April 29, 2024

MALNAD TV

HEART OF COFFEE CITY

ಬಲಾಢ್ಯರ ಜಮೀನು ಬಿಟ್ಟು ರೈತರ ಮೇಲೆ ಜಿಲ್ಲಾಡಳಿತ ದಬ್ಬಾಳಿಕೆ: ಅನ್ನದಾತರ ಆಕ್ರೋಶ

1 min read

ಚಿಕ್ಕಮಗಳೂರು : ಬಲಾಢ್ಯರ ಜಮೀನು ಬಿಟ್ಟು ಅಮಾಯಕ ರೈತರ ಜಮೀನು ಗಳನ್ನು ಮಾತ್ರ ರಸ್ತೆ ಅಗಲೀಕರಣಕ್ಕೆ ಪೊಲೀಸರ ಮೂಲಕ ದೌರ್ಜನ್ಯದಿಂದ ಬಿಡಿಸಲಾಗುತ್ತಿದೆ ಎಂದು ಲಕ್ಯಾ ಕ್ರಾಸ್ ಬಳಿ ಅನ್ನದಾತರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಲಕ್ಯಾ ಹೋಬಳಿಯ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಕೇವಲ ಒಂದು ಬದಿಯ ರೈತರ ಜಮೀನನ್ನು ಮಾತ್ರ ಬಿಡಿಸಿಕೊಳ್ಳಲಾಗುತ್ತದೆ ಎಂದು ರೈತರು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕ ರಸ್ತೆ ಅಗಲೀಕರಣಕ್ಕೆ ನಾವೆಲ್ಲರೂ ಒಮ್ಮತದಿಂದ ಒಪ್ಪಿ ಬಿಟ್ಟುಕೊಡಲು ಸಿದ್ದರಿದ್ದೇವೆ. ರಸ್ತೆಯ ಮಧ್ಯಭಾಗದಿಂದ 120 ಅಡಿ 120 ಸಮವಾಗಿ ಎರಡು ಬದಿಯಲ್ಲೂ ಬಿಡಿಸಿಕೊಳ್ಳಬೇಕು ಆದರೆ ಅಧಿಕಾರಿಗಳು ಕೇವಲ ಒಂದು ಬದಿಯ ರೈತರ ತೋಟಗಳನ್ನು ಮಾತ್ರ ಬಿಟ್ಟು ಕೊಡಬೇಕಾಗಿ ಹೇಳುತ್ತಾರೆ ಎಂದು ರೈತರು ಆರೋಪಿಸಿದರು.


ಅಷ್ಟೇ ಅಲ್ಲದೆ ಪೊಲೀಸರು ಬಂದು ರೈತರ ಜಮೀನಿನ ಬೇಲಿಗಳನ್ನು ತೆಗೆದು ಹಾಕಿದ್ದಾರೆ. ಪಕ್ಕದಲ್ಲಿರುವ ಪ್ರಭಾವಿಗಳ ಆಸ್ತಿಯನ್ನು ಬಿಟ್ಟು ರೈತರ ಜಮೀನಿನ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತದೆ ಸಾರ್ವಜನಿಕ ರಸ್ತೆ ಬಿಡಲು ಸಿದ್ದರಿದ್ದು ಆದರೆ ರೈತರ ಜಮೀನು ಮಾತ್ರ ಖುಲ್ಲ ಮಾಡುವುದು ಸರಿಯಲ್ಲ ಎಂದು ಅನ್ನದಾತರು ಅಳಲು ತೋಡಿಕೊಂಡರು. ಪೊಲೀಸರೊಂದಿಗೆ ಅಧಿಕಾರಿಗಳು ಜಮೀನಿನ ತಂತಿ ಬೇಲಿ ತೆಗೆದು ಹಾಕಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳು ಕೂಡಲೇ ಇಲ್ಲಿಗೆ ಬಂದು ಪರಿಶೀಲನೆ ಮಾಡಬೇಕು. ಈ ಬಗ್ಗೆ ಎಸಿಗೆ ಮನವಿ ಸಲ್ಲಿಸಿದ ಹಿನ್ನೆಲೆ ಅವರು ನಾಳೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಸಂಬಂಧ ಸಭೆ ನಡೆಯಲಿದೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದ್ದಾರೆ ಎಂದರು.

ರಸ್ತೆ ಅಗಲೀಕರಣಕ್ಕೆಂದು 10 ಕುಂಟೆ ಜಾಗವನ್ನು ಬಿಡಲು ಒಪ್ಪಿಗೆ ನೀಡಿದ್ದೇವು, ಆದರೆ ಇನ್ನು ಹೆಚ್ಚುವರಿಯಾಗಿ ಬಿಟ್ಟುಕೊಡಬೇಕಾಗಿ ಹೇಳುತ್ತಿದ್ದಾರೆ ಇದು ಸರಿಯಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು. ಅಲ್ಲದೆ ಕಾಫಿ, ಅಡಿಕೆ, ತೆಂಗು ಮಾವು, ಹಲಸು ಮರಗಳಿಗೆ ಬೆಲೆಯನ್ನು ನಿಗದಿ ಮಾಡಿದ್ದಾರೆ, ಆದ್ರೆ ಸಾಗುವಾನಿ ಮರಕ್ಕೆ ಯಾವುದೇ ಪರಿಹಾರದ ಬೆಲೆಯನ್ನು ನಿಗದಿ ಮಾಡಿಲ್ಲ. ಲಕ್ಯಾ ಹೋಬಳಿಯ ರಸ್ತೆಯ ಸಮಸ್ಯೆ ದೊಡ್ಡದಾಗಿದ್ದು, ಇಲ್ಲಿ ಬಡವರನ್ನು ಪ್ರಭಾವಿಗಳು ತುಳಿಯುತ್ತಿದ್ದಾರೆ ಆದ್ದರಿಂದ ರೈತರ ಜಾಗವನ್ನು ಉಳಿಸಿಕೊಡಬೇಕೆಂದು ರೈತರು ಮನವಿ ಮಾಡಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!