May 18, 2024

MALNAD TV

HEART OF COFFEE CITY

ಕುಡಿಯುವ ನೀರಿಗಾಗಿ 55 ಅಡಿ ಬಾವಿ ತೆಗೆದ ಕೂಲಿ ದಂಪತಿಗಳು…..

1 min read

ಮೂಡಿಗೆರೆ: ತಾಲೂಕಿನ ಜನ್ನಾಪುರದ ಅಣಜೂರಿನ ಚಿನ್ನಿಗ ಗ್ರಾಪಂ ಗೆ ಸೇರಿದ ಗ್ರಾಮದಲ್ಲಿ ಒಂದು ತುಂಬಾ ಕಡುಬಡವ ದಂಪತಿಗಳಾದ ರಾಜು ಹಾಗೂ ಶಾರದ ಎಂಬುವವರು ತನ್ನ ಕೂಲಿ ಕೆಲಸ ಮಾಡಿ ಬಂದು ಬಿಡುವಿರುವ ಸಮಯದಲ್ಲಿ ಶ್ರಮವಹಿಸಿ ಕುಡಿಯುವ ನೀರಿಗಾಗಿ ಸುಮಾರು ಒಂದೂವರೆ ತಿಂಗಳಿಂದ 55 ಅಡಿ ಬಾವಿ ತೆಗೆದಿದ್ದಾರೆ.
ದಂಪತಿಗಳು ಮಾಧ್ಯಮದ ಮುಂದೆ ಕಳೆದ 20 ವರ್ಷಗಳ ಹಿಂದೆ ನಮಗೆ ವಾಸಿಸಲು ಸರ್ಕಾರ ಹಕ್ಕುಪತ್ರವನ್ನು ವಿತರಣೆ ಮಾಡಿದ್ದು ಸರಿಯಷ್ಟೇ ಆದರೇ ನಾವು ಅನಕ್ಷರಸ್ಥರಾದ ಕಾರಣ ನಮಗೆ ಮನೆ ಕಟ್ಟಲು ಇದುವರೆಗೂ ಆಶ್ರಯಮನೆ ನೀಡಿಲ್ಲಾ, ನಾವು 20 ವರ್ಷಗಳಿಂದಲೂ ಟಾರ್ಪಲ್ ಹಾಕಿಕೊಂಡು ಗಾಳಿ ಮಳೆ ಎನ್ನದೆ ವಾಸಿಸುತ್ತಿದ್ದೇವೆ, ಹಗಲಲ್ಲಿ ಮಾತ್ರ ಬೆಳಕು ರಾತ್ರಿ ಸೀಮೆಎಣ್ಣೆ ಬುಡ್ಡಿ ಹಚ್ಚಿಕೊಳ್ಳಲು ಸರ್ಕಾರ ಸೀಮೆಎಣ್ಣೆಯನ್ನು ನೀಡುತ್ತಿಲ್ಲಾ. ಮುಖ್ಯ ರಸ್ತೆಯ ಬದಿಯಲ್ಲಿದ್ದರೂ ಕಾಡುಜನರಂತೆ ಬದುಕುವ ಸ್ಥಿತಿ ಎದುರಾಗಿದೆ ಹೋಗಲಿ ಕುಡಿಯು ನೀರಿಗೂ ತೊಂದರೇ ಅನುಭವಿಸಬೇಕಾಗಿದೆ ನಾವು ಅನಕ್ಷರಸ್ಥರಾಗಿರುವ ಕಾರಣ ನಮಗೆ ಯಾರನ್ನು ಕಾಣಬೇಕೆಂದು ಗೊತ್ತಿಲ್ಲಾ ಸ್ವಾಮಿ. ಹಾಗಾಗಿ ಕುಡಿಯುವ ನೀರಿಗಾಗಿ ನಾವಿಬ್ಬರೇ ಜನವರಿ 14 ರಿಂದ ಬಾವಿ ತೆಗೆಯಲು ಪ್ರಾರಂಭಿಸಿದ್ದು ಇದುವರೆಗೂ 55 ಅಡಿ ಬಾವಿಯನ್ನು ತೆಗೆದಿದ್ದೇವೆ ಇನ್ನು ನೀರು ಸಿಕ್ಕಿಲ್ಲಾ ನೀರು ಸಿಕ್ಕುವ ತನಕ ಬಾವಿತೆಗೆದೇ ತೀರುತ್ತೇವೆ ಎಂದು ಕಣ್ಣೀರು ಹಾಕುತ್ತಿದ್ದ ದೃಶ್ಯ ಎಂತಹವರನ್ನು ಮನ ಕಲುಕುವಂತಿತ್ತು.

ಮೀಸಲು ಕ್ಷೇತ್ರವಾದ ಮೂಡಿಗೆರೆ ಕ್ಷೇತ್ರದಲ್ಲಿ ಶಾಸಕರುಗಳ ಕಣ್ಣಿಗೆ ಇಂತಹವರು ಕಾಣಲಿಲ್ಲವೇ ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಓಟು ಪಡೆಯುವಾಗ ಮಾತ್ರ ಕಣ್ನಿಗೆ ಕಾಣಿಸುವ ಶಾಸಕರು ಓಟು ಪಡೆದ ನಂತರ ನಾಪತ್ತೆಯಾಗಿದ್ದಾರೆ ಎಂದು ಗ್ರಾಮಸ್ಥರು ಶಾಸಕರಿಗೆ ಹಿಡಿಶಾಪ ಹಾಕುತ್ತಿದ್ದಿದ್ದು ಕಂಡು ಬಂದ ದೃಷ್ಯವಾಗಿತ್ತು.
ತಕ್ಷಣವೇ ಮಾಧ್ಯಮದವರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಡಿ.ಡಿ.ಪ್ರಕಾಶ್ ಅವರ ಗಮನಕ್ಕೆ ತಂದಾಗ ಸ್ಥಳಿಕ್ಕೆ ಆಗಮಿಸಿದ ಅವರು ಅಲ್ಲಿಯ ವಾಸ್ತವಿತೆಯನ್ನು ನೋಡಿ ಮಮ್ಮಲ ಮರುಗಿದರು. ತಕ್ಷಣವೆ ಚಿನ್ನಿಗ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿಯನ್ನು ಕರೆಸಿ ಕುಡಿಯುವ ನೀರಿನ ವ್ಯವಸ್ಥೆಯನ್ನು ತಕ್ಷಣವೇ ಮಾಡುವಂತೆ ಸೂಚನೇ ನೀಡುವುದರೊಂದಿಗೆ ಇಪ್ಪತ್ತು ವರ್ಷಗಳಿಂದಲೂ ವಾಸಿಸುತ್ತಿರುವ ರಾಜುವಿಗೆ ಆಶ್ರಯ ಯೋಜನೆಯಡಿಯಲ್ಲಿ ಮನೆ ಕಟ್ಟಲು ತಹಸೀಲ್ದಾರರೊಂದಿಗೆ ಚರ್ಚಿಸಿ ಮನೆ ಕಟ್ಟಿಸಿಕೊಡುವ ಭರವಸೆಯನ್ನು ನೀಡಿದರು, ಹಾಗೂ ಅಭೀವೃದ್ದಿ ಅಧಿಕಾರಿಗಳಿಗೆ ನೀರಿನ ವ್ಯವಸ್ಥೆಯ ಬಗ್ಗೆ ಸರಿಯಾಗಿ ಗಮನಿಸುವಂತೆ ತಿಳಿಸಿದರು.
ಈ ದಂಪತಿಗಳಿಗೆ ಇಬ್ಬರು ಮಕ್ಕಳು ಸಹ ಇದ್ದು ಅಪ್ಪ ಅಮ್ಮನ ಕಷ್ಟ ನೋಡಲಾರದೆ ಮಂಗಳೂರಿನಲ್ಲಿ ಮನೆ ಕೆಲಸ ಹಾಗೂ ಹೋಟೆಲ್ ಕೆಲಸ ಮಾಡಿ ಬಂದ ಹಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!