May 2, 2024

MALNAD TV

HEART OF COFFEE CITY

ಜುಲೈ 3 ಮತ್ತು 4 ರಂದು ಜನಶಕ್ತಿ ರಾಜ್ಯ ಸಮ್ಮೇಳನ

1 min read

ಚಿಕ್ಕಮಗಳೂರು: ಕರ್ನಾಟಕ ಜನಶಕ್ತಿ ಸಂಘಟನೆಯಿಂದ ಜುಲೈ 3 ಮತ್ತು 4 ರಂದು ರಾಯ ಚೂರು ಜಂಬಲದಿನ್ನಿ ಕಲಾ ಮಂದಿರದಲ್ಲಿ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಜನಶಕ್ತಿ ಸಂಘಟನೆ ರಾಜ್ಯ ಸಂಚಾಲಕ ಕೆ.ಎಲ್.ಅಶೋಕ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ನಿವೃತ್ತ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ತೀಸ್ತಾ ಸೆಟಲ್‍ವಾರ್ ಸೇರಿದಂತೆ ರೈತ ಸಂಘಟನೆ ಮೂರು ಬಣದ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಳ್ಳುವರು ಎಂದರು.
ನಾಳೆಗಾಗಿ, ನಾಡಿಗಾಗಿ, ನವಭಾರತ ನಿರ್ಮಾಣಕ್ಕಾಗಿ, ನಾಳೆಯ ನೆಮ್ಮದಿಗಾಗಿ ಈ ಸಮ್ಮೇಳ ನದ ಉದ್ದೇಶವಾಗಿದೆ. ಪ್ಯಾಸಿಸ್ಟ್ ಸಂಸ್ಕøತಿ ಮತ್ತು ಸರ್ವಾಧಿಕಾರವನ್ನು ಕೊನೆಗೊಳ್ಳಬೇಕಿದೆ ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ 17 ಜಿಲ್ಲೆಗಳಲ್ಲಿ ಜನಶಕ್ತಿ ಸಂಘಟನೆ ಅನೇಕ ಹೋರಾಟಗಳನ್ನು ಮಾಡಿದೆ. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ದಲಿತರಿಗೆ ಸ್ಮಶಾನ ಭೂಮಿ, ಭೂ ರಹಿತರಿಗೆ ಭೂಮಿ, ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿನ ಪಠ್ಯ ಪರಿಷ್ಕರಣ ಸಮಿತಿ ವಿರುದ್ಧ ಸೇರಿದಂತೆ ಅನೇಕ ಹೋರಾಟಗಳನ್ನು ಮಾಡಿದ್ದೇವೆ ಎಂದರು.
ದುಡಿಯುವ ಜನ, ದಮನಿರತರ ಮತ್ತು ಯುವಜನತೆಯ ಏಳಿಗೆಗಾಗಿ ಜನಜಾಗೃತಿ ಮೂಡಿ ಸಲು ಜನಶಕ್ತಿ ಸಂಘಟನೆ ದುಡಿಯುತ್ತಿದ್ದು, ಈಗೀನ ಸರ್ಕಾರಗಳ ಸರ್ವಾಧಿಕಾರಿ ಧೋರಣೆ ಯನ್ನು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸಮ್ಮೇಳನವನ್ನು ಆಯೋಜಿಸ ಲಾಗಿದೆ ಎಂದು ತಿಳಿಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕ ಗೌಸ್ ಮೋಹಿದ್ದೀನ್ ಮಾತನಾಡಿ, ಒತ್ತುವರಿ ಭೂಮಿ ಯನ್ನು ಭೂ ಮಾಲೀಕರಿಗೆ ಲೀಸ್‍ಗೆ ನೀಡಲು ಸರ್ಕಾರ ಮುಂದಾಗಿದೆ. ಇದು ಅವೈಜ್ಞಾನಿಕ ವಾಗಿದ್ದು, ಒತ್ತುವರಿ ತೆರವು ಭೂಮಿಯನ್ನು ಭೂ ಹೀನರಿಗೆ ನೀಡಬೇಕು ಎಂದು ಒತ್ತಾಯಿ ಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಮಾತನಾಡಿದರೇ ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತಿದೆ. ನಗರಸಭೆಯಿಂದ ಜೆಸಿಬಿ ಕಾರ್ಯಾ ಚರಣೆ ನಡೆಸುತ್ತಿದ್ದು, ಬಡವರನ್ನು ಗುರಿಯಾಗಿಸಲಾಗುತ್ತಿದೆ. ಶಾಸಕ ಸಿ.ಟಿ.ರವಿ ಕೆರೆ ಒತ್ತುವರಿ ಮಾಡಿದ್ದಾರೆ ಅಲ್ಲಿಗೆ ಏಕೆ ಜೆಸಿಬಿ ಹೋಗುವುದಿಲ್ಲ ಎಂದು ಪ್ರಶ್ನಿಸಿದರು.
18 ರಿಂದ 21ವರ್ಷದ ಯುವಕರನ್ನು ಸೇನೆಗೆ ನೇಮಿಸಿಕೊಳ್ಳುವ ಅಗ್ನಿಪಥ ಯೋಜನೆಯ ಮೂಲಕ ಗೂಂಡಾ ಪಡೆಯನ್ನು ಹುಟ್ಟುಹಾಕುವ ಷಡ್ಯಂತರವನ್ನು ಸರ್ಕಾರ ನಡೆಸುತ್ತಿದೆ. ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹೇಳುವಂತೆ ಸೈನ್ಯದಲ್ಲಿ 4ವರ್ಷಗಳ ತರಬೇತಿಯನ್ನು ನೀಡಲಾಗುತ್ತದೆ. ಕೇವಲ 6 ತಿಂಗಳಲ್ಲಿ ತರಬೇತಿಯನ್ನು ನೀಡಲು ಸಾಧ್ಯವೇ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಟಿ.ಎಲ್.ಗಣೇಶ್ ಸೇರಿದಂತೆ ಅನೇಕರು ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!