May 15, 2024

MALNAD TV

HEART OF COFFEE CITY

ದತ್ತಜಯಂತಿ ಬಿಗಿ ಪೊಲೀಸ್ ಬಂದೂಬಸ್ತ್ _ ಎಂ.ಹೆಚ್ ಅಕ್ಷಯ್

1 min read

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ತಪ್ಪಲಿನಲ್ಲಿರುವ ದತ್ತಪೀಠದಲ್ಲಿ ಶುಕ್ರವಾರ ಗಣಹೋಮದೊಂದಿಗೆ ದತ್ತಜಯಂತಿ ವಿಧ್ಯುಕ್ತವಾಗಿ ಆರಂಭಗೊಳ್ಳುತ್ತಿದ್ದು, ಶಾಂತಿಸುವ್ಯವಸ್ಥೆಯನ್ನು ಕಾಪಾಡಲು ಜಿಲ್ಲಾದ್ಯಂತ 3320 ಮಂದಿ ಪೊಲೀಸನ್ನು ನಿಯೋಜಿಸಲಾಗಿದೆ.

ಪೀಠದಲ್ಲಿ ಡಿ.17ರಂದು ಅನಸೂಯದೇವಿ ಪೂಜೆ ನಡೆದರೆ, ೧೮ಕ್ಕೆ ನಗರದಲ್ಲಿ ಬೃಹತ್ ಶೋಭಾಯಾತ್ರೆ, ಆಜಾದ್‌ವೃತ್ತದಲ್ಲಿ ಸಾರ್ವಜನಿಕ ಸಭೆ ನಡೆಯುವುದು, ಡಿ.19 ರಂದು ದತ್ತಪೀಠಕ್ಕೆ ದತ್ತಭಕ್ತರು ಇರುಮುಡಿ ಹೊತ್ತು ಸಾಗುತ್ತಿದ್ದು, ಪೀಠದ ಹಸಿರಿನಂಗಳದಲ್ಲಿ ಕೇಸರಿಯ ರಂಗು ಮೂಡಲಿದೆ.

ದತ್ತಪೀಠದಲ್ಲಿ ಅನಸೂಯದೇವಿಪೂಜೆ, ಗಣಪತಿಹೋಮ, ದುರ್ಗಾಹೋಮವನ್ನು ಋತ್ವಿಜರು ನಡೆಸಿಕೊಡಲಿದ್ದಾರೆ. ಇತ್ತ ನಗರದಲ್ಲಿ ನಗರಸಂಕೀರ್ತನಾ ಯಾತ್ರೆ ನಡೆಯುವುದು. ಬೆಳಿಗ್ಗೆ ೮.೩೦ಕ್ಕೆ ಬೋಳರಾಮೇಶ್ವರ ದೇವಾಲಯ ಆವರಣದಿಂದ ಆರಂಭಗೊಳ್ಳುವ ಮೆರವಣಿಗೆ ಮುಖ್ಯರಸ್ತೆಯಲ್ಲಿ ಸಂಚರಿಸಿ, ಕಾಮಧೇನು ಗಣಪತಿ ದೇವಾಲಯ ಬಳಿ ಮುಕ್ತಾಯಗೊಳ್ಳಲಿದೆ.
ಸಂಕೀರ್ತನಾ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುತ್ತಿದ್ದು, ದತ್ತಾತ್ರೇಯರ ನಾಮಸ್ಮರಣೆಯೊಂದಿಗೆ ಯಾತ್ರೆ ಸಾಗಲಿದೆ. ವಿವಿಧ ಮಹಿಳಾ ಭಜನಾಮಂಡಳಿಗಳು ಪಾಲ್ಗೊಳ್ಳುತ್ತವೆ. ದತ್ತಾತ್ರೇಯರ ಅಡ್ಡೆಯನ್ನು ದತ್ತಭಕ್ತರು ಹೊತ್ತು ಪೀಠಕ್ಕೆ ಕೊಂಡೊಯ್ಯಲಿದ್ದಾರೆ.
ಭಕ್ತರು ಸರದಿಸಾಲಿನಲ್ಲಿ ಸಾಗಿ ದತ್ತಪಾದುಕೆಗಳ ದರ್ಶನ ಪಡೆಯುವರು. ಅನಸೂಯದೇವಿಗೆ ಪೂಜೆ ಸಲ್ಲಿಸುವರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರಿಗೆ ಕಾರ್ಯಕ್ರಮ ಸಂಘಟಕರು ಬಳೆಗಳು ಮತ್ತು ಅರಿಶಿಣ,ಕುಂಕುಮ ನೀಡುವರು.

* ಬಿಗಿ ಪೊಲೀಸ್ ಬಂದೋಬಸ್ತ್

ದತ್ತಜಯoತಿಯಲ್ಲಿ ಅಹಿತಕರ ಘಟನೆಗಳು ಸಂಭವಿಸದoತೆ ಮನ್ನೆಚ್ಚರಿಕೆ ಕ್ರಮವಾಗಿ ಬಿಗಿಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ಒಟ್ಟು 3320 ಪೊಲೀಸರನ್ನು ನಿಯೋಜಿಸಲಾಗಿದೆ. 1 ಎಸ್ಪಿ, ಹೆಚ್ಚುವರಿ ಪೊಲೀಸ್‌ಮುಖ್ಯಾಧಿಕಾರಿ ೩, ಡಿವೈಎಸ್ಪಿ11, ವೃತ್ತನಿರೀಕ್ಷಕರು 31, ಠಾಣಾಧಿಕಾರಿ 141,ಸಹ ಠಾಣಾಧಿಕಾರಿ 171, ಮುಖ್ಯಪೇದೆ 718, ಪೊಲೀಸರು1103, ಮಹಿಳಾ ಪೊಲೀಸರು 136, ಗೃಹರಕ್ಷಕದಳ 500, 14 ಕೆಎಸ್‌ಆರ್‌ಪಿ ತುಕಡಿ, 21 ಸಶಾಸ್ತçಮೀಸಲು ಪಡೆಗಳನ್ನು ಹಾಕಲಾಗಿದೆ.
ಸಮಾಜ ಘಾತುಕಶಕ್ತಿಗಳ ಮೇಲೆ ನಿಗಾ ಇಡಲು ೨೩ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಳನ್ನು ತೆರೆಯಲಾಗಿದೆ. ಇಲ್ಲಿ ಸಿಸಿಕ್ಯಾಮರ ಅಳವಡಿಸಿದ್ದು, ಡಿ.15ರ ರಾತ್ರಿಯಿಂದ ಡಿ.20ರ ಬೆಳಿಗ್ಗೆವರೆಗೆ ಕಾರ್ಯನಿರ್ವಹಿಸಲಿವೆ.ಚೆಕ್ ಪೋಸ್ಟ್ ಲ್ಲಿ ಕರ್ತವ್ಯ ನಿರ್ವಹಿಸಲು 66 ವಿಶೇಷ ಕಾರ್ಯನಿರ್ವಹಕಾಧಿಕಾರಿಯನ್ನು ನಿಯೋಜಿಸಲಾಗಿದೆ.

 

 

 

 

 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!