May 4, 2024

MALNAD TV

HEART OF COFFEE CITY

ಎಸ್.ಎಲ್ ಭೋಜೆಗೌಡರವರ ತೋಟದಲ್ಲಿ ಆಧುನಿಕ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ

1 min read

ಸಖರಾಯಪಟ್ಟಣ : ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಯನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೆಗೌಡರವರ ತೋಟದಲ್ಲಿ ಇಂದು ಏರ್ಪಡಿಸಲಾಗಿತ್ತು. ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ಪಡೆದಿರುವ ಪ್ರಗತಿ ಪರ ರೈತ ದಾವಣಗೆರೆ ಜಿಲ್ಲೆಯ ಮಲೆಬೆನ್ನೂರಿನ ಪ್ರಗತಿ ಪರ ರೈತ ಎಂ.ಜಿ ಕರಿಬಸಪ್ಪ ಇವರು ಕಂಡು ಹಿಡಿದಿರುವ ಸೋಲಾರ್ ಕೀಟ ಆಕರ್ಷಕ ಯಂತ್ರ ಹಾಗೂ  ಕಳೆ ಕತ್ತರಿಸುವ ಯಂತ್ರಗಳ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು

ಇದೇ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೆಗೌಡರ ಕೃಷಿ ಬದುಕಿನಿಂದ ಇಂದಿನ ಯುವ ಪೀಳಿಗೆ ಬಹು ದೂರ ಹೋಗುತ್ತಿದೆ. ನಮ್ಮ ಹಿರಿಯರೆಲ್ಲ ಕೃಷಿ ಬದುಕಿನಲ್ಲಿ ಎಲ್ಲಾ ಸಾಧನೆಗಳನ್ನು ಮಾಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸದಿಂದ ಹಿಡಿದು ಕುಟುಂಬವನ್ನು ಸಲಹುದರವರೆಗೆ ಎಲ್ಲಾ ಮಾಡಿದ್ದಾರೆ ಆದರೆ ಕೃಷಿ ಬದುಕು ಅನಿಶ್ಚಿತತೆಯಿಂದ ಕೂಡಿದೆ ಎಂದು ನಮ್ಮ ಯುವ ಪೀಳಿಗೆ ಕಾಣುತ್ತಿದೆ. ಅನಿಶ್ಚಿತತೆಯಲ್ಲ ಕೃಷಿ ಬದುಕು ಲಾಭದಾಯಕ ಎನ್ನುವುದನ್ನು ತೋರಿಸುತ್ತಿದ್ದೇವೆ. ಅನಿವರ‍್ಯ ಪರಿಸ್ಥಿತಿ ಇದೆ ಇವತ್ತು, ಈ ದೇಶದ ಬನ್ನೆಲುಬು ರೈತ ಎಂದು ರಾಜಕಾರಣಿಗಳಾದ ನಾವೆಲ್ಲ ಭಾಷಣ ಮಾಡುತ್ತೇವೆ. ಬೆನ್ನುಲುಬು ಎಂದು ಹೇಳುವ ರೈತನಿಗೆ ಯಾವ ರೀತಿ ಪರಸ್ಕಾರ ಹಾಗೂ ಪ್ರೋತ್ಸಾಹವನ್ನು, ಉತ್ತೇಜನವನ್ನು ಕೊಡುತ್ತಿದ್ದೇವೆ ಎನ್ನುವುದು ಬೇಕಲ್ಲ, ನಾನು ಯಾವ ಸರ್ಕಾರಗಳನ್ನು ದೂರುತ್ತಿಲ್ಲ.  ಈಗಲೂ ಸಮಯವಿದೆ ಕೃಷಿಯನ್ನು ಲಾಭದಾಯಕ ಎಂದು ಘೋಷಿಸಬೇಕು. ಯುವಕರಿಗೆ ಇಡಿ ದೇಶದಲ್ಲಿ ಕೆಲಸ ಕೊಡಲು ಸಾಧ್ಯವಿಲ್ಲ. ಇಂದು ದೇಶದಲ್ಲಿ ಕೋಟ್ಯಾಂತರ ಜನ ನಿರುದ್ಯೋಗಿ ಯುವಕರಿದ್ದಾರೆ. ಅವರಿಗೆಲ್ಲ ಕೃಷಿ ಒಂದರಿAದಲ್ಲೇ ಉದ್ಯೋಗ ಕಟ್ಟಿಕೊಡಬಹುದಾದ ಅವಕಾಶವಿದೆ. ಅವರಿಗೆ ಸಬ್ಸಿಡಿ ಕೊಡುವುದು, ಉತ್ತಮ ಗುಣ ಮಟ್ಟದ ಕೃಷಿ ಉಪಕರಣ ನೀಡಬೇಕು. ಸರ್ಕಾರದ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಳ್ಳುವುದಕ್ಕೆ ಕಡಿವಾಣ ಹಾಕಬೇಕು. ಉತ್ತಮ ಗುಣ ಮಟ್ಟದ ಬಿತ್ತನೆ ಬೀಜ, ರಸ ಗೊಬ್ಬರ ನೀಡುವುದು. ಇಂದು ಕೃಷಿ ಕಾರ್ಮಿಕರ ಕೊರತೆ ಇರುವುದರಿಂದ ಉತ್ತಮ ಗುಣ ಮಟ್ಟದ ಯಂತ್ರೋಪಕರಣಗಳನ್ನು ನೀಡಿ ಕೃಷಿ ಮಾಡಲು ಅನುಕೂಲ ಮಾಡಿಕೊಡಬೇಕು. ಕೃಷಿ ಭೂಮಿಯಲ್ಲಿ ಕಳೆ ನಾಶಕ ಹೊಡೆಯದಂತೆ ನಿರ್ಭಂದಿಸಬೇಕು. ಇದರಿಂದ ಕೃಷಿ ಮಣ್ಣು ಫಲವತತ್ತೆಯಾಗುತ್ತದೆ. ಇದರಿಂದ ಸಾವಯುವ ಕೃಷಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಶೀತಲಿಕರಣ ಘಟಕಗಳನ್ನು ತೆರೆಯಬೇಕು. ಯಾವ ಯಾವ ಭಾಗದಲ್ಲಿ ಏನೇನು ಬೆಳೆ ಬೆಳೆಯಬೇಕೆಂದು ಕಾನೂನು ತರಬೇಕು.  ಇಸ್ರೇಲ್‌ನಂತಹ ಪುಟ್ಟ ದೇಶದಲ್ಲಿ ಕೃಷಿ ಕಾಂತ್ರಿ ನಡೆಯಬೇಕಾದರೆ ಕೃಷಿಯನ್ನೆ ಬದುಕಾಗಿಸಿಕೊಂಡಿರುವ ನಮ್ಮ ದೇಶದಲ್ಲಿ ಏಕೆ ಸಾಧ್ಯವಿಲ್ಲ ಎಂದು ಹೇಳಿದರು.

ನಂತರ ದಾವಣಗೆರೆ ಜಿಲ್ಲೆಯ ಮಲೆಬೆನ್ನೂರಿನ ಪ್ರಗತಿ ಪರ ರೈತ ಎಂ.ಜಿ ಕರಿಬಸಪ್ಪ ಮಾತನಾಡುತ್ತ ನಾನು ಒಬ್ಬ ರೈತನಾಗಿ ನಾನೇ ಕಂಡು ಹಿಡಿದ ಸೋಲಾರ್ ಕೀಟ ಆಕರ್ಷಕ ಯಂತ್ರ, ಇದು ಎಲ್ಲಾ ಬಗೆಯ ಕೀಟಗಳನ್ನು ಆಕರ್ಷಿಸುತ್ತದೆ. ಒಂದು ಎಕರೆಗೆ ಒಂದು ಯಂತ್ರವನ್ನು ಅಳವಡಿಸುವುದರಿಂದ ರೆಡ್ ಮೈಡ್ಸ್, ರೂಡ್ ಗ್ರಾಪ್ಸ್, ಡೈನೋಸರಸ್ ಬೀಟ್‌ಲೂ, ಸ್ಟೇಂ ಬೋರರ್, ಪ್ರೂಟ್ ಬೋರರ್, ತ್ರಿಬ್ಸ್ ಸೇರಿದಂತೆ ಎಲ್ಲಾ ಬಗೆಯ ಕೀಟಗಳನ್ನು ನಿಯಂತ್ರಿಸಬಹುದು.  ಒಂದು ಎಕರೆ ತರಕಾರಿ ಬೆಳೆ ಬೆಳೆಯಲು 20,000 ರಿಂದ 30,000 ಸಾವಿರ ರೂಪಾಯಿಗಳ ಕೀಟ ನಾಶಕ ಬಳಸುತ್ತೇವೆ. ಒಂದು ಸೋಲಾರ್ ಕೀಟ ನಿಯಂತ್ರಕ ಯಂತ್ರವನ್ನು ಬಳಸುವುದರಿಂದ ಕೀಟ ನಾಶಕ ಬಳಸದೆ ಶೇಕಡಾ 80 ರಷ್ಟು ನಿಯಂತ್ರಣ ಮಾಡಬಹುದು. ರಾಜ್ಯದಲ್ಲಿ ಸೋಲಾರ್ ಟ್ರಾಪ್ ಯಂತ್ರವನ್ನು ಕೃಷಿ ಇಲಾಖೆಯವರು 18 ಜಿಲ್ಲೆಗಳಲ್ಲಿ ಬಿಡುಗಡೆಗೊಳಿಸಿದ್ದಾರೆ. ಇದನ್ನು ಎಲ್ಲಾ ಬೆಳೆಗಳಿಗೂ ಬಳಸಬಹುದು. ನಾವು ಇದನ್ನು 12 ರಾಜ್ಯಗಳಿಗೆ ಕಳಿಸುತ್ತಿದ್ದೇವೆ. ಇದು ನಮ್ಮದೆ ಸಂಶೋಧನೆಯಾಗಿದೆ, ಇದಕ್ಕೆ ಇನ್ಪೋಸಿಸ್ ಸುಧಾ ನಾರಾಯಣ ಮೂರ್ತಿ 5 ಲಕ್ಷ ರೂಪಾಯಿಗಳ ಬಹುಮಾನ ನೀಡಿದ್ದಾರೆ. ಕೃಷಿ ಇಲಾಖೆಯವರು ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ನೀಡಿದ್ದಾರೆ. 6 ದೇಶಗಳಿಗೆ ಮಾದರಿ ಕಳುಹಿಸಿ ಕೊಡಲಾಗಿದೆ. ನಮ್ಮ ದೇಶದ ಎಲ್ಲಾ ರೈತರು ಈ ಯಂತ್ರವನ್ನು ಬಳಸಿಕೊಂಡು, ಕ್ರಿಮಿ ನಾಶಕ ಬಳಕೆಗೆ ಖರ್ಚು ಮಾಡುವ ಹಣ ಉಳಿಸಿ ಲಾಭದಾಯಕ ಕೃಷಿ ಮಾಡಬಹುದು. ಕಳೆ ಕತ್ತರಿಸುವ 2 ಹೆಚ್.ಪಿ ಯಂತ್ರವನ್ನು 12.000 ರೂಪಾಯಿಗಳಿಗೆ ರೈತರಿಗೆ ನೀಡುತ್ತಿದ್ದೇವೆ. ಅಮೇರಿಕಾದ ಇಂಜಿನ್ ಅಳವಡಿಕೆಯ ಯಂತ್ರವು 48.000 ರೂಗಳ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಎಂದು ಹೇಳಿದರು. ಹೆಚ್ಚಿನ ಮಾಹಿತಿಗೆ – ಪ್ರಗತಿ ಪರ ರೈತ ಎಂ.ಜಿ ಕರಿಬಸಪ್ಪ – 98809 73218

ಪ್ರಗತಿ ಪರ ರೈತ ಎಂ.ಜಿ ಕರಿಬಸಪ್ಪ – 98809 73218

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

Credits:

Music : latest 2020 6 different no copyright news background music, royalty free (black mart)

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!