May 3, 2024

MALNAD TV

HEART OF COFFEE CITY

ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಲಿ_ಸಿ.ಟಿ ರವಿ

1 min read

 

ಚಿಕ್ಕಮಗಳೂರು: ಕಾಂಗ್ರೆಸ್ ನಲ್ಲಿ ಒಂದು ಸಾರಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಘೋಷಣೆ ಮಾಡಲಿ. ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದರೆ ಡಿ.ಕೆ ಶಿವಕುಮಾರ್ ಹೊರಗೆ ಬರ್ತಾರೆ. ಡಿ.ಕೆ ಶಿವಕುಮಾರ್ ಆಯ್ಕೆ ಮಾಡಿದರೆ ಸಿದ್ದರಾಮಯ್ಯ ಅವರೇ ಪಾರ್ಟಿ ಬಿಡ್ತಾರೆ. ಇವರಿಬ್ಬರಲ್ಲಿ ಯಾರೊಬ್ಬರನ್ನಾದ್ರು ಆಯ್ಕೆ ಮಾಡಿದರೆ ಪರಮೇಶ್ವರ್ ಸೇಡು ತೀರಿಸಿಕೊಳ್ಳಲು ಕಾಯ್ತಾ ಇದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ ರವಿ ಹೇಳಿದರು.ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆಗೆ ನಗರದಲ್ಲಿ ಬುಧವಾರ ಪ್ರತಿಕ್ರಿಯಿಸಿದ ಅವರು, ಅವರ ಪಕ್ಷದಲ್ಲಿಯೇ ಯಾರು ಇರ್ತಾರೆ ಯಾರು ಹೋಗ್ತಾರೆ ಎಂಬುದು ಗೊತ್ತಿಲ್ಲ. ಸಿದ್ದರಾಮಯ್ಯ, ಡಿ,ಕೆ ಶಿವಕುಮಾರ್ ಎಡ ಬಲದಲ್ಲಿ ಇದ್ದವರೇ ಈ ಹಿಂದೆ ಹೋದ್ರು ಎಂದು ಪ್ರಶ್ನಿಸಿದ ಅವರು ಹಾಗಾದ್ರೆ ನಾನೇ ಕಳಹಿಸುದ್ದು ಅಂತಾ ತಾಕತ್ತಿದ್ದರೆ ಹೇಳಲಿ ಎಂದು ಸವಾಲು ಹಾಕಿದರು.

ನಮ್ಮ ಪಕ್ಷದ ಶಾಸಕರನ್ನು ಭೇಟಿ ಮಾಡಿದ್ದಾರೆ ಎಂದರೆ ಆತಂಕ ಪಡುವ ಅಗತ್ಯ ಇಲ್ಲ. ನಮ್ಮದು ಕಾರ್ಯಕರ್ತರ ಆಧಾರದ ಪಾರ್ಟಿ ನಮ್ಮ ಪಕ್ಷ ಕಾಂಗ್ರೆಸ್ ನಷ್ಟು ದುರ್ಬಲ ಅಲ್ಲ ಎಂದರು.2019ರ ವಿಧಾನಸಭೆ ಚುನಾವಣೆಗೆ ಮೊದಲು 26 ಶಾಸಕರು ಕಾಂಗ್ರೆಸ್ ಸೇರ್ತಾರೆ ಎಂದು ಹೇಳಿದ್ದರು. ಆದರೆ ಬಿಟ್ಟವರು ಕಾಂಗ್ರೆಸ್ ಶಾಸಕರು. ಅವರ ಬಳಿ ಯಾರ ಪಟ್ಟಿ ಇದೆ ಎಂದು ಬಹಿರಂಗ ಪಡಿಸಲಿ ಅವರಿಗೆ ಅವರ ಪಾರ್ಟಿ ಶಾಸಕರನ್ನು ಏಕೆ ಉಳಿಸಿಕೊಳ್ಳಲು ಆಗಲಿಲ್ಲ ಎಂಬ ಬಗ್ಗೆ ಸಂಶೋಧನೆ ಮಾಡಲಿ ಸುಮ್ಮನೆ ಪ್ರಚಾರಕ್ಕೆ ಈ ರೀತಿ ಹೇಳಿಕೆ ಸರಿಯಲ್ಲ ಎಂದು ಹೇಳಿದರು

ಪಂಚರಾಜ್ಯ ಚುನಾವಣೆಯಲ್ಲಿ ವಿವಿಧ ಸಂಸ್ಥೆಗಳ ಸರ್ವೇಗಳು ನಾಲ್ಕು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದೆ. ಗೋವಾದಲ್ಲಿಯೂ ಸಹ ಮತ್ತೆ ಮೂರನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವ ವಾತಾವರಣ ಇದೆ. ಜೊತೆಗೆ ಉತ್ತರ ಪ್ರದೇಶ, ಉತ್ತರ ಖಾಂಡ್, ಮಣಿಪುರದಲ್ಲಿಯೂ ಸಹ ಅಧಿಕಾರಕ್ಕೆ ಬರುತ್ತೇವೆ. ಅದೇ ರೀತಿ ಪಂಜಾಬ್‍ನಲ್ಲಿಯೂ ಸಹ ವೋಟ್ ಶೇರಿಂಗ್ ಹಾಗೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತವೆ. ಇಡೀ ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಪಂಜಾಬ್‍ನಲ್ಲಿ ತನ್ನ ಅಧಿಕಾರ ಕಳೆದುಕೊಳ್ಳಲಿದೆ ಎಂದರು

* ವಾರ್ಡ್ 25ರ ಗಲಾಟೆ ಸಮರ್ಥನೆ ಮಾಡಲ್ಲ

ನಗರಸಭೆ ವ್ಯಾಪ್ತಿಯ ವಾರ್ಡ್ ನಂ 25 ರಲ್ಲಿ ನಗರಸಭೆ ಸದಸ್ಯ ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ಜಗಳ ದುರಾದೃಷ್ಟಕರ. ಘಟನೆಯನ್ನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಈ ಕುರಿತು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಪ್ರತಿಕ್ರಿಯಿಸಿ ಶಾಸಕರ ಕುಮ್ಮಕ್ಕು ಇದೆ ಎಂಬ ಅನುಮಾನ ವ್ಯಕ್ತಪಡಿದ್ದು ನಾನು ಶಾಸಕನಾಗಿ ನಾಲ್ಕು ಅವಧಿಯಲ್ಲಿ ಆ ರೀತಿಯ ಸಣ್ಣ ರಾಜಕೀಯ ಮಾಡಿಲ್ಲ. ನನ್ನ ಬಗ್ಗೆ ಆ ವಾರ್ಡ್ ಸದಸ್ಯ ಲಕ್ಷ್ಮಣ್ ಅವರಿಗೂ ಗೊತ್ತಿದೆ ಇಬ್ಬರ ಬಳಿಯೂ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಹೇಳಿಕೆ ರಾಜಕೀಯ ಪೇರಿತ ಎಂದರು.

ನಗರಸಭೆಯಲ್ಲಿ ಪ್ರತಿ ಬಾರಿ ನಮ್ಮ ಮತಗಳಿಕೆ ಹೆಚ್ಚಾಗಿದೆ. ಈ ರೀತಿ ನಾನು ನಡೆದುಕೊಂಡಿದ್ದರೆ ಜನ ಪಾಠ ಕಲಿಸುತ್ತಿದ್ದರು. ಹೊಸದಾಗಿ ಹಾಕಿರುವ ಡಾಂಬರ್ ರಸ್ತೆಯನ್ನು ಅಗೆಯುವ ವಿಚಾರವಾಗಿ ಗಲಾಟೆ ಆಗಿದೆ. ಆದರೆ ಇಬ್ಬರು ಸಾಮಾಧಾನವಾಗಿ ಮಾತನಾಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಕುಡಿಯುವ ನೀರಿನ ವಿಚಾರಕ್ಕೆ ಅಡ್ಡಿ ಪಡಿಸಬಾರದು ಎಂಬುದನ್ನು ಇವರು ಸಹ ಯೋಚನೆ ಮಾಡ¨ಹುದಿತ್ತು. ಸಾಮಾನ್ಯವಾಗಿ ಹೊಸ ರಸ್ತೆ ಅಗೆಯುವ ಸಂದರ್ಭದಲ್ಲಿ ಈ ರೀತಿ ಸಮಸ್ಯೆ ಉಂಟಾಗವುದು ಸಾಮಾನ್ಯ ಜಗಳವನ್ನು ಸಮರ್ಥನೆ ಮಾಡುವುದಿಲ್ಲ ಇಬ್ಬರ ಜೊತೆಗೂ ಮಾತನಾಡಿದ್ದೇನೆ ಎಂದು ಉತ್ತರಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!