ ಇರುವುದಲ್ಲ ನಾವು ಪ್ರಕೃತಿಯ ಒಂದು ಭಾಗ. ಆದ್ದರಿಂದ ಪ್ರಕೃತಿಯ ಜೊತೆಗೆ ಒಂದಾಗಿ ಬದುಕಬೇಕು. ಗಾಂಧಿ ಹೇಳಿದಂತೆ ನಮ್ಮ ಆಸೆಯನ್ನು ಈಡೇರಿಸಲು ಪ್ರಕೃತಿಗೆ ಸಾಧ್ಯವಿದ್ದು, ದುರಾಸೆಪಟ್ಟು ಅದನ್ನು ನಾಶಪಡಿಸಬಾರದು. ಮುಂದಿನ ಪೀಳಿ ಗೆಗೆ ಬೆಳೆಸಿ ಉಳಿಸಿ ಹೋಗಬೇಕು ಎಂದು ಹೇಳಿದರು.ಪ್ರವಾಸೋದ್ಯಮ ಇಲಾಖೆಯಿಂದ ಹಿರೇಕೊಳಲೆ ಕೆರೆ ಅಭಿವೃದ್ಧಿ ಕೆಲಸ ಆರಂಭವಾಗಿದ್ದು, ವಾಚ್‍ಟವರ್, ಕ್ಯಾಂಟೀನ್ ಕೆಲಸ ಪ್ರಗತಿಯಲ್ಲಿದೆ. ಉಪ್ಪಳ್ಳಿ ರಸ್ತೆಯ ಅಗಲೀಕರಣ ಪ್ರಕ್ರಿಯೆ ನಡೆಯುತ್ತಿದ್ದು, 80ಅಡಿ ರಸ್ತೆಯನ್ನಾಗಿ ಪರಿವರ್ತಿಸಲಾಗುತ್ತದೆ. ಚಿಕ್ಕಮಗಳೂರಿನ ಎಲ್ಲಾ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಶಾಸಕರು ತಿಳಿಸಿದರು.ಈ ವೇಳೆ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಉಪಾಧ್ಯಕ್ಷೆ ಉಮಾದೇವಿ ಕೃಷ್ಣಪ್ಪ, ಪತ್ನಿ ಪಲ್ಲವಿ ಸಿ.ಟಿ.ರವಿ, ಎಚ್.ಡಿ.ತಮ್ಮಯ್ಯ ಸೇರಿದಂತೆ ನಗರಸಭೆ, ಗ್ರಾ.ಪಂ ಸಿಬ್ಬಂ ದಿಗಳು ಇದ್ದರು.


ಈಶ್ವರಹಳ್ಳಿ ಕೆರೆಗೆ ಬಾಗಿನ ಸಮರ್ಪಣೆ :

 

ಈಶ್ವರಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದರು. ಬಳಿಕ ಮಾತನಾಡಿ, ಕರಗಡ ಯೋಜನೆಯ ಮೂಲಕ ನೀರನ್ನು ಹಾಯಿಸಿ ಕೆರೆಗಳಿಗೆ ನೀರು ತುಂಬಿ ಸುವ ಕೆಲಸ ನಡೆಯುತ್ತಿದೆ. ರಣಘಟ್ಟದಿಂದ ಬೆಳವಾಡಿ ಮತ್ತು ಹಳೇಬೀಡು ಕೆರೆಗೆ ನೀರು ತುಂಬಿಸುವ ಕೆಲಸ ನಡೆಯುತ್ತಿದೆ ಎಂದರು.
ಭದ್ರಾನದಿಯಿಂದ ಕಡೂರು, ತರೀಕೆರೆ, ಚಿಕ್ಕಮಗಳೂರು ಭಾಗದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ರೂ.1281 ಕೋಟಿ ವೆಚ್ಚದ ಯೋಜನೆಯ ಪ್ರಥಮ ಹಂತದ ಕೆಲಸ ಮುಗಿದಿದ್ದು, 2 ಮತ್ತು 3ನೇ ಹಂತದ ಕೆಲಸಗಳಿಗೆ ಟೆಂಡರ್ ಕರೆಯಲಾಗಿದೆ. ಈಶ್ವರಹಳ್ಳಿ ಗ್ರಾ.ಪಂ.ಗೆ ರೂ. 11ಕೋಟಿ 60 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಮನೆ ಮನೆಗೆ ನೀರು ಸರಬರಾಜು ಮಾಡುವ ಜಲಜೀವನ್ ಮಿಷನ್ ಯೋಜನೆ ಜಿಲ್ಲೆಯಲ್ಲಿ ರೂ. 1,400 ಕೋಟಿ ವೆಚ್ಚದಲ್ಲಿ ಜಾರಿಗೊಳ್ಳುತ್ತಿದ್ದು. ಈಗಾಗಲೇ ವಿಸ್ತøತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದು ತಿಳಿಸಿದರು.
ಅಂಬಳೆ, ಕಸಬಾ ಹೋಬಳಿಯ ಕೆಲವು ಹಾಗೂ ಲಕ್ಯಾ, ಸಖರಾಯಪಟ್ಟಣ, ಕಡೂರು, ತರೀ ಕೆರೆ ಕ್ಷೇತ್ರದ ಭಾಗಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ ಎಂದ ಅವರು, ರೈತ ಮತ್ತು ಸೈನಿಕ ದೇಶದ ಬೆನ್ನುಲುಬಾಗಿದ್ದು, ಅವರು ಉತ್ತಮ ಸ್ಥಿಯಲ್ಲಿದ್ದರೆ ಸಮಾಜ ಸುಖ ಸಮೃದ್ಧಿಯಿಂದಿರುತ್ತದೆ. ಈ ಹಿಂದೆ ಕೃಷಿ ಮತ್ತು ಕೃಷಿ ಸಂಬಂಧಿತ ಉದ್ದಿಮೆಗಳಿಂದ ದೇಶದ ಆರ್ಥಿಕತೆಗೆ ಸಹಾಯವಾಗಿ ದೇಶ ಶ್ರೀಮಂತವಾಗಿತ್ತು ಮತ್ತೆ ಅದೇ ಸ್ಥಿತಿ ಮರುಕಳಿಸಬೇಕು ಎಂದು ಆಶಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!