May 7, 2024

MALNAD TV

HEART OF COFFEE CITY

ಜಾನಪದ ಸಾಹಿತ್ಯ-ಸಂಸ್ಕøತಿ ಉಳಿಸದಿದ್ದರೆ ಆಪತ್ತು

1 min read

 

ಚಿಕ್ಕಮಗಳೂರು: ಆಧುನಿಕತೆಯಿಂದಾಗಿ ಅವಸಾನದ ಅಂಚಿಗೆ ತಲುಪಿರುವ ಗ್ರಾಮೀಣರ ಬದುಕು ಮತ್ತು ಜಾನಪದ ಕಲೆ, ಸಾಹಿತ್ಯ, ಸಂಸ್ಕøತಿಯನ್ನು ಸಂರಕ್ಷಿಸುವ ಕೆಲಸವಾಗದಿದ್ದರೆ ಯಾರಿಗೂ ಉಳಿಗಾಲವಿಲ್ಲವೆಂದು ಹಿರಿಯ ಜಾನಪದ ವಿದ್ವಾಂಸ ನಾಡೋಜ ಡಾ ಗೊ.ರು.ಚನ್ನಬಸಪ್ಪ ಎಚ್ಚರಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಜಾನಪದ ತೃತೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಓದು-ಬರಹ ಬಾರದ ನಮ್ಮ ಪೂರ್ವಿಕರು ಶ್ರಮದ ದುಡಿಮೆಯ ನಡುವೆ ಕಟ್ಟಿ ಬೆಳೆಸಿರುವ ಜಾನಪದ ಕಲೆ, ಸಾಹಿತ್ಯ, ಸಂಸ್ಕøತಿ ಆಧುನಿಕತೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ನಲುಗುತ್ತಿವೆ, ಹಳ್ಳಿಗಳು ಮತ್ತು ಗ್ರಾಮೀಣರೂ ಸಹ ಬದಲಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಹಳ್ಳಿಗಳ ಉದ್ಧಾರವಾದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಬಲವಾಗಿ ಪ್ರತಿಪಾದಿಸಿದ್ದರು, ಆದರೆ ಅದನ್ನು ಸರ್ಕಾರಗಳು ಅನುಷ್ಠಾನಕ್ಕೆ ತಾರದೆ ಗ್ರಾಮಗಳನ್ನು ನಿರ್ಲಕ್ಷಿಸಿ ನಗರಗಳನ್ನು ಅಭಿವೃದ್ಧಿ ಪಡಿಸಿದ್ದರಿಂದಾಗಿ ಹಳ್ಳಿಗಳು ಬದಲಾಗುತ್ತಿವೆ ಎಂದರು.
ನಮ್ಮ ಹಳ್ಳಿಗಳಿಂದ ಶೇ.80 ರಷ್ಟು ಜನರು ನಗರಗಳಿಗೆ ತೆರಳಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ, ಸಕಲ ಸವಲತ್ತುಗಳನ್ನೂ ಹೊಂದಿ ಐಷಾರಾಮಿಯಾಗಿ ಬದುಕುತ್ತಿರುವ ಅವರುಗಳು ತಾವು ಹುಟ್ಟಿ ಬೆಳೆದ ಹಳ್ಳಿಗಳನ್ನು ನಿರ್ಲಕ್ಷಿಸುತ್ತಿರುವುದು ಅದರತ್ತ ತಿರುಗಿ ನೋಡದಿರುವುದು ದುರಂತವೆಂದರು. ಹಳ್ಳಿಗರ ಬದುಕು, ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿಯನ್ನು ಯಾರೂ ಮರೆಯಬಾರದು, ಗ್ರಾಮಗಳಿಂದ ವಲಸೆ ಹೋಗಿ ನಗರದಲ್ಲಿ ವಾಸಿಸುತ್ತಿರುವವರು ತಾವು ಹುಟ್ಟಿ ಬೆಳೆದ ಹಳ್ಳಿಗಳ ಏಳಿಗೆಗೆ ದುಡಿಯಬೇಕೆಂದು ಕಿವಿಮಾತು ಹೇಳಿದರು.
ಸಮ್ಮೇಳನಾಧ್ಯಕ್ಷ ಡಾ.ಮಾಳೇನಹಳ್ಳಿ ಬಸಪ್ಪ ಮಾತನಾಡಿ, ಆಧುನಿಕತೆಯ ಬಿರುಗಾಳಿಯ ನಡುವೆಯೂ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸಿರುವ ಹಿರಿಯ ಜಾನಪದ ಕಲಾವಿದರು ಇಂದು ದುಡಿಯಲಾಗದೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!