May 16, 2024

MALNAD TV

HEART OF COFFEE CITY

ಕಾರಿನ ಟೈರ್ ಸ್ಪೋಟ, ಗದ್ದೆಗೆ ಉರುಳಿದ ಕಾರು, ಇಬ್ಬರು ಸಾವು

1 min read

 

ಜಯಪುರ: ಹರಿಹರಪುರ ಸೇತುವೆ ಸಮೀಪದ ರಾಷ್ಟೀಯ ಹೆದ್ದಾರಿಯಲ್ಲಿ ಸೋಮವಾರ ತಡರಾತ್ರಿ ನಡೆದ ಕಾರು ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಅಗುಂಬೆಯಿಂದ ಕೊಪ್ಪಕ್ಕೆ ಬರುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದಲ್ಲಿದ್ದ ಗದ್ದೆಗೆ ಉರುಳಿಬಿದ್ದು ಅವಘಡ ಸಂಭವಿಸಿದೆ. ಕಾರಿನಲ್ಲಿ ಒಟ್ಟು ನಾಲ್ವರು ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಕೊಪ್ಪದ ಗುಣವಂತೆ ಮೆಡಿಕಲ್‌ ಮಾಲೀಕ ಗೋಳಿಕೊಪ್ಪದ ಜಿ.ಎಸ್.ರಾಜಶೇಖರ್‌ (50) ಹಾಗೂ ಚಿಕ್ಕಮಗಳೂರಿನ ಆಲ್ದೂರಿನ ಮಣಿಕಂಠ ಎಂಬುವವರು ಮೃತಪಟ್ಟಿದ್ದಾರೆ. ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಇಬ್ಬರೂ ದುರ್ಮರಣಕ್ಕೀಡಾಗಿದ್ದಾರೆ.

 

 

ಕಾರಿನ ಚಾಲಕ, ಹಾಗೂ ಇನ್ನೊಬ್ಬ ಪ್ರಯಾಣಿಕಗೆ ಗಾಯವಾಗಿದೆ. ಅವಘಡದಲ್ಲಿ ಮಾರುತಿ ಸ್ವಿಫ್ಟ್‌ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಹರಿಹರ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರ ತನಿಖೆಯಿಂದ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!