May 8, 2024

MALNAD TV

HEART OF COFFEE CITY

ಯೋಗ ಆರೋಗ್ಯಕ್ಕೆ ಸಹಕಾರಿ: ಡಾ| ಗೀತಾ

1 min read

ಚಿಕ್ಕಮಗಳೂರು: ಪ್ರತಿ ವರ್ಷದಂತೆ ಜೂ.21ರಂದು 8ನೇ ಅಂತಾರಾಷ್ಟ್ರೀಯ ಯೋಗ ದಿನಾಚ ರಣೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಮೂಡಿಗೆರೆ ತಾಲ್ಲೂಕಿನ ದೇವವೃಂದ ಗ್ರಾಮದ ಐತಿಹಾಸಿಕ ಶ್ರೀ ಪ್ರಸನ್ನ ರಾಮೇಶ್ವರ ದೇವಸ್ಥಾನ ಆವರಣದಲ್ಲಿ ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆ, ಪ್ರಜಾಪಿತ ಈಶ್ವರೀಯ ಬ್ರಹ್ಮಕುಮಾರಿಸ್ ವತಿಯಿಂದ ಯೋಗೋತ್ಸವ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ|ಗೀತಾ ಮಾತನಾಡಿ, ಸರ್ಕಾರ ದ ಮಾರ್ಗಸೂಚಿಯಂತೆ ಜೂ.20ರ ವರೆಗೆ ಜಿಲ್ಲೆಯ ವಿವಿಧ ಐತಿಹಾಸಿಕ ಸ್ಥಳಗಳು ಒಳ ಗೊಂಡಂತೆ ಪ್ರಮುಖ ಸ್ಥಳಗಳಲ್ಲಿ ಯೋಗಾಭ್ಯಾಸ ಕಾರ್ಯಕ್ರಮ ನಡೆಸಲಾಗುವುದು. ಈ ಮೂಲಕ ಸಾರ್ವಜನಿಕರಲ್ಲಿ ಯೋಗದ ಮಹತ್ವವನ್ನು ಆರೋಗ್ಯ ಸಲಹೆ, ಮಾರ್ಗದರ್ಶನ ನೀಡಲಾಗುವುದು ಎಂದರು.

ಯೋಗ ಆರೋಗ್ಯ ವೃದ್ಧಿಗೆ ಸಹಕಾರಿ. ಆ ನಿಟ್ಟಿನಲ್ಲಿ ಜಿಲ್ಲೆಯ ಐತಿಹಾಸಿಕ ಸ್ಥಳವಾದ ಬಗ್ಗವಳ್ಳಿ ಯೋಗನರಸಿಂಹ ದೇವಸ್ಥಾನ, ಅಮೃತಪುರ ಅಮೃತೇಶ್ವರ, ಬೆಳವಾಡಿ ಸೇರಿದಂತೆ ವಿವಿಧೆಡೆ ಗಳಲ್ಲಿ ಯೋಗೋತ್ಸವ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ಯೋಗಾಭ್ಯಾಸವನ್ನು ರೂಢಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಸನ್ನ ರಾಮೇಶ್ವರ ದೇವಸ್ಥಾನ ಆವರಣದಲ್ಲಿ ಯೋಗಾಭ್ಯಾಸ ಮಾಡಿದರು. ಚಿಕ್ಕಮಗಳೂರು ಬ್ರಹ್ಮಕುಮಾರಿ ಈಶ್ವರೀಸ್ ಸಂಸ್ಥೆ ಸಂಚಾಲಕಿ ಭಾಗ್ಯ ಧ್ಯಾನ ಕಾರ್ಯಕ್ರಮ ನಡೆಸಿಕೊಟ್ಟರು. ಸುಮಿತ್ರಾ, ನಾಗಪ್ಪ, ಸುರೇಂದ್ರ, ಮುತ್ತಣ್ಣ, ದಿವಾಕರಭಟ್, ಸುಮಾ, ಪುಷ್ಪಾ ಮೋಹನ್, ಸುಮಿತ್ರ ಪ್ರಕೃತಿ ಯೋಗ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿನೋದ್, ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಪಟೇಲ್, ಪ್ರಸನ್ನ ರಾಮೇಶ್ವರ ದೇವಸ್ಥಾನ ಟ್ರಸ್ಟ್‍ನ ಅಧ್ಯಕ್ಷ ಚಿಪ್ರಗುತ್ತಿ ಪ್ರಶಾಂತ, ಡಾ|ಉಮೇಶ್ ಭಟ್, ಡಾ|ರೂಪಾ ಭಟ್, ಡಾ| ಪವನ, ಡಾ| ಕಾವ್ಯಶ್ರೀ, ದೇವ ವೃಂದ ಆಯುಷ್ ಕ್ಷೇಮ ಕೇಂದ್ರದ ವೈದ್ಯಾಧಿಕಾರಿ ಡಾ|ಗೌತಮ ಕೊಲ್ಹಾರ್, ದೇವವೃಂದ, ಅಂಗಡಿ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!