May 7, 2024

MALNAD TV

HEART OF COFFEE CITY

ಜನರೇಟರ್‌ಗಳು ದಸರಾ ವೇಳೆಯಲ್ಲಿ ಪೂಜೆಗೆ ಮಾತ್ರ ಸಿಮೀತ

1 min read

ದಸರಾ ಪೂಜೆಗೆ ಜನರೇಟರ್ ಸಿಮೀತ

ಚಿಕ್ಕಮಗಳೂರು: ಬಿಜೆಪಿ ಅಭ್ಯರ್ಥಿ ಎಂ.ಕೆ ಪ್ರಾಣೇಶ್ ಗ್ರಾಮ ಪಂಚಾಯಿತಿಗಳಿಗೆ ಜನರೇಟರ್ ಕೊಟ್ಟಿರುವುದೇ ದೊಡ್ಡ ಸಾಧನೆ ಎಂದು ಬಿಂಬಿಸುತ್ತಿದ್ದಾರೆ. ಆ ಜನರೇಟರ್‌ಗಳು ದಸರಾ ವೇಳೆಯಲ್ಲಿ ಪೂಜೆಗೆ ಮಾತ್ರ ಸಿಮೀತವಾಗಿದ್ದು ಪಂಚಾಯಿತಿಗಳಿಗೆ ಜನರೇಟರ್ ಹೊರೆಯಾಗಿದೆ ಎಂದು ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಟೀಕಿಸಿದರು.

ನಗರದಲ್ಲಿ ಪ್ರೆಸ್‌ಕ್ಲಬ್‌ನಲ್ಲಿ ಈ ಕುರಿತು ಮಾತನಾಡಿದ ಅವರು, ೬ ವರ್ಷದಲ್ಲಿ ತಮ್ಮ ಕ್ಷೇತ್ರಕ್ಕೆ ಬಂದ ೧೨ ಕೋಟಿ ಅನುದಾನವನ್ನು ಕೇವಲ ಜನರೇಟರ್‌ಗೆ ಬಳಸಿ ಬಾವಿಯೊಳಗಿನ ಕಪ್ಪೆಯಂತೆ ಅವರು ಕೆಲಸ ಮಾಡಿದ್ದು ವಿಶಾಲವಾಗಿ ಯೋಚಿಸಿಲ್ಲ. ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಯಲ್ಲಿ ಅನೇಕ ಸಮಸ್ಯೆಗಳಿವೆ ಅವುಗಳಿಗೆ ಸ್ಪಂದಿಸುವಲ್ಲಿ ಅವರು ಹಿಂದೆ ಉಳಿದಿದ್ದಾರೆ ಎಂದರು.

ಜಿಲ್ಲೆಯ ಬಯಲು ಸೀಮೆಯ ಹಲವು ಮೂಲಭೂತ ಸಮಸ್ಯೆಗಳ ಬಗ್ಗೆ ಎಂ.ಕೆ ಪ್ರಾಣೇಶ್ ತಮ್ಮ ಅವಧಿಯಲ್ಲಿ ಚಿಂತಿಸಿಲ್ಲ. ಮಲೆನಾಡು ಭಾಗದಲ್ಲಿ ಅತಿವೃಷ್ಟಿ ಉಂಟಾದ ಸಂದರ್ಭದಲ್ಲಿ ಉಂಟಾದ ನಷ್ಟಕ್ಕೆ ಈ ವರೆಗೆ ಪರಿಹಾರ ಸಿಕ್ಕಿಲ್ಲ ಇಂತಹ ಕಾರ್ಯಗಳಿಗೆ ಅವರು ಮೊದಲು ಆದ್ಯತೆ ನೀಡಬೇಕಿತ್ತು ಎಂದು ಹೇಳಿದರು.

ಈ ಹಿಂದೆ ಗಾಯತ್ರಿ ಶಾಂತೇಗೌಡ ವಿಧಾನ ಪರಿಷತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ೮೦ ವಿಕಲ ಚೇತನರಿಗೆ ತ್ರಿಚಕ್ರ ವಾಹನವನ್ನು ನೀಡಿದ್ದಾರೆ. ನಗರಕ್ಕೆ ಮಹಿಳಾ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರ ಸ್ಥಾಪನೆ, ಮಲೆನಾಡು ಅಭಿವೃದ್ಧಿ ನಿಗಮದಿಂದ ೧ ಕೋಟಿ ಅನುದಾನ, ಎಪಿಎಂಸಿ ಪ್ರಾಂಗಣ ಅಭಿವೃದ್ಧಿಗೆ ೫೦ ಲಕ್ಷ, ತಮ್ಮ ಕ್ಷೇತ್ರಾಭಿವೃದ್ಧಿ ಅನುದಾನದಿಂದ ಸಾರ್ವಜನಿಕ ಆಸ್ಪತ್ರೆಗೆ ೨ ಡಯಾಲಿಸಿಸ್ ವ್ಯವಸ್ಥೆ ಹಾಗೂ ಸಿ,ಎಂ ಪರಿಹಾರ ನಿಧಿಯಿಂದ ಜಿಲ್ಲೆಯ ಹಲವು ಜನರಿಗೆ ೨ ಕೋಟಿ ನೆರವು ಕೊಡಿಸುವ ಮೂಲಕ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.

ನಗರಸಭೆ ಚುನಾವಣೆ ನಡೆಯದೇ ಮೂರುವರೆ ವರ್ಷಗಳು ಕಳೆದ್ರೂ ಸಹ ವಿಧಾನ ಪರಿಷತ್ ಸದಸ್ಯರಾಗಿದ್ದ ಎಂ.ಕೆ ಪ್ರಾಣೇಶ್ ಚುನಾವಣೆ ವಿಳಂಭ ಕುರಿತು ಸರ್ಕಾರಕ್ಕೆ ಎಷ್ಟು ಬಾರಿ ಪತ್ರ ಬರೆದಿದ್ದಾರೆ ಎಂದು ಉತ್ತರಿಸಲಿ ಎಂದು ಇದೇ ವೇಳೆ ಪ್ರಶ್ನಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡ ರವೀಶ್ ಕ್ಯಾತನಬೀಡು, ಲಕ್ಯಾ ಗ್ರಾ.ಪಂ ಮಾಜಿ ಅಧ್ಯಕ್ಷ ಕಾಂತರಾಜ್ ಅರಸ್, ನಟೇಶ್ ಇದ್ದರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!