May 4, 2024

MALNAD TV

HEART OF COFFEE CITY

ಪಂಗುನಿ ಉತ್ತಿರ ಜಾತ್ರೆ-ಸರಳ ಸಾಮೂಹಿಕ ವಿವಾಹ

1 min read

ಚಿಕ್ಕಮಗಳೂರು: ಕುಮರಗಿರಿಯ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಮಾ.18 ರಂದು ಪಂಗುನಿ ಉತ್ತಿರಜಾತ್ರೆ,ಕಾವಡಿ ಸಮರ್ಪಣೆ ಹಾಗೂ ಸರಳ ಸಾಮೂಹಿಕ ವಿವಾಹ ನಡೆಯಲಿದೆ ಎಂದು ಧರ್ಮದರ್ಶಿ ಮಂಡಳಿಯ ಪ್ರಧಾನಕಾರ್ಯದರ್ಶಿ ಎಸ್.ವಿಜಯಕುಮಾರ್ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮಾ.16ರಿಂದ 18ರವರೆಗೆ ವಿವಿಧ ಪೂಜಾಕಾರ್ಯಕ್ರಮಗಳು ನಡೆಯುತ್ತಿವೆ. ಮಾ.16ರಂದು ಬೆಳಿಗ್ಗೆ 9ರಿಂದ 10.30ರವರೆಗೆ ಧ್ವಜಾರೋಹಣ ಹಾಗೂ ಕಂಕಣಧಾರಣೆ ನಡೆಯಲಿದೆ ಎಂದು ಹೇಳಿದರು.

ಮಾ.17ರಂದು ಬೆಳಿಗ್ಗೆ 9ರಿಂದ 10.30 ರವರೆಗೆ ದೇವರಿಗೆ ಅಭಿಷೇಕ, ಅಲಂಕಾರ, 10.30ಕ್ಕೆ ಸ್ವಾಮಿಯವರ ಉತ್ಸವಮೂರ್ತಿಯು ದೇವಾಲಯದಿಂದ ಮೆರವಣಿಗೆ ಹೊರಟು ಅರಿಶಿನಗುಪ್ಪೆ, ಮಾವಿನಹಳ್ಳ, ಮಲ್ಲೇನಹಳ್ಳಿ ಮೂಲಕ ಅತ್ತಿಗಿರಿ ತಲುಪಿ ಕಂಬಿಹಳ್ಳಿ,ಶಾಂತಿಪುರ, ಕಬ್ಬಿಣಸೇತುವೆ, ಹೊಸಪೇಟೆ,ಗುಡ್ಡೇನಹಳ್ಳಿ, ಅರವಿಂದನಗರ, ಎಮ್ಮೇಖಾನ್,ಭಕ್ತರಹಳ್ಳಿ ಮೂಲಕ ಕುಮರಗಿರಿಗೆ ಹಿಂದಿರುಗಲಿದೆ ಎಂದು ಕಾರ್ಯಕ್ರಮದ ಮಾಹಿತಿ ನೀಡಿದರು.

ದೇವಾಲಯದಲ್ಲಿ ಮಾ.18ರಂದು ಶ್ರೀಯವರಿಗೆ ಅಭಿಷೇಕ, ಅಲಂಕಾರದೊಂದಿಗೆ ಮಹಾಮಂಗಳಾರತಿ, ಬಳಿಕ ಪಂಗುನಿಉತ್ತಿರಜಾತ್ರೆ ಕಾವಡಿ ಸಮರ್ಪಣೆ ನಡೆಯುವುದು. ಬೆಳಿಗ್ಗೆ 9ರಿಂದ ಸುಬ್ರಹ್ಮಣ್ಯಸ್ವಾಮಿ ಹಾಗೂ ವಳ್ಳಿ, ದೇವಾನೆಯರ ಕಲ್ಯಾಣೋತ್ಸವ ಮತ್ತು ಸರಳಸಾಮೂಹಿಕ ವಿವಾಹನ ನಡೆಯುತ್ತಿದ್ದು, ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ ನಡೆಯುವುದು ಸಂಜೆ 5 ಗಂಟೆಗೆ ಉತ್ಸವಮೂರ್ತಿಯ ದೇವಸ್ಥಾನ ಪ್ರದಕ್ಷಿಣೆ ಇದೆ ಎಂದು ತಿಳಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!