April 29, 2024

MALNAD TV

HEART OF COFFEE CITY

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ; ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟನೆ

1 min read

ಚಿಕ್ಕಮಗಳೂರು: ಶಿಕ್ಷಕರು ಮಕ್ಕಳಿಗೆ ಕಾಯಬೇಕು ಹೊರತು ಮಕ್ಕಳು ಶಿಕ್ಷಕರಿಗೆ ಕಾಯಬಾರದು ಅದಕ್ಕಾಗಿ ರಾಜ್ಯದಲ್ಲಿರುವ ಶಿಕ್ಷಕರ ಸಮಸ್ಯೆಯನ್ನು ನಿವಾರಿಸುತ್ತೇನೆ. ಸರ್ಕಾರಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಮಕ್ಕಳು ವಾಪಾಸು ಸರ್ಕಾರಿ ಶಾಲೆಗೆ ಬರುವಂತೆ ಮಾಡುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಕಳಸ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ನಡೆದ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಭಾಗದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ನನ್ನ ಮೇಲೆರುವ ವಿಶ್ವಾಸದ ಮೇಲೆ ಮುಖ್ಯಮಂತ್ರಿಗಳು ಶಿಕ್ಷಣ ಸಚಿವನನ್ನಾಗಿ ಮಾಡಿದ್ದಾರೆ.ಈ ನಂಬಿಕೆಯನ್ನು ಯಾವತ್ತೂ ಹುಸಿ ಮಾಡದೆ ಶಿಕ್ಷಣ ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಕೇವಲ ಮೂರು ವರ್ಷಗಳಲ್ಲಿ ನಿವಾರಣೆ ಮಾಡುತ್ತೇನೆ.ಮಕ್ಕಳಿಗೆ ವಿದ್ಯಾಬ್ಯಾಸ ಕೊಡುವುದೇ ದೇವರ ಕೆಲಸ.ಈ ದೇವರ ಕೆಲಸವನ್ನು ಅತ್ಯಂತ ಶ್ರದ್ದೆಯಿಂದ ಮಕ್ಕಳ ತಂದೆ ತಾಯಿ ನನ್ನನ್ನು ನೆನಪಿಟ್ಟುಕೊಳ್ಳುವಂತೆ ಮಾಡುತ್ತೇನೆ.

ಎಲ್‌ಕೆಜಿಯಿಂದ 12ನೇ ತರಗತಿ ಒಂದೇ ಸೂರಿನಡಿಯಲ್ಲಿ ಮಕ್ಕಳು ವಿದ್ಯಾಬ್ಯಾಸ ಮಾಡುವ ನಿಟ್ಟಿನಲ್ಲಿ ಕೆಪಿಎಸ್ ಶಾಲೆಯನ್ನು ಮಾಡಲಾಗಿದೆ.ಈ ನಿಟ್ಟಿನಲ್ಲಿ ಕಳಸ ಕೆಪಿಎಸ್ ಶಾಲೆಯನ್ನು ಮೇಲ್ದಿದರ್ಜೆಗೆ ಏರಿಸಿ ಮತ್ತು ಹೊಸ ಕಟ್ಟಡಕ್ಕೆ ಅನುದಾನ ನೀಡುತ್ತೇನೆ ನಮ್ಮ ಸಂಸ್ಕೃತಿಯುನ್ನು ಉಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಕೆಪಿಎಸ್ ಶಾಲೆಗಳಲ್ಲಿ ಸಂಗೀತಾ ಶಿಕ್ಷಕರು ಮತ್ತು ಪಿಟಿ ಶಿಕ್ಷಕರನ್ನು ಆಟೆಂಟ್ ಲೋಕಲ್ ಕಲ್ಚರಲ್ ಶಿಕ್ಷಕರನ್ನು ನಿಯೋಜನೆ ಮಾಡುತ್ತೇನೆ. ಕಳಸಕ್ಕೆ ಬಹು ಬೇಡಿಕೆಯ ಪಾಲಿಟೆಕ್ನಿಕ್ ಕಾಲೇಜಿಗೆ ಇದಕ್ಕೆ ಸಂಬಂಧಿಸಿದ ಸಚಿವರ ಗಮನಕ್ಕೆ ನನ್ನ ಕಡೆಯಿಂದ ಸಾಕಷ್ಟು ಪ್ರಯತ್ನವನ್ನು ಮಾಡುತ್ತೇನೆ ಎಂದು ಹೇಳಿದರು.

ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಹೊರನಾಡು ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಮಾತನಾಡಿ, ಪ್ರತಿಯೊಂದು ಜೀವಿಯಲ್ಲೂ ವಿಶೇಷತೆ ಇರುತ್ತದೆ.ಇಂತಹ ಪ್ರತಿಭೆಗೆ ವೇದಿಕೆ ಅವಕಾಶ ಮಾಡಿಕೊಟ್ಟಾಗ ಅವರ ಪ್ರತಿಭೆಯನ್ನು ಹೊರತರಲು ಅವಕಾಶವಾಗುತ್ತದೆ.ಆ ಪ್ರತಿಭೆಯು ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ.ಸರ್ಕಾರಿ ಶಾಲೆಗಳಲ್ಲಿ ಕಲೆ ಮತ್ತು ಪರಂಪರೆಗೆ ಪೂರಕವಾಗಿರುವ ಸಂಪನ್ಮೂಲ ವ್ಯಕ್ತಿಗಳ ನಿಯೋಜನೆಯನ್ನು ಶಾಲೆಗೆ ಮಾಡಬೇಕು.ಇದರಿಂದ ಗ್ರಾಮೀಣ ಮಕ್ಕಳ ಪ್ರತಿಭೆಯನ್ನು ಹೊರ ಹಾಕಲು ಹೆಚ್ಚಿನ ಅವಕಾಶವಾಗುತ್ತದೆ.ವಿದ್ಯಾರ್ಥಿಗಳು ಆಸ್ತಿ ಮಾಡುವ ಬದುಲು ವಿದ್ಯಾರ್ಥಿಗಳೇ ದೇಶದ ಆಸ್ತಿಯಾಗಲಿ ಎಂದು ಹೇಳಿದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ ಪಠ್ಯೇತರ ಚಟುವಟಿಕೆಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಿದಾಗ ಇಂತಹ ಕಾರ್ಯಕ್ರಮಗಳಿಗೆ ಒಂದು ಅರ್ಥ ಬರುತ್ತದೆ.ನಮಗೆ ಅಧಿಕಾರ ಸಾಮಾನ್ಯ ನಮಗೆ ಸಿಕ್ಕಿದ ಸ್ಥಾನ ಮಾನದಲ್ಲಿ ನಮ್ಮ ಹೆಜ್ಜೆ ಗುರುತನ್ನು ಇಡಬೇಕು.ಅದಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಒಂದು ಉತ್ತಮ ಬದಲಾವಣೆಯನ್ನು ಸಚಿವರು ತರಬೇಕು.ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಪೋಷಕರು ಮತ್ತು ಶಿಕ್ಷಕರು ಗುರುತಿಸಿ ಅದನ್ನು ಹೊರತರಲು ಪ್ರಯತ್ನಿಸಬೇಕು.ಮೋಬೈಲ್ ಸಂಸ್ಕೃತಿಯಿAದ ಮಕ್ಕಳನ್ನು ದೂರ ಇಡಬೇಕು ಎಂದು ಹೇಳಿದರು.
ಮಾಜಿ ಸಚಿವೆ ಮೋಟಮ್ಮ, ಶಾಲಾಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಮಹಮ್ಮದ್ ರಫೀಕ್, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಕೆ.ಬಾಲಕೃಷ್ಣ ಭಟ್, ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಶ್ರೇಣಿಕ್, ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ವಿಶ್ವನಾಥ್, ತಹಶೀಲ್ದಾರ್ ಮಂಜುನಾಥ್, ಕಳಸ ತಾಲ್ಲೂಕು ಕಸಾಪ ಅಧ್ಯಕ್ಷ ಅ.ರಾ ಸತೀಶ್ಚಂದ್ರ, ಮಹಿಳಾ ಘಟಕ ಅಧ್ಯಕ್ಷೆ ಮಮ್ತಾಜ್ ಬೇಗಂ, ರೋಟರಿ ಅಧ್ಯಕ್ಷೆ ಸಾವಿತ್ರಿ ಜಿ ಜೋಷಿ, ಜೆಸಿಐ ಅಧ್ಯಕ್ಷ ಚರಣ್, ಮಾಜಿ ತಾ.ಪಂ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಕಾಶ್ ಕೆ.ಎಸ್, ಕ್ಷೇತ್ರ ಶಿಕ್ಷಣಾಧಿಕಾರ್ ಹೇಮಂತ್‌ರಾಜ್ ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!