May 18, 2024

MALNAD TV

HEART OF COFFEE CITY

ಸರ್ಕಾರದ ಎಲ್ಲ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಬೇಕು; ಎಚ್.ಡಿ.ತಮ್ಮಯ್ಯ

1 min read

ಚಿಕ್ಕಮಗಳೂರು: ಸರ್ಕಾರದ ಎಲ್ಲಾ ಯೋಜನೆಗಳು ಜನರಿಗೆ ನೇರವಾಗಿ ತಲುಪಬೇಕು ಜೊತೆಗೆ ಜನರ ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗಬೇಕು ಎಂಬ ಸದುದ್ದೇಶದಿಂದ ಸರಕಾರ ಜನತಾದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.
ತಾಲೂಕಿನ ಲಕ್ಯಾಹೋಬಳಿ ಕಳಸಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಜನತಾದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದನಂತರ, ಮುಖ್ಯ ಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯ ಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಆಡಳಿತದಲ್ಲಿ ಹೊಸ ಬದಲಾವಣೆ ತರುವ ಉದ್ದೇಶದಿಂದ ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮನೆ ಬಾಗಿಲಿಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸುವ ಉದ್ಧೇಶದಿಂದ ರಾಜ್ಯ ಸರ್ಕಾರ ಇಂತಹ ಯೋಜನೆಗಳನ್ನು ಜಾರಿಗೆ ತಂದಿದ್ದು, ಅಧಿಕಾರಿಗಳು ತಮ್ಮ ವೃತ್ತಿಯನ್ನು ಶಿಸ್ತು ಮತ್ತು ಪ್ರೀತಿಯಿಂದ ಮಾಡಬೇಕು, ತಮ್ಮ ವೃತ್ತಿಯನ್ನು ಪ್ರೀತಿಸಿದಾಗ ಮಾತ್ರ ಆ ವೃತ್ತಿಗೆ ನ್ಯಾಯ ಕೊಡಲು ಸಾಧ್ಯ, ಸಾಮಾನ್ಯ ಜನರಿಗೆ ಸರ್ಕಾರದ ಯೋಜನೆಗಳು ನೇರವಾಗಿ ತಲುಪಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ 5 ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ತಾಲ್ಲೂಕು ಜನತಾ ದರ್ಶನದಡಿ 60 ವರ್ಷ ಮೇಲ್ಪಟ್ಟ ಪಿಂಚಣಿ, ವಿಧವಾ ವೇತನ ಮತ್ತು ಖಾತೆ ಬದಲಾವಣೆಗೆ ಬಡವರು ಕಛೇರಿಗೆ ಅಲೆಯಬಾರದೆಂದು, ಈ ಸಮಸ್ಯೆಗಳಿಗೆ ಬಂದ ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರವನ್ನು ನೀಡಿ ನ್ಯಾಯ ಕೊಡಿಸಲಾಗುವುದು, ಜನರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಜನತಾದರ್ಶನ ಕಾರ್ಯಕ್ರಮ ಆಯೋಜಿಸಿದ್ದ ಅಂಬೇಡ್ಕರ್ ಭವನ ಚಿಕ್ಕದಾಗಿದ್ದ ಹಿನ್ನೆಲೆಯಲ್ಲಿ ಜನ ಹೆಚ್ಚಾಗಿ ಹೊರನಿಲ್ಲಬೇಕಾಯಿತು. ಇದರಿಂದ ಗರಂ ಆದ ಶಾಸಕರು ಹೊರಗಡೆ ಶಾಮಿಯಾನ ಹಾಕಿ ಆಯೋಜನೆ ಮಾಡಬಾರದೆ ಎಂದು ಪ್ರಶ್ನಿಸಿ ಇನ್ನು ಮುಂದೆ ಯಾವುದೇ ಲೋಪ ಆದಲ್ಲಿ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಜನಸ್ನೇಹಿ ಹಾಗೂ ಶಾಂತಿ ನೆಮ್ಮದಿ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿದ್ದೇವೆ. ಸರಕಾರಿ ಕಚೇರಿಯಲ್ಲಿ ಜನಸಾಮಾನ್ಯರಿಗೆ ಅಧಿಕಾರಿಗಳು ಅಗೌರವ ತೋರಿದರೆ ನನಗೆ ತಿಳಿಸಿ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಕಳಾಪುರದಲ್ಲಿ ನಡೆಯುತ್ತಿರುವ ಕಲ್ಲು ಕ್ರಷರ್ ನಿಂದ ಜನಜೀವನಕ್ಕೆ ತುಂಬಾ ತೊಂದರೆಯಾಗುತ್ತಿದೆ. ಇನ್ನು 15 ವರ್ಷ ಕಲ್ಲುಗಣಿಗಾರಿಕೆ ಮುಂದುವರಿದರೆ ಇಡೀ ಕಳಸಾಪುರವೇ ಸ್ಮಶಾನವಾಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ಕಳಸಾಪುರ ಪಶು ಆಸ್ಪತ್ರೆಯಲ್ಲಿ ಪಶುವೈದ್ಯರನ್ನೇ ನೋಡಿಲ್ಲ. ದನಕರುಗಳು ಈ ಭಾಗದಲ್ಲಿ ಹೆಚ್ಚು ಇದ್ದು, ಅವರು ಪ್ರತಿ ದಿನ ಇಲ್ಲೇ ಇದ್ದು ಔಷಧಿ, ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿ ಎಂದು ಸ್ಥಳೀಯರು ಮನವಿ ಮಾಡಿದರು. ಕೊಬ್ಬರಿ ಬೆಲೆ ಪಾತಾಳ ಕಂಡಿದೆ. ಈ ಸಂದರ್ಭದಲ್ಲಿ ಸರಕಾರದಿಂದ ಕೊಬ್ಬರಿಗೆ ಬೆಂಬಲ ಬೆಲೆ ಕೊಡಿಸಬೇಕು.ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ರೈತರ ನೆರವಿಗೆ ಬರಬೇಕು ಎಂದು ರೈತ ಗಣೇಶ್ ಮನವಿ ಮಾಡಿದರು. ಅಷ್ಟೇ ಅಲ್ಲದೆ ಕಂದಾಯ ಭೂಮಿ ಸಮಸ್ಯೆ, ಮನೆ ನಿವೇಶನ ಮತ್ತಿತರೆ ಅನೇಕ ಸಮಸ್ಯೆಗಳು ಜನತಾದರ್ಶನದಲ್ಲಿ ಕೇಳಿಬಂದವು.
ತಹಸೀಲ್ದಾರ್ ಸುಮಂತ್ ಮಾತನಾಡಿ, ಜನ ಸಾಮಾನ್ಯರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಪ್ರತಿ ಬಾರಿ ಜಿಲ್ಲೆಗೆ ಬರಲು ಸಾದ್ಯವಾಗದ ಕಾರಣ, ಅವರ ಕುಂದು ಕೊರತೆಗಳನ್ನು ತಿಳಿಯಲು ಹೋಬಳಿ ಮತ್ತು ತಾಲ್ಲೂಕು ಮಟ್ಟದ ಜನತಾ ದರ್ಶನವನ್ನು ಮುಖ್ಯ ಮಂತ್ರಿಗಳ ನಿರ್ದೇಶನದಂತೆ ಶಾಸಕರ ಉಪಸ್ಥಿತಿಯಲ್ಲಿ ಆಯೋಜನೆ ಮಾಡಲಾಗಿದೆ, ಜನರು ತಮ್ಮ ಸಮಸ್ಯೆಗಳನ್ನು ಅರ್ಜಿಗಳ ಮೂಲಕ ತಿಳಿಸಬಹುದಾಗಿದ್ದು, ಶೀಘ್ರವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುದು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಧಿಕಾರಿ ತಾರನಾಥ್, ಕಳಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಗೌಡ, ಬಿಳೆಕಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಗೋಪಿ, ಊರಿನ ಮುಖಂಡರಾದ ಕೆಂಗೇಗೌಡ, ಅಮೀರ್, ಚಂದ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು ಮತ್ತು ಲಕ್ಯಾ ಹೋಬಳಿಯ ೧೧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷö, ಉಪಾಧ್ಯಕ್ಷರು, ಸದಸ್ಯರು, ತಾಲೂಕು ಮಟ್ಟದ ಅಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಲೋಕಸ್ಪಂದನ ಕಾರ್ಯಕ್ರಮಕ್ಕೆ ಶಾಸಕ ಹೆಚ್‌.ಡಿ‌.ತಮ್ಮಯ್ಯ ಚಾಲನೆ

ಲೋಕಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದ ಶಾಸಕ ಹೆಚ್.ಡಿ.ತಮ್ಮಯ್ಯ, ಜನಸ್ನೇಹಿ ಆಡಳಿತ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ನಮ್ಮ ಸರ್ಕಾರ ಜಾರಿಗೆ ಬಂದಾಗಿನಿಂದ ಒಳ್ಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬಂದಿದೆ.  ಜನಸ್ನೇಹಿ ಆಡಳಿತವನ್ನು ನೀಡುವ ಉದ್ದೇಶದಿಂದ ಪೊಲೀಸ್ ಇಲಾಖೆಯು ಲೋಕ ಸ್ಪಂದನದ ಎಂಬ ಹೊಸ ಅಪ್’ನನ್ನು ಬಿಡುಗಡೆ ಮಾಡಿದೆ. ನಿಮಗೆ ಏನೇ ದುರುಗಳಿದ್ದರು ಪ್ರತಿ ದೂರುದಾರರು ಲೋಕ ಸ್ಪಂದನದ ಅಡಿಯಲ್ಲಿಯೇ ದೂರು ನೀಡಬಹುದು ಎಂದರು. ಸಾರ್ವಜನಿಕರ ದೂರುಗಳ ಜೊತೆಗೆ ಪೊಲೀಸರ ಕಾರ್ಯವೈಖರಿ ಬಗ್ಗೆ ಜಿಲ್ಲಾ ಪೊಲೀಸ್ ಕಚೇರಿಗೆ ಮಾಹಿತಿ ರವಾನೆ ಆಗಲಿದೆ ಎಂದು ತಿಳಿಸಿದರು. ಆದ್ದರಿಂದ ಎಲ್ಲ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!