May 8, 2024

MALNAD TV

HEART OF COFFEE CITY

ಮಹಿಳೆ ಜಾಗೃತವಾದಾಗ ಮಾತ್ರ ಮಹಿಳಾ ಸಮುದಾಯದ ಅಭಿವೃದ್ಧಿ ಸಾಧ್ಯ- ಸಿದ್ದನಗೌಡ ಪಾಟೀಲ

1 min read

 

ಕೇವಲ ಮಹಿಳೆ ಸಬಲೀಕರಣವೆಂಬ ಘೋಷಣೆಯಿಂದ ಮಹಿಳಾ ಅಭಿವೃದ್ಧಿ ಸಾಧ್ಯವಾಗುವುದಿಲ್ಲ ಬದಲಿಗೆ ಮಹಿಳೆ ಜಾಗೃತೆಗೊಂಡಾಗ ಮಾತ್ರ ಮಹಿಳಾ ಸಮುದಾಯದ ಅಭಿವೃದ್ಧಿಯಾಗುತ್ತದೆ ಎಂದು ಸಿಪಿಐ ರಾಜ್ಯ ಮುಖಂಡ ಡಾ. ಸಿದ್ದನಗೌಡ ಪಾಟೀಲ್ ಅಭಿಪ್ರಾಯೆಸಿದರು.ಅವರು ಇಂದು ತರೀಕೆರೆ ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ಜರುಗಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ರಾಜ್ಯಮಟ್ಟದ ಅಧ್ಯಯನ ಶಿಬಿರದಲ್ಲಿ ಮಹಿಳೆ ಮತ್ತು ರಾಜಕಾರಣ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.ಕಳೆದ ಹಲವಾರು ವರ್ಷಗಳಿಂದ ಮಹಿಳಾ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂಬ ಕೂಗು ಇದ್ದರೂ ಸಹ ಉನ್ನತ ಮಟ್ಟದ ಜನಪ್ರತಿನಿಧಿ ವೇದಿಕೆಗಳಾದ ಪಾರ್ಲಿಮೆಂಟ್ ಮತ್ತು ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಪ್ರಾತಿನಿಧ್ಯ ನೀಡುವ ನಿರ್ಧಾರ ತೆಗೆದುಕೊಳ್ಳುವಲ್ಲಿ ಈಗಿನ ರಾಜಕೀಯ ವ್ಯವಸ್ಥೆ ಅವಕಾಶ ಮಾಡಿಕೊಟ್ಟಿಲ್ಲ ಸರಿ ಇದೀಗ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಹಿಳಾ ಮೀಸಲಾತಿ ಪ್ರಾತಿನಿಧ್ಯ ಒದಗಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ಪಡೆದಿರುವುದು ಸಹ ಚುನಾವಣಾ ರಾಜಕಾರಣದಲ್ಲಿ ಲಾಭ ಮಾಡುವ ತಂತ್ರಗಾರಿಕೆಗೆ ಹೊರತು ಮಹಿಳೆಯರಿಗೆ ಪ್ರಾಮಾಣಿಕ ಅಧಿಕಾರ ಮತ್ತು ಅವಕಾಶ ನೀಡುವ ಉದ್ದೇಶ ಹೊಂದಿಲ್ಲ ಎಂದು ಸಂಶಯ ವ್ಯಕ್ತ ಪಡಿಸಿದರು.   

ಇದೀಗ ಪಾರ್ಲಿಮೆಂಟಲ್ಲಿ ಅಂಗೀಕರಿಸಿರುವ ಮಹಿಳಾ ಮೀಸಲಾತಿ ಮಸೂದೆ ಗಗನ ಕುಸುಮವಾಗಿದ್ದು 2029ರಲ್ಲಿ ಜಾರಿಗೊಳಿಸುವ ಭರವಸೆ ನೀಡುತ್ತಿರುವುದು ಅನುಮಾನಕ್ಕೆ ಆಸ್ಪದ ನೀಡಿದಂತಾಗಿದೆ
ಬಹುಮತ ಇರುವ ಒಂದು ಸರ್ಕಾರ ಮಹಿಳೆಯರ ಬಗ್ಗೆ ನೈಜ ಕಾಳಜಿ ಹೊಂದಿದ್ದರೆ ಇದೇ ಅವಧಿಯಲ್ಲಿ ನಡೆಯುವ ಚುನಾವಣೆಯಲ್ಲಿ ಶೇಕಡ 33 ರಷ್ಟು ಮೀಸಲಾತಿಯನ್ನು ಕಟ್ಟು ನಿಟ್ಟಾಗಿ ಜಾರಿಸಲು ಯಾವ ತೊಂದರೆಯೂ ಇರಲಿಲ್ಲ ಮೋದಿ ಸರ್ಕಾರ 2014 ಮತ್ತು 2019ರಲ್ಲಿ ಜರುಗಿದ ಎರಡು ಪಾರ್ಲಿಮೆಂಟ್ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮಹಿಳಾ ಮೀಸಲಾತಿ ನೀಡುವ ಭರವಸೆ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದರು ಸಹ ಹತ್ತು ವರ್ಷಗಳಲ್ಲಿ ಕಾಲಹರಣ ಮಾಡಿ ಈಗ ಸೋಲುತ್ತೇವೆ ಎಂಬ ಭೀತಿಯ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಅಸ್ತ್ರವನ್ನು ಉಪಯೋಗಿಸಿ ಮಹಿಳಾ ಮತವನ್ನು ಕಬಳಿಸುವ ರಾಜಕೀಯ ಹುನ್ನಾರ ಇದರ ಹಿಂದೆ ಅಡಗಿದೆ ಎಂದರು.ಮಹಿಳೆಯರು ಪುರುಷ ಪ್ರಧಾನ ವ್ಯವಸ್ಥೆಯನ್ನು ಅರ್ಥೈಸಿಕೊಂಡು ಶ್ರೀ ಪ್ರಜ್ಞೆ ಮತ್ತು ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಮೂಲಕ ಈ ಸಮಾಜದ ಬದಲಾವಣೆಗೆ ಸಂಘಟಿತವಾಗಿ ಮುಂದಾಗಬೇಕೆಂದು ಕರೆ ಕೊಟ್ಟರು.ಇಂದು ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಅಂಬೇಡ್ಕರ್ ಸಂವಿಧಾನ ಪ್ರಧಾನವಾಗಿದ್ದರೆ ಸಾಮಾಜಿಕ ವ್ಯವಸ್ಥೆಯಲ್ಲಿ ಮನು ಸಂವಿದಾನ ಪ್ರಧಾನ ಆಗುತ್ತಿದೆ. ಸ್ತ್ರೀ ವಿರೋಧಿ ಅಂಶಗಳನ್ನುಳ್ಳ ಮನುಶಾಸ್ತ್ರದ ನೀತಿಗಳನ್ನು ಧಿಕ್ಕರಿಸಿ ಸಮ ಸಮಾಜದ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಮಹಿಳೆಯರ ಆದ್ಯ ಕರ್ತವ್ಯವಾಗಿದೆ ಎಂದು ಸಿದ್ದನಗೌಡ ಪಾಟೀಲ್ ಅಭಿಪ್ರಾಯ ಪಟ್ಟರು.

 

 

ಪ್ರಸ್ತುತ ಅಂಗನವಾಡಿ ವ್ಯವಸ್ಥೆಯ ಕುರಿತು ಉಪನ್ಯಾಸ ನೀಡಿದ ಅಂಗನವಾಡಿ ಫೆಡರೇಷನ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾತನಾಡಿ ಮಹಿಳಾ ಮತ್ತು ಮಕ್ಕಳ ಆರೋಗ್ಯ ಪೌಷ್ಟಿಕತೆ ಬಗ್ಗೆ ಕಾಳಜಿಯುಕ್ತವಾಗಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ವ್ಯವಸ್ಥೆ ಮತ್ತಷ್ಟು ಪರವರ್ಧನೆಗೊಳ್ಳುವ ಅವಶ್ಯಕತೆ ಇದೆ ಆದರೆ ಸರ್ಕಾರಗಳು ಮಕ್ಕಳ ಮತ್ತು ಮಹಿಳಾ ಆರೋಗ್ಯ ಹಾಗೂ ಅಪೌಷ್ಟಿಕತೆಯನ್ನು ತೊಡೆದು ಹಾಕುವ ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸರ್ಕಾರ ಅಂಗನವಾಡಿ ವ್ಯವಸ್ಥೆಯನ್ನು ಒಂದು ಯೋಜನೆಯಾಗಿ ನೋಡುವ ಬದಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಒಂದು ಶಾಶ್ವತ ಘಟಕ ವಾಗಿ ಪರಿಗಣಿಸುವ ಮೂಲಕ ಸರ್ಕಾರದ ನೌಕರರಾಗಿ ಖಾಯಂ ಗೊಳಿಸಬೇಕೆಂದು ಪ್ರತಿಪಾದಿಸಿದರು.ಅಂಗನವಾಡಿ ಫೆಡರೇಷನ್ ರಾಜ್ಯಾಧ್ಯಕ್ಷ ಬಿ. ಅಮ್ಜದ್ ಮಾತನಾಡಿ ದೇಶಾದ್ಯಂತ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಿಸ್ತರಿಸಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರು ಮತ್ತು ಸಹಾಯಕಿಯರು ಸಂಘಟಿತವಾಗಿ ತಮಗೆ ದೊರೆಯಬೇಕಾದ ಔದ್ಯಮಿಕ ಹಕ್ಕುಗಳನ್ನು ಪಡೆಯಲು ಹೋರಾಟಕ್ಕೆ ಮುಂದಾಗಬೇಕೆಂದರು.ಕಾರ್ಯಕ್ರಮದಲ್ಲಿ ಅಂಗನವಾಡಿ ಫೆಡರೇಷನ್ ನ ರಾಜ್ಯ ಪದಾಧಿಕಾರಿಗಳಾದ ಬಿ ಶಾರದಮ್ಮ, ವಿಜಯ ಕುಮಾರಿ, ರತ್ನ ಶಿರೂರು, ಗ್ರೇಟ್ಟಾ ಫರ್ನಾಂಡಿಸ್, ಗಿರಿಜಾ, ಸವಿತಾ, ಕಲಾ, ಪುಷ್ಪ, ಪಾರ್ವತಮ್ಮ, ಶೈಲಾ , ನಳಿನ ಮುಂತಾದವರು ಭಾಗವಹಿಸಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!