May 6, 2024

MALNAD TV

HEART OF COFFEE CITY

ಸ್ವಾವಲಂಬಿ ಬದುಕಿಗಾಗಿ ಆತ್ಮನಿರ್ಭರ ಯೋಜನೆ: ಶಾಸಕ ಸಿ.ಟಿ ರವಿ

1 min read

 

ಚಿಕ್ಕಮಗಳೂರು: ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಆತ್ಮನಿರ್ಭರ ಯೋಜನೆಯಡಿಯಲ್ಲಿ ಸರ್ಕಾರ ವಿವಿಧ ಇಲಾಖೆಗಳ ಮೂಲಕ ಸಂಘ ಸಂಸ್ಥೆಗಳಿಗೆ ಆರ್ಥಿಕ ನೆರವು ಒದಗಿಸಲಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಸಿ.ಟಿ ರವಿ ತಿಳಿಸಿದರು.ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಂಜೀವಿನಿ ಮಾಸಿಕ ಸಂತೆ( ವಸ್ತುಗಳ ಪ್ರದರ್ಶನ ಮತ್ತು ಮಾರಾಟ) ಕಾರ್ಯಕ್ರಮಕ್ಕೆ ಉದ್ಘಾಟಿಸಿ ಮಾತನಾಡಿದರು.ದೇಶ ಸ್ವಾವಲಂಬನೆ ಸಾಧಿಸಬೇಕಾದರೆ ನಾವೆಲ್ಲವರೂ ಸ್ಥಳೀಯ ಸ್ವದೇಶಿ ಉತ್ಪನ್ನಗಳನ್ನು ಹೆಚ್ಚು ಬಳಸಬೇಕು ಆ ನಿಟ್ಟಿನಲ್ಲಿ ಆತ್ಮನಿರ್ಭರ ಯೋಜನೆ ಅನುಷ್ಠಾನಗೊಂಡಿದ್ದು, ಸಮಾಜದಲ್ಲಿ ವ್ಯಕ್ತಿ, ಕುಟುಂಬ ತನ್ನ ಸ್ವಂತ ಶಕ್ತಿಯೊಂದಿಗೆ ನೆಲೆನಿಂತಾಗ ಆತ್ಮನಿರ್ಭರ ಸಕಾರಗೊಳ್ಳಲಿದೆ ಎಂದರು.

ಈ ಹಿಂದೆ ದೇಶ ಸ್ವಾವಲಂಬಿಯಾಗಿ ಆರ್ಥಿಕವಾಗಿ ಸಾಕಷ್ಟು ಪ್ರಗತಿಯಲ್ಲಿತ್ತು. ಬ್ರಿಟೀಷ್ ಆಡಳಿತದ ಬಳಿಕ ಸಾಕಷ್ಟು ಸುಧಾರಣೆಗಳಾಗಿ ವಿದೇಶಿ ಉತ್ಪನ್ನಗಳಿಗೆ ಮಾರುಹೋಗುವವ ಸಂಖ್ಯೆ ಅಧಿಕವಾಗಿದೆ. ಸ್ಥಳೀಯವಾಗಿ ಉತ್ಪಾದಿಸುವ ವಸ್ತುಗಳನ್ನು ಹೆಚ್ಚು ಬಳಕೆ ಮಾಡಿದಾಗ ದೇಶದ ಆದಾಯವು ವೃದ್ಧಿಯಾಗಲಿದೆ, ಜತೆಗೆ ಸ್ಥಳೀಯರಿಗೆ ಹೆಚ್ಚು ಉದ್ಯೋಗವಕಾಶ ದೊರೆತು ಸ್ವಾವಲಂಬನೆ ಸಾಧಿಸಲು ಸಹಾಯಕವಾಗಲಿದೆ ಎಂದರು.
ಸರ್ಕಾರ ಸ್ವಯಂ ಉದ್ದಿಮೆ ಕೈಗೊಳ್ಳುವ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸುತ್ತುನಿಧಿಯಾಗಿ 15 ಸಾವಿರ, ಸಮುದಾಯ ನಿಧಿ ಬಂಡವಾಳವಾಗಿ ಎಸ್‍ಸಿ,ಎಸ್‍ಟಿ ಸಮುದಾಯಕ್ಕೆ 1.25 ಲಕ್ಷ ಹಾಗೂ ಇತರೆ ಹಿಂದುಳಿದ ವರ್ಗಕ್ಕೆ 75 ಸಾವಿರ ಸಾಲ ಸೌಲಭ್ಯ ನೀಡಲಿದೆ. ವ್ಯಾಪಾರ ವಹಿವಾಟು ನಡೆಸಲು 1 ಲಕ್ಷದವರೆಗೂ ಸಾಲ ನೀಡಲಿದ್ದು, ಇನ್ನು ಗ್ರಾಮಪಂಚಾಯಿತಿ ಒಕ್ಕೂಟದ ಸಂಘಗಳಿಗೆ ತರಬೇತಿಯ ಜತೆಗೆ ಉದ್ದಿಮೆ ಸ್ಥಾಪನೆಗೆ 5 ಲಕ್ಷದವರೆಗೂ ಬ್ಯಾಂಕ್‍ಗಳ ಮೂಲಕ ಸಾಲ ಸೌಲಭ್ಯ ಒದಗಿಸಲಿದೆ. ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಜಿ.ಪ್ರಭು ಮಾತನಾಡಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಗ್ರಾಮಪಂಚಾಯಿತಿಗಳಲ್ಲಿ ಒಕ್ಕೂಟದ ರಚನೆ ಮುಕ್ತಾಯಗೊಂಡಿದ್ದು ಮುಂದಿನ ಒಂದು ತಿಂಗಳಲ್ಲಿ ಸರ್ಕಾರದಿಂದ ಸಿಗುವ ಎಲ್ಲಾ ಸಾಲ ಸೌಲಭ್ಯಗಳನ್ನು ಬ್ಯಾಂಕ್‍ಗಳ ಮೂಲಕ ಒದಗಿಸಲಾಗುವುದು, ಸ್ವ-ಉದ್ದಿಮೆ ಕೈಗೊಳ್ಳಲು, ಉತ್ಪನ್ನಗಳ ತಯಾರಿಸಿ ಮಾರಾಟ ಮಾಡಲು ಸ್ಥಳೀಯ ಸಂತೆಗಳಲ್ಲಿ ಸ್ವ-ಸಹಾಯ ಸಂಘಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 1 ಸಾವಿರ ಸ್ವ-ಸಹಾಯ ಸಂಘದ ಒಕ್ಕೂಟಗಳ 2 ಸಾವಿರಕ್ಕೂ ಹೆಚ್ಚು ಮಂದಿಗೆ ವಿವಿಧ 35 ಕ್ಷೇತ್ರಗಳ ಕುರಿತು ತರಬೇತಿ ನೀಡಲಾಗಿದೆ. ಕ್ರಿಯಾಶೀಲತೆ, ಸ್ವ-ಉದ್ದಿಮೆ ಗುಣಮಟ್ಟದೊಂದಿಗೆ ತಮ್ಮದೇ ಸ್ವಂತ ಬ್ರಾಂಡ್ ಸೃಷ್ಟಿಸಿಕೊಳ್ಳುವಂತೆ ಸಲಹೆ ನೀಡಿದರು.
ಮಹಿಳೆಯರು ಸ್ವಂತ ಉದ್ದಿಮೆ ಮೂಲಕ ಆರ್ಥಿಕ ಸಶಕ್ತೀಕರಣವಾಗಬೇಕು, ರಾಸಾಯನಿಕ ಉತ್ಪನ್ನಗಳ ಬದಲಾಗಿ ಸಾವಯವ ಉತ್ಪನ್ನಗಳಿಗೆ ಆಧ್ಯತೆ ನೀಡುವಂತೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಧುಕುಮಾರ್ ರಾಜ್ ಅರಸ್, ಕುಮಾರ್, ಮಾಜಿ ಸದಸ್ಯ ಅಪ್ಸರ್ ಅಹ್ಮದ್, ಜಿ.ಪಂ ಯೋಜನಾ ನಿರ್ದೇಶಕ ಸೋಮಶೇಖರ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ತಾರಾನಾಥ್, ಪುಷ್ಪಲತಾ, ಪರಮೇಶ್ವರಪ್ಪ ದಿವ್ಯಾ ದೇವರಾಜ್, ಸೇರಿದಂತೆ ಮತ್ತಿತರರು ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!