May 18, 2024

MALNAD TV

HEART OF COFFEE CITY

ಕೊನೆಗೂ ಆಯ್ತು ಲವ್ ಜಿಹಾದ್ ಹಣೆಪಟ್ಟಿ ಜೋಡಿ ವಿವಾಹ : ಹಿಂದು ಪದ್ದತಿ ನಾ ಮುಸ್ಲಿಂ ಪದ್ದತಿ ನಾ

1 min read

ಲವ್ ಜಿಹಾದ್ ಆರೋಪ ಹೊತ್ತಿದ್ದ ಯುವ ಜೋಡಿ ಇದೀಗ ಅಧಿಕೃತವಾಗಿ ಒಂದಾಗಿದ್ದಾರೆ.

ಕೊನೆಗೂ ಸಬ್ ರಿಜಿಸ್ಟರ್ ಕಚೇರಿ ಬಳಿ ಹಾರ ಬದಲಿಸಿಕೊಳ್ಳುವ ಮೂಲಕ ಜಾಫರ್ ಹಾಗೂ ಚೈತ್ರ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ, ಪ್ರಾಣ ಭೀತಿ ನಡುವೆ ಇಂದು ಪತ್ರಿಕಾಗೋಷ್ಠಿಯಲ್ಲಿ ಸಂಪೂರ್ಣ ಮಾಹಿತಿ ನೀಡಿ ನಂತರ ನಮಗೆ ಹಿಂದು ಸಂಘಟನೆಗಳಿಂದ ಬೆದರಿಕೆ ಇದ್ದು ರಕ್ಷಣೆ ನೀಡುವಂತೆ ಎಸ್ಪಿ ಕಚೇರಿಗೆ ತೆರಳಿ ಲಿಖಿತ ಹೇಳಿಕೆ ನೀಡಿದರು. ನಂತರ ಉಪ ನೋಂದಣಾಧಿಕಾರಿ ಕಚೇರಿಗೆ ಆಗಮಿಸಿ ಹೊಸದಾಗಿ ವಿವಾಹದ ಅರ್ಜಿ ಸಲ್ಲಿಸಿದರು, ಎಲ್ಲಾ ದಾಖಲೆಗಳನ್ನು ನೀಡಿ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಹಾರ ಬದಲಿಸಿಕೊಂಡರು, ಈ ವೇಳೆ ದಲಿತ ಸಂಘಟನೆಗಳ ಮುಖಂಡರಾದ ಶ್ರೀನಿವಾಸ್, ಹೊನ್ನೇಶ್, ಎಸ್ ಡಿ ಪಿಐ ಜಿಲ್ಲಾಧ್ಯಕ್ಷ ಗೌಸ್ ಮುನೀರ್ ಸೇರಿದಂತೆ ಹಲವರು ಹಾಜರಿದ್ದರು. ಆದರೆ ಮತ್ತೊಮ್ಮೆ ಸಾಂಪ್ರದಾಯಿಕ ವಾಗಿ ವಿವಾಹ ಆಗುವುದಾಗಿಯೂ ನವ ಜೋಡಿ ತಿಳಿಸಿದೆ, ಈ ನಡುವೆ ಹಿಂದೂ ಧರ್ಮದಂತೆ ಅಥವಾ ಮುಸ್ಲಿಂ ಧರ್ಮದಂತೆ ವಿವಾಹ ನಡೆಯಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!