May 19, 2024

MALNAD TV

HEART OF COFFEE CITY

ಆರ್.ಎಸ್.ಎಸ್. ಆನೆ ಇದ್ದಂತೆ, ಅಕ್ಕ-ಪಕ್ಕದವರಿಗೆ ತಲೆಕೆಡಿಸಿಕೊಳ್ಳಲ್ಲ : ಕುಮಾರಸ್ವಾಮಿಗೆ ಸಿ.ಟಿ.ರವಿ ಟಾಂಗ್

1 min read

ಚಿಕ್ಕಮಗಳೂರು:ಆರ್.ಎಸ್.ಎಸ್. ಆನೆ ಇದ್ದಂತೆ. ಆನೆ ಯಾವತ್ತೂ ತನ್ನ ದಾರಿ ಕಡೆ ಹೋಗುತ್ತಿರುತ್ತೆ. ದಾರಿ ಮಧ್ಯೆ, ಅಕ್ಕ-ಪಕ್ಕ ಯಾರು ಏನು ಮಾತನಾಡುತ್ತಾರೆಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಅದೇ ರೀತಿ ಆರ್.ಎಸ್.ಎಸ್. ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ. ನಗರದಲ್ಲಿ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಾವು ಅವರ ಹೇಳಿಕೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆರ್.ಎಸ್.ಎಸ್. ಆನೆ ಇದ್ದಂತೆ. ಅದರ ಪಾಡಿಗೆ ಅದು ಹೋಗುತ್ತಿರುತ್ತೆ. ಬೇರೆ ಯಾರು ಏನು ಮಾಡುತ್ತಾರೆ ಎಂದು ಅದು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಆರ್.ಎಸ್.ಎಸ್. ಅನ್ನ ಆನೆಗೆ ಹೋಲಿಸಿದ್ದಾರೆ. ಆರ್.ಎಸ್.ಎಸ್. ತನ್ನ ಪಾಡಿಗೆ ಸಂಸ್ಕಾರ ಕೊಡುವ ಕೆಲಸ ಮಾಡುತ್ತಿದೆ. ಇಂತಹಾ ಹೇಳಿಕೆಗಳಿಂದ ಅದು ವಿಚಲಿತ ಆಗುವುದಿಲ್ಲ. ಸಂಘದಲ್ಲಿ ಪ್ರತಿಕ್ರಿಯೇ ಕೊಡುವ ಪದ್ಧತಿಯೂ ಇಲ್ಲ ಎಂದರು. ಆರ್.ಎಸ್.ಎಸ್. ದೇಶಭಕ್ತ ಸಂಘಟನೆ. ಅದು ಇರುವ ಕಾರಣಕ್ಕೋಸ್ಕರವೇ ದೇಶದ ಹಿಂದುಗಳಲ್ಲಿ ಒಗ್ಗಟ್ಟು, ರಾಷ್ಟ್ರೀಯತೆ ಭಾವನೆ ಬಲಗೊಳ್ಳಲು ಕಾರಣವಾಗಿದೆ ಎಂದ ಅವರು, ಒಂದು ವೇಳೆ ಅದು ಇಲ್ಲದಿದ್ದರೆ ನಾವು ಜಾತಿ ಆಧಾರದಲ್ಲಿ, ಪ್ರಾದೇಶಿಕತೆ ಆಧಾರದಲ್ಲಿ ಕಿತ್ತಾಡಿ ಮೂರನೆಯವರಿಗೆ ಲಾಭ ಮಾಡಿಕೊಡುತ್ತಿದ್ದೆವು ಎಂದರು. ಹಿಂದೆ ಯಾರ್ಯಾರು ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದರು ಅವರು ತಮ್ಮ ಸಾಮರ್ಥ್ಯದ ಮೇಲೆ ಆಕ್ರಮಣ ಮಾಡಿದರು ಎಂದು ಹೇಳುವುದಕ್ಕಿಂತ ನಮ್ಮ ಒಡಕಿನ ಲಾಭ ಪಡೆದು ಆಕ್ರಮಣ ಮಾಡಿ ನಮ್ಮ ಸಂಪತ್ತು, ಸಂಸ್ಕೃತಿಯನ್ನ ನಾಶ ಮಾಡಿ, ನಮ್ಮ ದೇಶವನ್ನ ತುಂಡು ಮಾಡಿದರು. ಆ ಸತ್ಯದ ಅರಿವಿದ್ದರೆ ಆರ್.ಎಸ್.ಎಸ್. ಅರ್ಥ ಆಗುತ್ತೆ ಎಂದರು. ಆ ಸತ್ಯದ ಅರಿವು ಇಲ್ಲದೆ, ನಾನು ಬದುಕಿರುವವರೆಗೂ ಓಟು ಬಂದರೆ ಸಾಕು ಅನ್ನುವಂತಹಾ ಮನೋಭಾವನೆ ಇರುವವರಿಗೆ ಆರ್.ಎಸ್.ಎಸ್. ಅರ್ಥ ಆಗಲ್ಲ. ಯಾರಿಗೆ ತನ್ನ ಸ್ವಾರ್ಥಕ್ಕಿಂತ ದೇಶ ಮಹತ್ವ ಎಂದು ಅನಿಸುತ್ತೋ ಅವರಿಗೆ ಆರ್.ಎಸ್.ಎಸ್. ಅರ್ಥವಾಗುತ್ತೆ ಎಂದು ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ, ಬೆಂಗಳೂರು ಉಸ್ತುವಾರಿಗಾಗಿ ನಡೆಯುತ್ತಿರುವ ಹಗ್ಗಜಗ್ಗಾಟದ ಕುರಿತಂತೆ ಪ್ರತಿಕ್ರಿಯೇ ನೀಡಿದ ಅವರು, ನಾನು ಆ ವಿಷಯದಲ್ಲಿ ತಲೆ ಹಾಕಲ್ಲ. ಯಾರಿಗೆ ಉಸ್ತುವಾರಿ ಮಾಡಬೇಕು ಅನ್ನೋದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಆಯಾ ಜಿಲ್ಲೆಯ ಪರಿಸ್ಥಿತಿ ಆಧರಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದರ ಬಗ್ಗೆ ನಾವೇನೂ ಹೇಳುವುದಿಲ್ಲ. ಪಕ್ಷದ ಸಲಹೆ ಕೇಳಿದರೆ ಅಧ್ಯಕ್ಷರು ಹಾಗೂ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಇದ್ದಾರೆ. ಸಲಹೆಗಳಿದ್ದಾರೆ ಅವರು ಕೊಡುತ್ತಾರೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!