April 28, 2024

MALNAD TV

HEART OF COFFEE CITY

ಕಲ್ಲುದೊಡ್ಡಿಯಲ್ಲಿ ಸಾಮೂಹಿಕ ಸ್ವಚ್ಚತಾ ಆಂದೋಲನಾ

1 min read

 

ಚಿಕ್ಕಮಗಳೂರು: ನಗರದ 18 ನೇ ವಾರ್ಡ್‍ನ ಕಲ್ಲುದೊಡ್ಡಿ ಗ್ರಾಮದಲ್ಲಿ ನಗರಸಭೆ ವತಿಯಿಂದ ಶುಕ್ರವಾರ ಸ್ವಚ್ಚತಾ ಆಂದೋಲನಾ ನಡೆಸಲಾಯಿತು.ನಗರಸಭೆಯ ಪೌರಕಾರ್ಮಿಕರು, ಅಧಿಕಾರಿ ಸಿಬ್ಬಂದಿಗಳು, ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರ ಮಾರ್ಗದರ್ಶನದಲ್ಲಿ ಕಾರ್ಮಿಕರು ಸಾಮೂಹಿಕವಾಗಿ ಸ್ವಚ್ಚತಾಕಾರ್ಯ ಕೈಗೊಂಡರು.ಸ್ವಚ್ಚತಾ ಆಂದೋಲನ ಉದ್ದೇಶಿಸಿ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ ನಗರದ ಕಲ್ಲುದೊಡ್ಡಿ ಬಡಾವಣೆಯು ಹಿಂದುಳಿದ ಮತ್ತು ಅನೈರ್ಮಲ್ಯದಿಂದ ಕೂಡಿದ ವಾರ್ಡ್ ಇದಾಗಿದೆ. ಕಳೆದ ಅವಧಿಯಲ್ಲಿ ಕಾಂಗ್ರೆಸ್‍ನ ಜನಪ್ರತಿನಿಧಿಗಳಿದ್ದರೂ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ವಾರ್ಡ್ ಸಂಪೂರ್ಣವಾಗಿ ಹಿಂದುಳಿದಿದೆ ಎಂದು ಆರೋಪಿಸಿದರು.

ನಗರದಲ್ಲಿ ಪ್ರತಿವಾರವೂ ವಾರ್ಡ್‍ಗಳಲ್ಲಿ ಸ್ವಚ್ಚತಾ ಆಂದೋಲನಾ ನಡೆಸುತ್ತಿದ್ದು ಇದೀಗ ಕಲ್ಲುದೊಡ್ಡಿ ಬಡಾವಣೆಯಲ್ಲಿ ಆದ್ಯತೆ ಮೇರೆಗೆ ಸ್ವಚ್ಚತಾ ಆಂದೋಲನಾ ಕೈಗೊಳ್ಳಲಾಗಿದೆ. ಅಭಿವೃದ್ಧಿ ಹಾಗೂ ಸ್ವಚ್ಚತೆಯನ್ನು ಧ್ಯೇಯವಾಗಿರಿಸಿಕೊಂಡು ಕೆಲಸ ಮಾಡಲಾಗುತ್ತಿದೆ. ಪ್ರತಿಪಕ್ಷಗಳು ಟೀಕೆ ಮಾಡುವುದನ್ನು ಬಿಟ್ಟು ಅಭಿವೃದ್ಧಿಯನ್ನು ಒಮ್ಮೆ ಕಣ್ಣುಬಿಟ್ಟು ನೋಡಬೇಕಿದೆ ಎಂದರು.
ಕಸಸಂಗ್ರಹಣೆ ಶುಲ್ಕ ಹೆಚ್ಚಳಗೊಳಿಸಲಾಗಿದೆ ಎಂದು ನಗರಸಭೆ ಎದುರು ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ನಗರದಲ್ಲಿ ಹೊಸ ಆಡಳಿತ ವ್ಯವಸ್ಥೆ ಬಂದ ಬಳಿಕ ಅಭಿವೃದ್ಧಿ ನಿರಂತರವಾಗಿ ನಡೆಯುತ್ತಿದೆ, ಪ್ರತಿಪಕ್ಷಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಂತೆ ಕಾಣುತ್ತಿವೆ.ನಗರಸಭೆಗೆ ಹೊಸ ಆಡಳಿತ ಮಂಡಳಿ ಅಧಿಕಾರಚುಕ್ಕಾಣಿಹಿಡಿದಿದ್ದು, ನಗರದ ಅಭಿವೃದ್ಧಿ ಸÀಹಿಸದೆ ಟೀಕೆ, ಪ್ರತಿಭಟನೆ ನಡೆಸುತ್ತಿವೆ ಎಂದು ಆರೋಪಿಸಿದರು.

ನಗರಸಭೆ ಸದಸ್ಯ ಮಣಿಕಂಠ ಮಾತನಾಡಿ, ಹಲವಾರು ವರ್ಷಗಳಿಂದ ಕಲ್ಲುದೊಡ್ಡಿ ಬಡಾವಣೆ ಅಭಿವೃದ್ಧಿಯಿಲ್ಲದೇ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು.ಈಗ ನಗರಸಭೆ ಅಧ್ಯಕ್ಷರು ಆದ್ಯತೆ ನೀಡಿ ಸ್ವಚ್ಚತೆ ಹಾಗೂ ಮೂಲಸೌಕರ್ಯಕ್ಕೆ ಒತ್ತು ನೀಡಿದ್ದಾರೆ, ಬಡಾವಣೆಯಲ್ಲಿ ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.ಯುಜಿಡಿ ಹಾಗೂ ಅಮೃತ್ ಕಾಮಗಾರಿಗಳು ನಗರದಲ್ಲಿ ವೇಗದಲ್ಲಿ ಸಾಗುತ್ತಿವೆ. ಇದರೊಂದಿಗೆ ನೀರಿನ ಸಮಸ್ಯೆ ಈ ಭಾಗದಲ್ಲಿ ಬಗೆಹರಿಯುವ ವಿಶ್ವಾಸವಿದೆ ಎಂದರು.ನಗರ ಆಶ್ರಯ ಸಮಿತಿ ಸದಸ್ಯ ರಾಜೇಶ್ ಮಾತನಾಡಿ ಈ ಬಡಾವಣೆಯಲ್ಲಿ ಬಹುತೇಕರು ನಿರಾಶ್ರಿತರಿದ್ದು ಮನೆ ದಾಖಲಾತಿ, ಹಕ್ಕುಪತ್ರವಿಲ್ಲದೇ ಅನಧಿಕೃತವಾಗಿ ಮನೆ ನಿರ್ಮಾಣ ಮಾಡಿಕೊಂಡಿದ್ದು, ಅಂತಹ ಮನೆಗಳನ್ನು ನಗರಸಭೆಯಿಂದ ತೆರವುಗೊಳಿಸಿದ್ದು ಅರ್ಹ ವಸತಿ ರಹಿತ ಫಲಾನುಭವಿಗಳಾಗಿದ್ದಲ್ಲಿ ಪರಿಶೀಲಿಸಿ ಶಾಶ್ವತ ಪರಿಹಾರವಾಗಿ ಮನೆ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ನಗರಸಭೆ ಆಯುಕ್ತ ಬಿ.ಸಿ. ಬಸವರಾಜ್, ಇಂಜಿನಿಯರ್ ಮಿಥುನ, ಆರೋಗ್ಯ ಪರಿವೀಕ್ಷಕ ವೆಂಕಟೇಶ್, ಶ್ರೀನಿವಾಸ್, ಶಶಿರಾಜ್‍ಅರಸ್, ಸೂಪರ್‍ವೈಸರ್‍ಗಳಾದ ಮುರುಗೇಶ್, ಸುನಿಲ್‍ಕುಮಾರ್, ವಿವೇಕ್, ಸತೀಶ್, ಮಂಜುನಾಥ್, ರಮೇಶ್, ಅಣ್ಣಯ್ಯ, ಶ್ರೀನಿವಾಸ್, ಭರತ್‍ಕುಮಾರ್ ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!