May 15, 2024

MALNAD TV

HEART OF COFFEE CITY

ಯಾರೋ ದೇವೇಗೌಡರಿಗೆ 90 ಆಯ್ತು ಅಂದ್ರು, ನಂಗಿನ್ನು 90 ಮುಟ್ಟೇ ಇಲ್ಲ : ಮಾಜಿ ಪ್ರಧಾನಿ ದೇವೇಗೌಡ

1 min read

 

ಚಿಕ್ಕಮಗಳೂರು: ಜೆಡಿಎಸ್ ಪಕ್ಷವನ್ನ ಅಧಿಕಾರಕ್ಕೆ ತಂದು ಕೊನೆ ಉಸಿರು ಬಿಡಬೇಕೆಂಬುದೇ ನನ್ನ ಹಠ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪಕ್ಷವನ್ನ ಅಧಿಕಾರಕ್ಕೆ ತರುವ ಆಸೆಯನ್ನ ವ್ಯಕ್ತಪಡಿಸಿದ್ದಾರೆ. ಅವರಿಂದು ಪಕ್ಷದ ಜನತಾ ಜಲಧಾರೆ ಹಾಗೂ ಪಕ್ಷದ ಕಾರ್ಯಕರ್ತರ ಸಭೆಗೆ ಆಗಮಿಸಿದ್ದರು. ನಗರದ ಎ.ಐ.ಟಿ. ವೃತ್ತದ ಬಳಿಯ ಒಕ್ಕಲಿಗರ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಯಾರೋ ನನಗೆ 90 ವರ್ಷವಾಗಿದೆ ಎಂದು ಹೇಳಿದರು. ನನಗೆ 90 ಇನ್ನು ಮುಟ್ಟೇ ಇಲ್ಲ ಎಂದು ದೇವೇಗೌಡರ ವಯಸ್ಸಿನ ಬಗ್ಗೆ ಕಾಮೆಂಟ್ ಮಾಡಿದವರಿಗೆ ಟಾಂಗ್ ಕೊಟ್ಟಿದ್ದಾರೆ. ಒಂದು ಪ್ರಾದೇಶಿಕ ಪಕ್ಷವನ್ನ ಉಳಿಸಿ ಅಧಿಕಾರಕ್ಕೆ ತರಬೇಕು. ಅದೇ ನನ್ನ ಕೊನೆ ಆಸೆ. ಪ್ರಾದೇಶಿಕ ಪಕ್ಷವನ್ನ ಅಧಿಕಾರಕ್ಕೆ ತಂದು ನನ್ನ ಕೊನೆ ಉಸಿರು ಬಿಡಬೇಕೆಂಬುದು ನನ್ನ ಹಠ ಎಂದು ಪಕ್ಷವನ್ನ ಮತ್ತೊಮ್ಮೆ ಅಧಿಕಾರಕ್ಕೆ ತರಲು ಪಣ ತೊಟ್ಟಿದ್ದಾರೆ.

ಓರ್ವ ರಾಜಕೀಯ ಪಕ್ಷದ ಮುಖಂಡನಾಗಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಎಲ್ಲಿ ತಪ್ಪುತ್ತಿದ್ದೇವೆ, ಪಕ್ಷವನ್ನ ಉಳಿಸಿಕೊಳ್ಳಲು ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ನನ್ನ ಮನದಲ್ಲಿ ತುಂಬಾ ಆತಂಕ ಇದೆ ಎಂದರು. ನನ್ನ ಜೀವನದಲ್ಲಿ ಕೇವಲ ನೀರಾವರಿ ಯೋಜನೆಗಳಿಗಾಗಿ ಹೋರಾಟ ಮಾಡಿಲ್ಲ. ನನ್ನ ಜೀವನೇ ಹೋರಾಟ ಎಂದರು. ಈ ದೇಶವನ್ನ ಹಿಂದೂ ರಾಷ್ಟ್ರ ಮಾಡಬೇಕು ಅಂತಾರೆ. ನಾನೇನು ಹಿಂದೂ ಅಲ್ವಾ. ನಾನು ನನ್ನ ಮನೆಯಲ್ಲಿ ದಿನಕ್ಕೆ ಎರಡು ಗಂಟೆ ಪ್ರಾರ್ಥನೆ ಮಾಡುತ್ತೇನೆ ಎಂದರು. ಸಭೆಯಲ್ಲಿ ನಾನು ನಿಂತುಕೊಂಡೆ ಮಾತನಾಡುತ್ತೇನೆ ಎಂದು ಹೇಳಿದೆ, ಆದರೆ, ಎಸ್.ಎಲ್. ಭೋಜೇಗೌಡರು ಕೂತು ಮಾತನಾಡಿ ಎಂದರು. ಅದಕ್ಕೆ ಕೂತು ಮಾತನಾಡುತ್ತಿದ್ದೇನೆ. ಕೂತು-ನಿಂತು ಹೇಗೆ ಮಾತನಾಡಿದರು ಒಂದೇ ಎಂದು ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಕರುಣಾನಿಧಿಯವರ ಉದಾಹರಣೆ ಕೊಟ್ಟರು. ಕರುಣಾನಿಧಿಯವರು ಮೂರು ಚುನಾವಣೆಯನ್ನ ವೀಲ್ ಚೇರ್ ಮೇಲೆ ಕೂತು ಮಾಡಿದ್ದರು. ಸಿಎಂ ಕೂಡ ಆಗಿದ್ದರು. ಸೋತರು.

ಒಂದು ಪ್ರಾದೇಶಿಕ ಪಕ್ಷವನ್ನ ಬಲವಾಗಿ ಕಟ್ಟಿ ಬೆಳೆಸಿದರು. ಬಳಿಕ ಲಕ್ಷಾಂತರ ಕಾರ್ಯಕರ್ತರು ಅವರ ಪಾರ್ಥೀವ ಶರೀರವನ್ನ ಕಳಿಸಿಕೊಟ್ಟರು. ಕಾರ್ಯಕರ್ತರು ಮೂರು ದಿನ ಕ್ಯೂ ನಿಂತಿದ್ದರು. ಈ ಪಕ್ಷವನ್ನ ಬಲವಾಗಿ ಕಟ್ಟಿ ಬೆಳೆಸಿದವರು ಇಂದು ತೀರಿಹೋಗಿದ್ದಾರೆ. ಚಿಕ್ಕಮಗಳೂರಿನಲ್ಲಿ ದೇವೇಗೌಡ ಮುಖ್ಯಮಂತ್ರಿ ಆಗಲು ನಾಲ್ಕು ಶಾಸಕರನ್ನ ಗೆದ್ದು ಕೊಟ್ಟಿತ್ತು. ಭೋಜೇಗೌಡ, ನಾರಾಯಣ ಗೌಡ, ಲಕ್ಷ್ಮಯ್ಯ, ತಿಪ್ಪಯ್ಯ ಸೇರಿದಂತೆ ನಾಲ್ವರು ಗೆದ್ದಿದ್ದರು. ಅಂತಹಾ ದಿನವನ್ನ ನಾನು ನೋಡಲಿಲ್ಲ. ಜೆಡಿಎಸ್ ಭದ್ರಕೋಟೆಯಾಗಿ ಪಕ್ಷವನ್ನ ಬೆಳೆಸಿಕೊಂಡು ಬಂದು ಇಂದು ಸ್ವಲ್ಪ ಮಟ್ಟಿಗೆ ನನ್ನ ಮನದಲ್ಲಿ ನೋವಿದೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!