May 20, 2024

MALNAD TV

HEART OF COFFEE CITY

ದಲಿತರಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚಿದವರು ಪ್ರೋ|ಬಿ.ಕೃಷ್ಣಪ್ಪ 

1 min read

ಚಿಕ್ಕಮಗಳೂರು: ದಲಿತರಲ್ಲಿ ಸ್ವಾಭಿಮಾನದ ಕಿಚ್ಚು ಹತ್ತಿಸಿದವರು ಪ್ರೋ|ಬಿ.ಕೃಷ್ಣಪ್ಪನವರು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ತಿಳಿಸಿದರು.ಶನಿವಾರ ನಗರದ ಡಾ|ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಸಹೋದರತ್ವ ಸಮಿತಿ ಏರ್ಪಡಿಸಿದ್ದ ಪ್ರೋ| ಬಿ.ಕೃಷ್ಣಪ್ಪನವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದರು.70ರ ದಶಕದಲ್ಲಿ ರಾಜ್ಯದಲ್ಲಿ ದಲಿತರು ಕೆಳವರ್ಗದವರು ಮತ್ತು ಶೋಷಿತರ ಮೇಲಿನ ದಬ್ಬಾಳಿಕೆ, ದೌರ್ಜನ್ಯ, ಶೋಷಣೆ ಮಿತಿ ಮೀರಿತ್ತು. ಮೇಲ್ವರ್ಗದ ಜನರು ಕೆಳವರ್ಗದ ಜನರನ್ನು ಪ್ರಾಣಿಗಳಿಗಿಂತಲೂ ತುಚ್ಚವಾಗಿ ಕಾಣುತ್ತಿದ್ದರು ಎಂದು ದೂರಿದರು.

ದಲಿತರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರೋ| ಬಿ.ಕೃಷ್ಣಪ್ಪನವರು ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿದರು. ದಲಿತರು ಮತ್ತು ಶೋಷಿತರಲ್ಲಿ ಹೋರಾಟ ಮತ್ತು ಸ್ವಾಭಿಮಾನ ಕಿಚ್ಚು ಹಚ್ಚಿದರು. ಕೆಳವರ್ಗದವರಲ್ಲಿ ಜಾಗೃತಿ ಮೂಡಿಸಿ ದರು ಎಂದರು.
ಪ್ರೋ|ಬಿ.ಕೃಷ್ಣಪ್ಪನವರು ಇಲ್ಲದಿದ್ದಲ್ಲಿ ರಾಜ್ಯದಲ್ಲಿ ದಲಿತ ಸಮುದಾಯಕ್ಕೆ ಅಂಬೇಡ್ಕರ್ ಅವರ ವಿಚಾರಧಾರೆಗಳೇ ತಿಳಿಯುತ್ತಿರಲಿಲ್ಲ. ಹಾಗಾಗೀ ಕೃಷ್ಣಪ್ಪನವರನ್ನು ದಲಿತ ವರ್ಗ ಮರೆ ಯಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಹಂಪಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಪ್ರೋ| ಬಿ.ಎಂ.ಪುಟ್ಟಯ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ, ಓದುವ ಹಠ ಮತ್ತು ಛಲ ಇದ್ದಲ್ಲಿ ಎಲ್ಲಾ ಕೊರತೆಗಳ ನಡುವೆಯೂ ನಾವು ವಿದ್ಯಾವಂತರಾಗಬಹುದು ಎಂದರು.
ಹೆಚ್ಚು ಅಂಕಗಳಿಸಲು ಒಳ್ಳೇಯ ಶಾಲೆ, ಒಳ್ಳೇಯ ಶಿಕ್ಷಕರು ಅಥವಾ ಮನೆಪಾಠ ಅಗತ್ಯ ವಿಲ್ಲ, ಹೆಚ್ಚು ಅಂಕಗಳಿಸಲು ಓದಿನ ಮೇಲೆ ಪ್ರೀತಿಯಿದ್ದರೇ ಸಾಕು ಎಂದರು.
ಜಿಲ್ಲಾ ಸಹೋದರತ್ವ ಸಮಿತಿ ಅಧ್ಯಕ್ಷೆ ಕೆ.ಬಿ.ಸುಧಾ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರೋ|ಬಿ. ಕೃಷ್ಣಪ್ಪ ಅವರ ಬದುಕು, ಸಂದೇಶ ಮತ್ತು ವಿಚಾರಧಾರೆಗಳನ್ನು ವಿವರಿಸಿದರು.
ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಅಧ್ಯಕ್ಷತೆವಹಿಸಿದ್ದರು. ಕಾರ್ಯ ಕ್ರಮದಲ್ಲಿ ಸಹೋದರತ್ವ ಸಮಿತಿ ಜಿಲ್ಲಾ ಖಜಾಂಚಿ ಅಸ್ಮಾ ಪರ್ವಿನ್, ಬಿಎಸ್‍ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ಕಚೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಜಿಲ್ಲಾ ಕಾರ್ಯದರ್ಶಿ ಟಿ.ಕೆ.ಮಂಜುನಾಥ್, ಪಕ್ಷದ ಮುಖಂಡರಾದ ಕಲಾವತಿ, ಕುಸುಮ, ಕೆ.ಎಸ್.ಮಂಜುಳಾ, ಪಿ.ವಿ.ತಂಬನ್,

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!