May 18, 2024

MALNAD TV

HEART OF COFFEE CITY

ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷೆಯಾಗಿ ‘ಕಲ್ಪನಾ ಪ್ರದೀಪ್’ ಆಯ್ಕೆ

1 min read

ಚಿಕ್ಕಮಗಳೂರು: ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಕಾರ್ಯಕಾರಿ ಮಂಡಳಿಗೆ ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘವು 3 ವರ್ಷಗಳಿಗೊಮ್ಮೆ ನಡೆಸುವ ಕಾರ್ಯಕಾರಿ ಮಂಡಳಿಯ ಚುನಾವಣೆ ಇಂದು ನಡೆಸಿದ್ದು, ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷೆಯಾಗಿ ಕಲ್ಪನಾ ಪ್ರದೀಪ್, ಉಪಾಧ್ಯಕ್ಷರಾಗಿ ಕಾವ್ಯ ಸುರೇಶ್, ಕಾರ್ಯದರ್ಶಿಯಾಗಿ ಅಮಿತಾ ವಿಜೇಂದ್ರ, ಸಹ ಕಾರ್ಯದರ್ಶಿಯಾಗಿ ಕೋಮಲ ರವಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಈ ವೇಳೆ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷೆ ಕಲ್ಪನಾ ಪ್ರದೀಪ್ ಮಾತನಾಡಿ, ಸಂಘದ ಕಾರ್ಯವನ್ನು ನಮ್ಮ ಮನೆಯ ಕೆಲಸವೆಂದು ತಿಳಿದು ಮಾಡಲು ನಾವು ಸಿದ್ಧವಾಗಿ ಬಂದಿದ್ದೇವೆ. ಹಿಂದೆ ಈ ಸಂಘವನ್ನು ಕಷ್ಟಪಟ್ಟು ಕಟ್ಟಿ ಇಂದು ಈ ಮಟ್ಟದಲ್ಲಿ ಇದು ಬೆಳೆದು ನಿಂತಿದೆ. ಇನ್ನು ಕೂಡ ಉತ್ತಮ ಸ್ಥಾನಕ್ಕೆ ಈ ಸಂಘವನ್ನು ಕೊಂಡೊಯಲು ಪ್ರಯತ್ನಿಸುತ್ತೇವೆ. ನಿಮ್ಮ ಸಹಕಾರ, ಪ್ರೀತಿ, ವಿಶ್ವಾಸ ಸದಾ ನಮ್ಮೊಂದಿಗೆ ಇರಲಿ ಎಂದು ಹೇಳಿದರು.

ಮಹಿಳಾ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಸಂಘಕ್ಕೆ ಆಯ್ಕೆಯಾದ ಎಲ್ಲ ಅಧ್ಯಕ್ಷರು, ಉಪಾಧ್ಯಕ್ಷರು,ಪದಾಧಿಕಾರಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು. ರಾಜ್ಯದಲ್ಲೇ ನಮ್ಮ ಸಂಘ ಅತ್ಯುತ್ತಮ ಸಂಘ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಈಗ ಅಧಿಕಾರಕ್ಕಿಂತ ಜವಾಬ್ದಾರಿ ಹೆಚ್ಚಾಗಿದೆ. ಈ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸಿಕೊಂಡು ಹೋಗುವ ತಂಡ ನಿಮ್ಮ ಜೊತೆ ಇದೆ. ನಿಮಗೆ ಸಿಕ್ಕಿರುವ ಈ ಅವಕಾಶವನ್ನ ಉತ್ತಮವಾಗಿ ಬಳಸಿಕೊಂಡು ಸಂಘದ ಹೆಸರನ್ನು ಇನ್ನಷ್ಟು ಹೆಚ್ಚಿಸಿ. ಸದಾ ನಿಮ್ಮೊಂದಿಗೆ ನಾವೆಲ್ಲರೂ ಇರುತ್ತೇವೆ ಎಂದು ಭರವಸೆಯನ್ನು ನೀಡಿದರು.

ಜಿಲ್ಲಾ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ ರಾಜಶೇಖರ್ ಮಾತನಾಡಿ, ಚಿಕ್ಕಮಗಳೂರಿನ ಮಹಿಳಾ ಒಕ್ಕಲಿಗರ ಸಂಘ ರಾಜ್ಯದಲ್ಲೇ ಪ್ರತಿಷ್ಠಿತ ಸಂಘವಾಗಿದೆ. ಶೋಷಿತ ವರ್ಗ, ಬಡವರು ಸೇರಿದಂತೆ ಇತರರ ಉನ್ನತೀಕರಣಕ್ಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಈ ಬಾರಿ ಆಯ್ಕೆಯಾಗಿರುವ 15 ಜನಗಳ ತಂಡ ಉತ್ತಮ ಆಗಿದ್ದು, ಅವರ ಸಲಹೆ ಮತ್ತು ಸಹಕಾರವನ್ನು ಅಧ್ಯಕ್ಷರು ಪಡೆದು ಉತ್ತಮವಾದ ಕೆಲಸಗಳನ್ನು ಈ ಸಂಘ ಕೈಗೊಳ್ಳಲಿ ಎಂದು ತಿಳಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!