May 3, 2024

MALNAD TV

HEART OF COFFEE CITY

ದ್ವೇಷದ ಬೆಂಕಿ ಆರಿಸಿ ಬೆಳಕಿನೆಡೆಗೆ ಸಾಗುವುದು ಅನಿವಾರ್ಯ * ಎಐಸಿಸಿ ಕಾರ್ಯದರ್ಶಿ ಸಂದೀಪ್

1 min read

ಚಿಕ್ಕಮಗಳೂರು: ಶಾಂತಿ ಮಂತ್ರದಿಂದ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಮಹಾದಾಸೆಯಂತೆ ಈಗ ದೇಶದ ವಾತಾವರಣವನ್ನು ಕಂಡರೆ ದ್ವೇಷದ ಬೆಂಕಿ ಆರಿಸಿ ಬೆಳಕಿನೆಡೆಗೆ ಸಾಗುವುದು ಅನಿವಾರ್ಯ ಮತ್ತು ಅಗತ್ಯವೂ ಆಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿ, ರಾಜಕಾರಣ ಎಂದೂ ನಿಂತ ನೀರಲ್ಲ ಹಾಗೂ ಬದಲಾವಣೆ ಪ್ರಕೃತಿ ನಿಯಮ ಹಾಗಾಗಿ ಎಲ್ಲಾ ದಿನಗಳೂ ಕಷ್ಟದ ದಿನಗಳು ಎಂದೆನಿಸುವುದು ಬೇಡ ಸುವ್ಯವಸ್ಥಿತವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಲು ನಾವೆಲ್ಲರೂ ಮುಂದಾಗೋಣ ಎಂದರು.

ಗುಜರಾತ್ ರಾಜ್ಯದ ಪಕ್ಷದ ಸಂಘಟನಾ ಉಸ್ತುವಾರಿಯಾಗಿ ಎಐಸಿಸಿ ನನ್ನನ್ನು ನೇಮಿಸಿದೆ. ಇದು ನನಗೆ ಅತ್ಯಂತ ಸಂತೋಷ ತಂದಿದೆ ಮತ್ತು ಜವಾಬ್ದಾರಿಯನ್ನು ಹೆಚ್ಚು ಮಾಡಿದೆ. ಕಳೆದ ಮೂರು ವರ್ಷಗಳಿಗೂ ಹೆಚ್ಚು ಕಾಲ ಮಹಾರಾಷ್ಟ್ರ ರಾಜ್ಯದ ಉಸ್ತುವಾರಿಯಾಗಿ ಮಾಡಿದ ಕೆಲಸಗಳು ಎಐಸಿಸಿ ಮತ್ತೊಂದು ರಾಜ್ಯದ ಜವಾಬ್ದಾರಿಯನ್ನು ನೀಡಿದೆ ಎಂದು ಹೇಳಿದರು.
ನಿಮ್ಮೆಲ್ಲರ ಹಾರೈಕೆ, ಸಹಕಾರದೊಂದಿಗೆ ಅಲ್ಲಿಯೂ ಕೂಡ ಯಶಸ್ವಿಯಾಗುತ್ತೇನೆಂಬ ನಂಬಿಕೆ ನನಗಿದೆ ಎಂಬ ಆಶಯ ವ್ಯಕ್ತಪಡಿಸಿ, ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನ ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ಪ್ರತಿಯೊಬ್ಬರೂ ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಸದಸ್ಯತ್ವ ನೋಂದಾಯಿಸುವಂತೆ ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಅವರು ಸಂದೀಪ್ ಅವರನ್ನು ಅಭಿನಂದಿಸಿ ಮಾತನಾಡಿ ನಿಷ್ಠೆ, ಪ್ರಾಮಾಣಿಕತೆ ಮತ್ತು ಗಟ್ಟಿತನದಿಂದ ಮುನ್ನುಗ್ಗಿದರೆ ಯಾವುದೇ ಕೆಲಸದಲ್ಲಿ ಯಶಸ್ಸು ಸಾಧ್ಯ ಎಂಬುದಕ್ಕೆ ಸಂದೀಪ್ ತೋರಿಸಿಕೊಟ್ಟಿದ್ದಾರೆ. ಕಷ್ಟ ಕಾಲದಲ್ಲಿ ಪಕ್ಷ ಕಟ್ಟುವ ಕೆಲಸದಲ್ಲಿ ಅವರು ನಿರತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕೆಲಸವನ್ನೆ ಸವಾಲಾಗಿ ಸ್ವೀಕರಿಸಿ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಮಹಾರಾಷ್ಟ್ರದಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಹೆಚ್.ಕೆ.ಪಾಟೀಲ್ ಅವರೊಂದಿಗೆ ಕೆಲಸ ಮಾಡಿ ಸೈ ಎನಿಸಿಕೊಂಡಿರುವ ಸಂದೀಪ್ ಗುಜರಾತ್‍ನಲ್ಲೂ ಗೌರವ ಬರುವಂತೆ ದುಡಿಯುತ್ತಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲೂ ಪಕ್ಷ ಅವರ ಸೇವೆಯನ್ನು ಬಯಸುತ್ತದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಕಳೆದ ಮೂರು ದಶಕಗಳಿಂದ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿ ರುವ ಸಂದೀಪ್‍ಗೆ ಸಿಕ್ಕಿರುವ ಈ ಜವಾಬ್ದಾರಿ ಜಿಲ್ಲೆಗೆ ಗೌರವ ತಂದಿದೆ ಎಂದರು. ಕೆಪಿಸಿಸಿ ವಿಮರ್ಶಕ ರವೀಶ್ ಕ್ಯಾತನಬೀಡು, ಡಿಸಿಸಿ ವಕ್ತಾರ ರೂಬಿನ್ ಮೊಸಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಪಿ.ಮಂಜೇಗೌಡ, ಎಸ್.ಸಿ ವಿಭಾಗದ ಪ್ರಧಾನ ಕಾರ್ಯದರ್ಶಿ ಹಿರೇಮಗಳೂರು ಸುರೇಶ್ ಅವರು ಮಾತನಾಡಿ, ಸಂದೀಪ್ ಅವರನ್ನು ಅಭಿನಂದಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಜಮೀಲ್ ಅಹಮದ್, ನಗರಸಭಾ ಸದಸ್ಯರಾದ ಪರಮೇಶ್‍ರಾಜ್ ಅರಸ್, ಜಾವೀದ್, ಸೇವಾದಳದ ಜಿಲ್ಲಾ ಅಧ್ಯಕ್ಷ ಸಿಲ್ವಸ್ಟರ್, ಎನ್.ಎಸ್.ಯು.ಐ ಮುಖಂಡ ಶ್ರೀಕಾಂತ್, ಪಕ್ಷದ ಐಟಿ ವಿಭಾಗದ ಅಧ್ಯಕ್ಷ ಕಾರ್ತಿಕ್ ಚೆಟ್ಟಿಯಾರ್, ಜಿಲ್ಲಾ ಸಮಿತಿ ಕಾರ್ಯದರ್ಶಿ ಪ್ರಕಾಶ್ ರೈ, ಸುರೇಶ್, ಬಿ.ಎಂ.ಸಂದೇಶ್, ಹಿರೇಮಗಳೂರು ಸಹಕಾರ ಸಂಘದ ನಿರ್ದೇಶಕ ಗಂಗಾಧರ್ ಅವರುಗಳು ಸಂದೀಪ್ ಅವರನ್ನು ಅಭಿನಂದಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!