May 18, 2024

MALNAD TV

HEART OF COFFEE CITY

ಶಿಕ್ಷಕರ ದಿನಾಚಾರಣೆಯಂದು ಮಾತ್ರ ಶಿಕ್ಷಕರನ್ನು ಸ್ಮರಿಸದೇ ಪ್ರತಿ ದಿನವು ಅವರನ್ನು ಸ್ಮರಿಸಬೇಕು- ಎಚ್.ಡಿ.ತಮ್ಮಯ್ಯ

1 min read

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ 136ನೇ ಜನ್ಮ ದಿನೋತ್ಸವ ಮತ್ತು 62ನೇ ಶಿಕ್ಷಕರ ದಿನಾಚಾರಣೆ ಅಂಗವಾಗಿ ಚಿಕ್ಕಮಗಳೂರು ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚಾರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು  ಕುವೆಂಪು ಕಲಾ ಮಂದಿರದಲ್ಲಿ ಆಚರಿಸಲಾಯಿತು. 

ಶಾಲಾ ಶಿಕ್ಷಣ ಇಲಾಖೆ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಶಿಕ್ಷಕರ ದಿನಾಚಾರಣಾ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಡಿ ನಡೆಸುತ್ತಿರುವ ಶಿಕ್ಷಕರ ದಿನಾಚಾರಣೆ ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾಸಕ ಎಚ್.ಡಿ.ತಮ್ಮಯ್ಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ  

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ 136ನೇ ಜನ್ಮ ದಿನೋತ್ಸವ ಮತ್ತು 62ನೇ ಶಿಕ್ಷಕರ ದಿನಾಚಾರಣೆ ಅಂಗವಾಗಿ ಶಿಕ್ಷಕರ ದಿನಾಚಾರಣೆಯನ್ನು ಆಚರಣೆ ಮಾಡಲಾಗುತ್ತಿದ್ದು, ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ, ಗುರುಸಾಕ್ಷಾತ್ ಪರಬ್ರಹ್ಮ ತಸ್ಮೆöÊಶ್ರೀ ಗುರುವೇ ನಮಃ ಎಂದು ಕ್ಷೇತ್ರದ ಎಲ್ಲಾ ಶಿಕ್ಷಕರಿಗು ಶಿಕ್ಷಕರ ದಿನಾಚಾರಣೆ ಶುಭಾಶಯಗಳನ್ನು ತಿಳಿಸಿದರು.

ಪ್ರತಿಯೊಬ್ಬರಿಗೂ ಒಳ್ಳೆ ವಿದ್ಯಾಭ್ಯಾಸ ನೀಡುವುದರ ಜೊತೆಗೆ ಜೀವನದಲ್ಲಿ ಒಳ್ಳೆಯ ಸ್ಥಾನವನ್ನು ಗಳಿಸಲು ಕಾರಣಕರ್ತರಾದ ಶಿಕ್ಷಕರನ್ನು, ಶಿಕ್ಷಕರ ದಿನಾಚಾರಣೆಯಂದು ಮಾತ್ರ ಶಿಕ್ಷಕರನ್ನು ಸ್ಮರಿಸದೇ ಪ್ರತಿ ದಿನವು ಅವರನ್ನು ಸ್ಮರಿಸಬೇಕು, ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮ ದಿನಾಚಾರಣೆ ಅಂಗವಾಗಿ 1962ರ ಸೆ. 5 ರಂದು ಶಿಕ್ಷಕರ ದಿನಾಚಾರಣೆ ಆಚರಣೆಗೆ ಬಂದಿತು, ಶಿಕ್ಷಕನಾಗಿ ವೃತ್ತಿಯನ್ನು ಪ್ರಾರಂಭಿಸಿದ ಅವರು ದೇಶದ ಮೋದಲ ರಾಷ್ಟಪತಿ ಮತ್ತು ಉಪರಾಷ್ಟç ಪತಿ ಆದವರು ಅವರು ಎಂದರು.

ಭಾರತ ದೇಶದಲ್ಲಿ ಸೆ. 5 ರಂದು ಶಿಕ್ಷಕರ ದಿನಾಚರಣೆ ಆಚರಿಸಿದರೆ, ಅ. 5 ರಂದು ವಿಶ್ವದಾದ್ಯಂತ ಶಿಕ್ಷಕರ ದಿನಾಚಾರಣೆ ಆಚರಣೆ ಮಾಡಲಾಗುತ್ತದೆ, ಜೀವ ತಾಯಿಯ ಬಿಕ್ಷೆ, ಬದುಕು ತಂದೆಯ ಬಿಕ್ಷೆಯಾದರೆ ಜ್ಞಾನ ಗುರುವಿನ ಬಿಕ್ಷೆ ಇಂತಹ ಜ್ಞಾನವನ್ನು ನೀಡುತ್ತಿರುವ ಜಗತ್ತಿನ ಎಲ್ಲಾ ಶಿಕ್ಷಕರಿಗೆ ಹೃದಯ ಪೂರ್ವಕವಾಗಿ ನಮಸ್ಕರಿಸಿದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳ ಗುರು, ಶ್ರೇಷ್ಠ ಶಿಕ್ಷಣ ತಜ್ಞ, ಮಾಜಿ ರಾಷ್ಟçಪತಿ, ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆ ಅಪಾರವಾದದ್ದು, ಅವರ ಜನ್ಮ ದಿನವಾದ ಸೆ. 5 ರಂದು ಶಿಕ್ಷಕರ ದಿನಾಚಾರಣೆಯನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.

 

 

ಶಿಕ್ಷಣ ಎಂದರೇ ಕೇವಲ ವ್ಯವಹಾರವಲ್ಲ, ಶಿಕ್ಷಣಕ್ಕೆ ತನ್ನದೇ ಆದಂತಹ ಮಹತ್ವವಿದೆ, ಒಬ್ಬ ವ್ಯಕ್ತಿಯ ಜೀವನದಲ್ಲಿ ಹುಟ್ಟಿನಿಂದ ಮರಣದ ವರೆಗೂ ಪ್ರತಿಯೊಂದು ಹಂತದಲ್ಲಿಯು ಶಿಕ್ಷಕರ ಮಾರ್ಗದರ್ಶನ ಅತ್ಯವಶಕ, ಶಿಲ್ಪಿ ಒಂದು ಕಲ್ಲನ್ನು ಕೆತ್ತಿ ಸುಂದೆ ಶಿಲೆಯನ್ನಾಗಿಸುವ ರೀತಿಯಲ್ಲಿ, ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿ ಅವರನ್ನು ದೇಶದ ಶಕ್ತಿಯನ್ನಾಗಿಸುವ ಸಾಮರ್ಥ್ಯವನ್ನು ಹೊಂದಿದವರು ಶಿಕ್ಷಕರು ಎಂದರು.

ಉಪ ವಿಭಾಗಾಧಿಕಾರಿ ರಾಜೇಶ್ ಮಾತನಾಡಿ ಜಿಲ್ಲಾಡಳಿತದ ಪರವಾಗಿ ಶಿಕ್ಷಕರ ದಿನಾಚರಣೆ ಶುಭಾಶಯವನ್ನು ತಿಳಿಸಿ ಇಂದು ನಾನು ಉಪ ವಿಭಾಗ ಅಧಿಕಾರಿಯಾಗಲು ಒಬ್ಬ ಗುರುವಿನ ಶ್ರಮವಿದೆ, ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನ ಪಡೆದಾಗ ಮಾತ್ರ ಉನ್ನತ ಸ್ಥಾನವನ್ನೇರಲು ಸಾದ್ಯ, ವಿದ್ಯಾರ್ಥಿಗಳ ಜೀವನವನ್ನು ಉತ್ತಮ ಮಾರ್ಗದಲ್ಲಿ ಕೊಂಡೋಯುವವರೇ ಶಿಕ್ಷಕರು ಎಂದರು.

ಆಧುನಿಕ ಕಾಲದಲ್ಲಿ ಶಿಕ್ಷಕರ ವೃತ್ತಿ ಎಂಬುದು ಸವಾಲಿನ ವಿಷಯವಾಗಿದೆ, ವಿದ್ಯಾರ್ಥಿಗಳಿಂದ ತಪ್ಪು ನಡೆದಾಗ ಒಳ್ಳೆಯ ಮಾರ್ಗದಲ್ಲಿ ನಡೆಸಲು ಶಿಕ್ಷಕರು ಯಾವುದೇ ಬುದ್ದಿವಾದ ಹೇಳುವುದಾಗಲಿ ಅಥವಾ ಶಿಕ್ಷೆಯನ್ನಾಗಲಿ ಕೊಡುವಂತಿಲ್ಲ, ಈ ರೀತಿ ನಡೆದಲ್ಲಿ ಅವರ ಮೇಲೆ ಆರೋಪ ನೀಡಿ ದೂರು ನೀಡಲಾಗುವುದು, ಈ ರೀತಿಯ ಒತ್ತಡಗಳು ಶಿಕ್ಷಕರ ಮೇಲಿದೆ, ಒತ್ತಡಗಳ ನಡುವೆಯು ಶಿಕ್ಷಕರು ಅವರ ಕೆಲಸವನ್ನು ಮಾಡುತ್ತಿದ್ದಾರೆ, ಇಂದಿನ ಶಿಕ್ಷಣ ವ್ಯವಸ್ಥೆ ಅಭಿವೃದ್ಧಿ ಹೊಂದಲು ಮೂಲ ಕಾರಣ ಶಿಕ್ಷಕರು ಎಂದರು.

ಉಪನ್ಯಾಸಕ, ಲೇಖಕ ಎಚ್.ಎಸ್.ಸತ್ಯನಾರಾಯಣ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್, ಕೆ.ಆರ್.ಉದಯ್‌ಕುಮಾರ್, ಸಹಾಯಕ ನಿರ್ದೇಶಕರು ಮದ್ಯಾಹ್ನ ಉಪಹಾರ ಯೋಜನೆ, ಪ್ರಭಾರಿ ಸಮನ್ವಯ ಅಧಿಕಾರಿ ಎಂ.ಎA.ನಾಗರಾಜ್ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್, ನಗರಸಭೆ ಉಪಾಧ್ಯಕ್ಷ ಅಮೃತೇಶ್‌ಚೆನ್ನಕೇಶವ, ನಾಗರಾಜ್, ಉದಯ್‌ಕುಮಾರ್, ಕೆ.ಎನ್.ಮಂಜುನಾಥ್, ಡಿ.ಪಿ.ಉಮೇಶ್, ಕೆ.ಎಂ.ಕುಮಾರ್, ಎಲ್.ಟಿ.ಅಜ್ಜಯ್ಯ, ಗಂಗಾಧರ್, ಪ್ರಹ್ಲಾದ್, ಶ್ರೀನಿವಾಸ್, ಸುಮಿತ್ರ, ಎಂ.ಬಿ.ಚAದ್ರೇಗೌಡ, ಸಿದ್ಧಮೂರ್ತಿ, ಸುಂದರೇಶ್, ಜೋಗಪ್ಪ, ಚಂದ್ರೇಗೌಡ, ಸಿ.ಎಸ್.ಸುರೇಶ್, ಶಂಕರೇಗೌಡ, ಗುರುಶಾಂತಪ್ಪ, ಶಿವಪ್ಪ.ಡಿ.ಎಸ್, ವಸಂತಕುಮಾರಿ, ಶಿವನಂಜೇಗೌಡ ಮತ್ತಿತರರು ಉಪಸ್ಥಿತರಿದ್ದರು. ವೀರೇಶ್ ಕೌಲಗಿ ನಿರೂಪಿಸಿ, ಟಿ.ಬಿ.ಕೆ ಅರಸ್ ವಂದಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!