May 15, 2024

MALNAD TV

HEART OF COFFEE CITY

ಏ.16: ಮೂಡಿಗೆರೆ ತಾಲೂಕಿನ ಗೋಣಿಬೀಡಿಗೆ ಜಲಧಾರೆಯ ಗಂಗಾರಥ ಆಗಮನ

1 min read

ಚಿಕ್ಕಮಗಳೂರು: ಜಾತ್ಯತೀತ ಜನತಾದಳ ಹಮ್ಮಿಕೊಂಡಿರುವ ಜನತಾ ಜಲಧಾರೆಯ ಗಂಗಾರಥ ಏ.16 ರಂದು ಮೂಡಿಗೆರೆ ತಾಲೂಕಿನ ಗೋಣಿಬೀಡಿಗೆ ಆಗಮಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ರಂಜನ್‍ಅಜಿತ್‍ಕುಮಾರ್ ಹೇಳಿದರು.ಸುದ್ದಿಗೋಷ್ಟಿಯಲ್ಲಿ  ಮಾತನಾಡಿ, ರಾಜ್ಯದ ಪ್ರಮುಖ ನದಿಗಳಿಂದ ನೀರು ಸಂಗ್ರಹಿಸಲು 15 ಗಂಗಾರಥವನ್ನು ನಿಯೋಜಿಸಲಾಗಿದೆ. ಜಿಲ್ಲೆಗೆ ಬರುವ ರಥಕ್ಕೆ ಪೂರ್ಣಕುಂಭಸ್ವಾಗತ ನೀಡಲಾಗುವುದು.ಬಳಿಕ ಗೋಣಿಬೀಡಿನ ಅಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುವುದು. ನಂತರ ಜಾವಳಿಯಲ್ಲಿರುವ ಹೇಮಾವತಿ ನದಿ ಉಗಮ ಸ್ಥಾನದಲ್ಲಿ ಜಲ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.

ನಿನ್ನೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ನೇತೃತ್ವದ ಜನತಾಜಲಧಾರೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಚಾಲನೆನೀಡಿದ್ದು, ಜಿಲ್ಲೆಗೆ ಬರುವ ರಥವನ್ನು ತಾವು ಸೇರಿದಂತೆ ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ,ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಸುಧಾಕರಶೆಟ್ಟಿ ಸ್ವಾಗತಿಸುವರೆಂದರು.
ಜಾವಳಿಯಿಂದ ಕಳಸಕ್ಕೆ ತೆರಳಿ ಭದ್ರಾನದಿಯಿಂದ ಗಂಗೆ ಸಂಗ್ರಹಿಸುತ್ತಿದ್ದು, 2 ದಿವಸ ಮೂಡಿಗೆರೆಯಲ್ಲಿ ರಥ ಉಳಿದುಕೊಳ್ಳುವುದು. ಏ.18 ರಂದು ಶೃಂಗೇರಿ ತಾಲೂಕಿಗೆ ತೆರಳುವುದು ಅಲ್ಲಿ ತುಂಗಾನದಿಯಲ್ಲಿ ನೀರು ಸಂಗ್ರಹಿಸಲಾಗುವುದು, 19ಕ್ಕೆ ಕೊಪ್ಪದಲ್ಲಿ ಸಂಚರಿಸಿ, 21ರಂದುಯ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ತೆರಳಲಿದೆ. ಅಲ್ಲಿಂದ 22 ಕ್ಕೆ ತರೀಕೆರೆ ತಾಲೂಕಿನ ಲಕ್ಕವಳ್ಳಿಗೆ ಬಂದುಭದ್ರಾ ಜಲಾಶಯದಲ್ಲಿ ಗಂಗಾಜಲ ಸಂಗ್ರಹಿಸಿ 22ಕ್ಕೆ ಭದ್ರಾವತಿಗೆ ತೆರಳಲಿದೆ ಎಂದು ಮಾಹಿತಿ ನೀಡಿದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ರಾಜ್ಯದ 185 ವಿಧಾನಸಭಾ ಕ್ಷೇತ್ರದ 94 ಸ್ಥಳದಲ್ಲಿಗಂಗಾಜಲ ಸಂಗ್ರಹಿಸುತ್ತಿದ್ದು, 596 ಕಿ.ಮೀ. ಕ್ರಮಿಸಬೇಕಾಗಿದೆ. ಕಡೂರು ತಾಲೂಕಿನಲ್ಲಿ ವೇದಾ ನದಿಯಲ್ಲೂ ನೀರು ಸಂಗ್ರಹಿಸುವ ಮೂಲಕ ರಥವನ್ನು ಬೀಳ್ಕೊಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ನದಿಗಳ ನೀರು ಸಂಪೂರ್ಣವಾಗಿ ಬಳಕೆಯಾಗಿಲ್ಲ. ಶೇ.75ರಷ್ಟು ನೀರು ಬಳಕೆಗೆ ಸಮಗ್ರ ಚಿಂತನೆಯಾಗಿಲ್ಲ, ಜಲ ಸಂಪತ್ ಸಮಗ್ರಬಳಕೆಗೆ ಕೇಂದ್ರದ ಮೇಲೆ ಒತ್ತಡ ಹೇರಬೇಕಾಗಿದೆ. ಜೀವ ಮತ್ತು ಸಸ್ಯ ಜಗತ್ತಿಗೆ ನೀರು ಮುಖ್ಯವಾಗಿದ್ದು, ಅರಿವಿಗಾಗಿ ಜನಾಂದೋಲನಾ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಮಹಾಪ್ರಧಾನಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್, ಮೂಡಿಗೆರೆ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್, ಮುಖಂಡ ಅಶೋಕ್, ಕಾರ್ಮಿಕ ವಿಭಾಗದ ಮಾನುಮಿರಾಂಡ, ಯುವವಿಭಾಗದ ಜಿಲ್ಲಾಧ್ಯಕ್ಷ ಪ್ರೇಂಕುಮಾರ್ ಇದ್ದರು.ಜ್ಯದ ಪ್ರಮುಖ ನದಿಗಳಿಂದ ನೀರು ಸಂಗ್ರಹಿಸಲು 15 ಗಂಗಾರಥವನ್ನು ನಿಯೋಜಿಸಲಾಗಿದೆ. ಜಿಲ್ಲೆಗೆ ಬರುವ ರಥಕ್ಕೆ ಪೂರ್ಣಕುಂಭಸ್ವಾಗತ ನೀಡಲಾಗುವುದು.ಬಳಿಕ ಗೋಣಿಬೀಡಿನ ಅಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುವುದು. ನಂತರ ಜಾವಳಿಯಲ್ಲಿರುವ ಹೇಮಾವತಿ ನದಿ ಉಗಮ ಸ್ಥಾನದಲ್ಲಿ ಜಲ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.

ನಿನ್ನೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ನೇತೃತ್ವದ ಜನತಾಜಲಧಾರೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಚಾಲನೆನೀಡಿದ್ದು, ಜಿಲ್ಲೆಗೆ ಬರುವ ರಥವನ್ನು ತಾವು ಸೇರಿದಂತೆ ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ,ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಸುಧಾಕರಶೆಟ್ಟಿ ಸ್ವಾಗತಿಸುವರೆಂದರು.
ಜಾವಳಿಯಿಂದ ಕಳಸಕ್ಕೆ ತೆರಳಿ ಭದ್ರಾನದಿಯಿಂದ ಗಂಗೆ ಸಂಗ್ರಹಿಸುತ್ತಿದ್ದು, 2 ದಿವಸ ಮೂಡಿಗೆರೆಯಲ್ಲಿ ರಥ ಉಳಿದುಕೊಳ್ಳುವುದು. ಏ.18 ರಂದು ಶೃಂಗೇರಿ ತಾಲೂಕಿಗೆ ತೆರಳುವುದು ಅಲ್ಲಿ ತುಂಗಾನದಿಯಲ್ಲಿ ನೀರು ಸಂಗ್ರಹಿಸಲಾಗುವುದು, 19ಕ್ಕೆ ಕೊಪ್ಪದಲ್ಲಿ ಸಂಚರಿಸಿ, 21ರಂದುಯ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ತೆರಳಲಿದೆ. ಅಲ್ಲಿಂದ 22 ಕ್ಕೆ ತರೀಕೆರೆ ತಾಲೂಕಿನ ಲಕ್ಕವಳ್ಳಿಗೆ ಬಂದುಭದ್ರಾ ಜಲಾಶಯದಲ್ಲಿ ಗಂಗಾಜಲ ಸಂಗ್ರಹಿಸಿ 22ಕ್ಕೆ ಭದ್ರಾವತಿಗೆ ತೆರಳಲಿದೆ ಎಂದು ಮಾಹಿತಿ ನೀಡಿದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ರಾಜ್ಯದ 185 ವಿಧಾನಸಭಾ ಕ್ಷೇತ್ರದ 94 ಸ್ಥಳದಲ್ಲಿಗಂಗಾಜಲ ಸಂಗ್ರಹಿಸುತ್ತಿದ್ದು, 596 ಕಿ.ಮೀ. ಕ್ರಮಿಸಬೇಕಾಗಿದೆ. ಕಡೂರು ತಾಲೂಕಿನಲ್ಲಿ ವೇದಾ ನದಿಯಲ್ಲೂ ನೀರು ಸಂಗ್ರಹಿಸುವ ಮೂಲಕ ರಥವನ್ನು ಬೀಳ್ಕೊಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ನದಿಗಳ ನೀರು ಸಂಪೂರ್ಣವಾಗಿ ಬಳಕೆಯಾಗಿಲ್ಲ. ಶೇ.75ರಷ್ಟು ನೀರು ಬಳಕೆಗೆ ಸಮಗ್ರ ಚಿಂತನೆಯಾಗಿಲ್ಲ, ಜಲ ಸಂಪತ್ ಸಮಗ್ರಬಳಕೆಗೆ ಕೇಂದ್ರದ ಮೇಲೆ ಒತ್ತಡ ಹೇರಬೇಕಾಗಿದೆ. ಜೀವ ಮತ್ತು ಸಸ್ಯ ಜಗತ್ತಿಗೆ ನೀರು ಮುಖ್ಯವಾಗಿದ್ದು, ಅರಿವಿಗಾಗಿ ಜನಾಂದೋಲನಾ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಮಹಾಪ್ರಧಾನಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್, ಮೂಡಿಗೆರೆ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್, ಮುಖಂಡ ಅಶೋಕ್, ಕಾರ್ಮಿಕ ವಿಭಾಗದ ಮಾನುಮಿರಾಂಡ, ಯುವವಿಭಾಗದ ಜಿಲ್ಲಾಧ್ಯಕ್ಷ ಪ್ರೇಂಕುಮಾರ್ ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!