May 18, 2024

MALNAD TV

HEART OF COFFEE CITY

ಭೀಮರಾವ್ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ

1 min read

ಚಿಕ್ಕಮಗಳೂರು : ದೇಶದ ಅಪ್ರತಿಮವಾದ ಸಂವಿಧಾನವನ್ನು ರಚಿಸಿ ಕೋಟ್ಯಾಂತರ ಜನರ ಹಣೆಬರಹವನ್ನೇ ಬದಲಾಯಿಸಿದ ಮಹಾಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್‌ರವರ ಬದುಕು ಜಗತ್ತಿಗೆ ಸ್ಪೂರ್ತಿ ಎಂದು ಕಳಸಾಪುರ ಶಿಕ್ಷಕ ಕೆ.ಹೆಚ್.ಗಂಗಾಧರ್ ಸ್ಮರಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಭೀಮರಾವ್ ಕ್ಷೇಮಾಭಿವೃಧ್ದಿ ಸಂಘ ರಚನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಸಾಧಕರ ಸನ್ಮಾನ ಮತ್ತು ಅಂಬೇಡ್ಕರ್ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಬಾಬಾಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್ ಅತ್ಯಂತ ಕಡು ಬಡತನ ಮತ್ತು ಅಸ್ಪಶ್ಯತೆಯ ಬೆಂಕಿಯ ಕುಲುಮೆಯಲ್ಲಿ ಬೆಂದವರು. ಕಷ್ಟಗಳಿಗೆ ಕುಗ್ಗದೇ ಶ್ರದ್ದೆಯಿಂದ ವಿದ್ಯಾಭ್ಯಾಸ ಮಾಡಿ ಪ್ರಪಂಚದಲ್ಲಿ ಅತಿಹೆಚ್ಚು ಗೌರವ ಪಡೆಯುವ ಮೂಲಕ ದೇಶದ ಶೋಷಿತರು, ಬಡವರ ಧ್ವನಿಯಾಗಿ ದುಡಿದವರು ಎಂದರು.
ಒAದು ಕಾಲದಲ್ಲಿ ದಲಿತ ಎಂಬ ಕಾರಣಕ್ಕೆ ಅವರನ್ನು ಶಾಲೆಗೆ ಸೇರಿಸಿಕೊಳ್ಳಲು ಶಿಕ್ಷಕರು ನಿರಾಕರಿ ಸಿದ್ದರು. ಅವರಿಗೆ ಓದಲು ಗ್ರಂಥಾಲಯದಿOದ ಪುಸ್ತಕ ಕೊಡುತ್ತಿರಲಿಲ್ಲ. ಆದರೆ ಇಡೀ ದೇಶವೇ ಕೈ ಮುಗಿದು ನಮಸ್ಕರಿಸುವಂತಹ ಸಂವಿಧಾನವನ್ನು ಪುಸ್ತಕ ಬರೆದು ಕೊಡುಗೆ ನೀಡಿದ್ದಾರೆ. ಛಲ, ಹಠ ಮತ್ತು ಸಾಧನೆಗೆ ಮತ್ತೊಂದು ಹೆಸರೇ ಅಂಬೇಡ್ಕರ್ ಎಂದು ಕೊಂಡಾಡಿದರು.
ಪೌರ ಕಾರ್ಮಿಕ ಸಂಘದ ಉಪಾಧ್ಯಕ್ಷ ಸಿ.ಬಿ.ನಾಗರಾಜ್ ಮಾತನಾಡಿ ಸ್ವಾತಂತ್ರö್ಯ ಸಮಾನತೆ ಹಾಗೂ ಬ್ರಾತೃತ್ವ ಭಾವನೆ ಮೂಲಕ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಮಾನ ಸ್ಥಾನಮಾನ ಕಲಿಸಿಕೊಟ್ಟವರು ಅಂಬೇಡ್ಕರ್. ಇದಕ್ಕೆ ಮೂಲ ಕಾರಣ ಬಾಲ್ಯದಿಂದಲೂ ಬಡತನ ಅಸಮಾನತೆ, ಅಪಮಾನಗಳಿಂದಲೇ ರೋಸಿ ಹೋಗಿದ್ದರು ಇದಕ್ಕೆ ಮುಕ್ತಿ ಹಾಡಲು ಶಿಕ್ಷಣದ ಮೂಲಕ ಹೊಸ ಕ್ರಾಂತಿ ಆರಂಭಿಸಿದರು ಎಂದರು.
ಸಂಘದ ಗೌರವ ಅಧ್ಯಕ್ಷರಾದ ಆನಿಲ್ ಆನಂದ್ ಮತ್ತು ಕೆ.ಕುಮಾರ್ ಮಾತನಾಡಿ ಸರ್ವರಿಗೂ ಸಮಪಾಲು ಸಮಬಾಳು, ಸಮಾನತೆ ಸ್ವಾತಂತ್ರö್ಯ ಅಡಿಯಲ್ಲೇ ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನ ರಚಿಸ ಭಾರತಕ್ಕೆ ಕೊಡುಗೆ ನೀಡಿದ ಮಹಾಶಯ ಹಿಂದುಳಿದವರು, ಶೋಷಿತರು, ಮಹಿಳೆಯರ ಏಳಿಗೆಗೆ ಶ್ರಮಿಸಿದವರು ಅವರ ಸ್ಮರಣೆ ನಿರಂತರವಾಗಿಬೇಕು ಎಂದರು.
ಇದೇ ವೇಳೆ ಭೀಮರಾವ್ ಕ್ಷೇಮಾಭಿವೃದ್ದಿ ಸಂಘದ ನೂತನ ಅಧ್ಯಕ್ಷರಾಗಿ ಮುರುಗೇಶ್, ಉಪಾಧ್ಯಕ್ಷರಾಗಿ ಟಿ.ರಮೇಶ್, ಆರ್.ಸರವಣ, ಪ್ರವೀಣ್ ಗುಂಡ, ಜಿಲ್ಲಾ ಮಹಿಳಾ ಅಧ್ಯಕ್ಷೆ ಜಿ.ಮಂಜುಶ್ರೀ, ಖಜಾಂಚಿ ಟಿ.ಪಿ.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಜೆ.ಸತ್ಯನಾರಾಯಣ, ಸಂಘಟನಾ ಕಾರ್ಯದರ್ಶಿ ರಂಜಿತ್‌ಶೆಟ್ಟಿ, ಕೃಷ್ಣಕುಮಾರ್, ಸಹ ಕಾರ್ಯದರ್ಶಿಗಳಾಗಿ ಲೋಕೇಶ್, ಆನಂದ್, ಕಾನೂನು ಸಲಹೆಗಾರರಾಗಿ ವಕೀಲ ಎಸ್.ಪ್ರಕಾಶ್ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಮುರುಗೇಶ್ ವಹಿಸಿದ್ದರು. ನಂತರ ಪೌರ ಕಾರ್ಮಿಕರಿಗೆ ಕಿಟ್ ವಿತರಣೆ ಜೊತೆಗೆ ಕೊರೊನಾ ಸಮಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಾಧಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ವಿಶ್ವನಾಥ್, ಕಾರ್ಯಕಾರಿ ಮಂಡಳಿ ಸದಸ್ಯರುಗಳಾದ ಮಧು, ಭರತ್, ಶಶಿಕುಮಾರ್, ವಿಜಯ್, ಜನಾರ್ಧನ್, ಅರುಣ್, ಸಂತೋಷ್, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!