May 1, 2024

MALNAD TV

HEART OF COFFEE CITY

ಪ್ರಯೋಗಶೀಲ ರೈತರಿಗೆ ಉಚಿತ ಸೋಯಾಬಿನ್ ಬೀಜ ವಿತರಣೆ

1 min read

ಚಿಕ್ಕಮಗಳೂರು : ಲೈಫ್ ಲೈನ್ ಫೀಡ್ಸ್ ಇಂಡಿಯಾ ಪೈವೇಟ್ ಲಿಮಿಟೆಡ್ ಕಂಪನಿಯು ರೈತರಿಗೆ ಸೋಯಾ ಬಿತ್ತನೆ ಬೀಜಗಳ ಉಚಿತ ವಿತರಣಾ ಸಮಾರಂಭವನ್ನು ನಗರದ ಹೊರವಲಯದಲ್ಲಿರುವ ಕನಕ ಭವನ ದಲ್ಲಿ ಆಯೋಜಿಸಿತ್ತು.

 

ರಾಜ್ಯದಲ್ಲಿರುವ ಪ್ರಗತಿಪರ ಹಾಗೂ ಪ್ರಯೋಗಶೀಲಾ ರೈತರ ಆರ್ಥಿಕ ಅಭಿವೃದ್ಧಿಗಾಗಿ ಹೊಸ ಚಿಂತನೆಯೊಂದಿಗೆ ಲೈಫ್ ಲೈನ್ ಫೀಡ್ಸ್ ಇಂಡಿಯಾ ಪೈವೇಟ್ ಲಿಮಿಟೆಡ್ ಕಂಪನಿಯ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರಾದ ಕೆ. ಕಿಶೋರ್ ಹೆಗ್ಡೆ ಯವರ ದೂರಾಲೋಚನೆಯ ದೃಷ್ಠಿಯಿಂದ ಬಂಗಾರದ ಧಾನ್ಯ ಎಂದೆ ಹೆಸರಾದ ಸೋಯಾ ಬೀನ್ ಬೀಜಗಳನ್ನು ಪ್ರಾಯೋಗಿಕವಾಗಿ ಬಿತ್ತನೆ ಮಾಡಲು ಉಚಿತ ವಿತರಣೆಯನ್ನು ರಾಜ್ಯದ ರೈತರಿಗೆ ಮಾಡಿದರು.

ಮಲ್ನಾಡ್ ಟಿವಿಯೊಂದಿಗೆ ಮಾತನಾಡಿದ ಲೈಫ್ ಲೈನ್ ಫೀಡ್ಸ್ ಇಂಡಿಯಾ ಪೈವೇಟ್ ಲಿಮಿಟೆಡ್ ಕಂಪನಿಯ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರಾದ ಕೆ. ಕಿಶೋರ್ ಹೆಗ್ಡೆ, ಮಾರುಕಟ್ಟೆಯಲ್ಲಿ ಸೋಯಾ ಬೀನ್ ಬೆಲೆ ಆಕಾಶಕ್ಕೇರುತ್ತಿದ್ದು, ಕೋಳಿ ಸಾಕಾಣಿಕೆಗೆ ಸೋಯಾ ಬೀನ್ ಮುಖ್ಯವಾಗಿದೆ. ದುಬಾರಿ ಬೆಲೆ ಕೊಟ್ಟು ನೆರೆಹೊರೆಯ ರಾಜ್ಯಗಳಿಂದಲ್ಲದೇ, ವಿದೇಶಗಳಿಂದಲೂ ರಪ್ತು ಮಾಡಿಕೊಳ್ಳುತ್ತಿದ್ದೇವೆ. ಸೋಯಾ ಬೀನ್ ಅನ್ನು ನಮ್ಮ ಜಿಲ್ಲೆ ಹಾಗೂ ರಾಜ್ಯದಲ್ಲೇ ಬೆಳೆದರೆ ನಮ್ಮ ರೈತರಿಗೆ ಉತ್ತಮ ಆದಾಯ ಮೂಲವಾಗುತ್ತದೆ. ನಾನು ಶೇಕಡಾ 20 ರಷ್ಟು ಸವಾಲನ್ನು ಸ್ವೀಕರಿಸಿದರೆ ನಮ್ಮ ರೈತರ ಶೇಕಡಾ 80 ರಷ್ಟು ಸವಾಲು ಸ್ವೀಕರಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.

ಇದೇ ವೇಳೆ ಜಿಲ್ಲೆಯಿಂದಲ್ಲದೆ ದೂರದೂರದ ಜಿಲ್ಲೆಗಳಿಂದ ಬಂದ ರೈತರು ತಮ್ಮ ಅನಿಕೆಯನ್ನು ವ್ಯಕ್ತಪಡಿಸಿದ್ದು, ಕಾರ್ಯಕ್ರಮಕ್ಕೆ ಬಂದಂತಹ ರೈತರಿಗೆ ಉತ್ತಮ ಅತಿಥ್ಯವನ್ನು ನೀಡಿದ್ದಲ್ಲದೆ, ರೈತರ ಬದುಕನ್ನು ಹಸನುಗೊಳಿಸಲು ಲೈಫ್ ಲೈನ್ ಫೀಡ್ಸ್ ಇಂಡಿಯಾ ಪೈವೇಟ್ ಲಿಮಿಟೆಡ್ ಕಂಪನಿಯ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರಾದ ಕೆ. ಕಿಶೋರ್ ಹೆಗ್ಡೆಯವರು ಕಟಿಬದ್ದರಾಗಿದ್ದು, ರೈತರು ಪ್ರಯೋಗಶೀಲರಾಗುವುಂತೆ ಉತ್ತೇಜಿಸುತ್ತಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಇವರು ಮಾಡುತ್ತಿದ್ದು, ಲೈಪ್ ಲೈನ್ ಅನ್ನು ನಂಬಿದ ರೈತರು ಯಾರು ಕೆಟ್ಟಿಲ್ಲ. ಇದನ್ನು ನಾವು ಪ್ರಯೋಗ ಮಾಡುತ್ತೇವೆ ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!