May 6, 2024

MALNAD TV

HEART OF COFFEE CITY

ವಿವಿಧ ಬೇಡಿಕೆಗೆ ಒತ್ತಾಯ, ಪರದೇಶಪ್ಪ ಮಠದ ನಿರಾಶ್ರಿತರಿಂದ ಪ್ರತಿಭಟನೆ

1 min read

ಚಿಕ್ಕಮಗಳೂರು: ಪರದೇಶಪ್ಪ ಮಠದ ಅರಣ್ಯ ಸಂತ್ರಸ್ಥರ ಸಭೆ ಕರೆಯಬೇಕು. ಅನುಷ್ಠಾನ ಸಮಿತಿ ಸಭೆ ಕೈಗೊಂಡಿರುವ ಅಸಮಂಜಸ ನಿರ್ಧಾರವನ್ನು ವಿರೋಧಿಸಿ ಸಂತ್ರಸ್ತರು ಬುಧವಾರ ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.ಪರದೇಶಪ್ಪ ಮಠದ ಅರಣ್ಯ ಸಂತ್ರಸ್ತರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಇಂದು ಧರಣಿ ನಡೆಸಿದ ಪರದೇಶಪ್ಪನ ಮಠದವರು, 15 ದಿನದೊಳಗೆ ಜಿಲ್ಲಾಧಿಕಾರಿಗಳು ಭದ್ರಾ ಪುನರ್ವಸತಿ ಯೋಜನೆ ಅನುಷ್ಟಾನ ಸಮಿತಿ ಸಭೆ ನಡೆಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಮೀಪ ಸಂತ್ರಸ್ಥರು ಕುಟುಂಬ ಸಮೇತ ಅನಿರ್ಧಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ.ಎರಡು ತಿಂಗಳ ಹಿಂದೆ ಸಂತ್ರಸ್ತರನ್ನೊಳಗೊಂಡ ಸಭೆ ನಡೆಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದು, ಸಂತ್ರಸ್ಥರನ್ನು ಕೈಬಿಟ್ಟು ಕೇವಲ ಅಧಿಕಾರಿಗಳ ಸಭೆ ನಡೆಸಿ ಅಸಮರ್ಪಕ ನಿರ್ಧಾರ ಕೈಗೊಳ್ಳಲಾಗಿದ್ದು, ಸಭೆಯಲ್ಲಿ ಕೈಗೊಂಡಿರುವ ತೀರ್ಮಾನವನ್ನು ಕೈಬಿಡಬೇಕೆಂದು ಮಠದವರು ಆಗ್ರಹಿಸಿದರು

ಕಳೆದ 22 ವರ್ಷಗಳಿಂದ ಸಮರ್ಪಕ ಪ್ಯಾಕೇಜ್‍ಗಾಗಿ ಒತ್ತಾಯಿಸಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಗೆ ಮನವಿ ಸಲ್ಲಿಸುತ್ತಿದ್ದರೂ ಇದುವರೆಗೂ ಪ್ಯಾಕೇಜ್ ಕೊಡದೆ, ಸಂತ್ರಸ್ಥರಿಗೆ ಪ್ಯಾಕೇಜ್ ನೀಡಲಾಗಿದೆ ಎಂದು ಅಧಿಕಾರಿಗಳು ಜನರಿಗೆ ತಿಳಿಸುವ ಮೂಲಕ ತೆರವಿಗೆ ಮುಂದಾಗಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅನುಷ್ಟಾನ ಮತ್ತು ಪುನರ್ವಸತಿ ಸಭೆಗೆ ಮಠದ ಅರಣ್ಯ ಸಂತ್ರಸ್ಥ ಫಲಾನುಭವಿಗಳನ್ನು ಆಹ್ವಾನಿಸಿಲ್ಲ, ಅವರ ವಾಸ್ತವ ಸಮಸ್ಯೆಗಳ ವಿವರವಾದ ಮಾಹಿತಿ ಇರುವ ಸಂಬಂಧಿಸಿದ ದಾಖಲೆಗಳನ್ನು ಹಿಂದಿನ ಸಭಾ ನಡವಳಿಕೆಯಲ್ಲಾಗಲಿ, ಮಾಹಿತಿ ಕಡತಗಳನ್ನಾಗಲಿ ಗಣನೆಗೆ ತೆಗೆದುಕೊಂಡಿರುವುದಿಲ್ಲವೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ಪಡದುಕೊಂಡಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ನಿರ್ದೇಶಕರು ಹಾಗೂ ಸದಸ್ಯ ಕಾರ್ಯದರ್ಶಿಗಳು ವಾಸ್ತವಾಂಶಗಳನ್ನು ಪರಿಗಣಿಸಬೇಕೆಂದು ಕೋರಿದ್ದಾರೆ. ಎಂ.ಸಿ.ಹಳ್ಳಿಯಲ್ಲಿ ನಿವೇಶನ ಒದಗಿಸಲಾಗಿದೆ ಎಂದು ಹೇಳಲಾಗಿದೆ. 9 ಮಂದಿ ಫಲಾನುಭವಿಗಳಿಗೆ ನೀಡಿರುವ ತಲಾ 1 ಎಕರೆ ಜಮೀನಿನ ಪೋಡಿಯಾಗಿಲ್ಲ, ಸಾಗುವಳಿ ಮಂಜೂರಾತಿ ಖಾತೆ ಮಾಡಿಲ್ಲ. ಎಂ.ಆರ್. ಮತ್ತು ಪಹಣಿ ನೀಡಿಲ್ಲವೆಂದು ಇವರಿಗೆ ಶೇ.100 ರಷ್ಟು ಮನೆಪರಿಹಾರ ಕೊಟ್ಟಿಲ್ಲ, ಪುನರ್ವಸತಿ ಪ್ಯಾಕೇಜ್‍ನಂತೆ ಮನೆ ಕಟ್ಟಿಸಿಕೊಡಬೇಕಾಗಿದೆ ಎಂದು ಹೇಳಿದ್ದಾರೆ.
ಕೆಳಗೂರಿನಲ್ಲಿ 8 ಜನ ಸಂತ್ರಸ್ಥರಿಗೆ ಜಮೀನು ಮತ್ತು ನಿವೇಶನ ನೀಡಿದ್ದರೂ ಆ ಜಮೀನಿನ ಪೋಡಿ, ಸಾಗುವಳಿ ಪತ್ರ, ಖಾತೆಯಾಗಿಲ್ಲ, ಮರು ಮೌಲ್ಯಮಾಪನದಂತೆ ನಿಗದಿಪಡಿಸಲಾದ ಮನೆಪರಿಹಾರ ನೀಡಿಲ್ಲ, ಮಂಜೂರಾದ ಭೂಮಿಯಲ್ಲಿ ಅಜಗಯ್ಯ ಎಂಬುವರಿಗೆ ಬಹಳ ಹಿಂದೆಯೇ ಮರಣಹೊಂದಿದ್ದು, ಅವರಿಗೆ ನೀಡಲಾದ ಭೂಮಿಯನ್ನು ಬೇರೆಒಬ್ಬರಿಗೆ ಅಕ್ರಮ,ಸಕ್ರಮದಲ್ಲಿ ಮಂಜೂರು ಮಾಡಲಾಗಿದೆ. ಸಮಸ್ಯೆ ಬಗೆಹರಿಸದೆ 3 ನೋಟೀಸ್ ನೀಡಿ ಮನೆಖಾಲಿಮಾಡಿಸಲು ನಿರ್ಧರಿಸಿರುವುದು ಪುನರ್ವಸತಿ ನಿಯಮಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ

.
ಪರದೇಶಪ್ಪ ಮಠದಲ್ಲಿ ಹೆಚ್ಚುವರಿಯಾಗಿ 24 ಜನರ ಹೊಸ ಸೇರ್ಪಡೆಮಾಡಿದ್ದು, ಅವರ ಹೆಸರು ಮತ್ತು ವಿವರಗಳು ಇಲ್ಲ, 1992 ಮತ್ತು 2002ರಲ್ಲಿ ಕೈಬಿಟ್ಟುಹೋಗಿದ್ದ ಕಾನೂನು ನಿಯಮಗಳ ಪ್ರಕಾರ ಅರ್ಹ 15 ಜನರನ್ನು ಗುರುತಿಸಿ 2005ರಿಂದ 2019 ರವರೆಗೆ ನಡೆದ ಸಮಿತಿ ಸಭೆಗಳಲ್ಲಿ, ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸಮೀಕ್ಷೆಯಲ್ಲಿ 15 ಜನರ ಪಟ್ಟಿಮಾಡಿ ಅರ್ಹ ಸಂತ್ರಸ್ಥರೆಂದು ಗುರುತಿಸಲಾಗಿದ್ದು, ಈ ಮಾಹಿತಿಯನ್ನು ಸಭೆ ಗಮನಿಸಿಲ್ಲ ಎಂದು ಹೋರಾಟ ಸಮಿತಿ ಮುಖಂಡರು ಹೇಳಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!