April 28, 2024

MALNAD TV

HEART OF COFFEE CITY

ಜಿಲ್ಲೆಯಲ್ಲಿ ನೂತನ ತಾಲೂಕಿಗೆ ಬೇಡಿಕೆ: ಪಾದಯಾತ್ರೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಿರುವ ಹೋರಾಟ ಸಮಿತಿ

1 min read

ಚಿಕ್ಕಮಗಳೂರು: ಸಖರಾಯಪಟ್ಟಣ ತಾಲ್ಲೂಕು ಹೋರಾಟ ಸಮಿತಿಯು ಸಖರಾಯಪಟ್ಟಣವನ್ನು ಪ್ರತ್ಯೇಕ ತಾಲ್ಲೂಕಾಗಿ ಮಾಡಬೇಕೆಂದು ಒತ್ತಾಯಿಸಿ ಇದೇ ಗಣರಾಜ್ಯೋತ್ಸವ ದಿನವಾದ ಜನವರಿ 26 ರಂದು ಸಚಿವ ಜಾರ್ಜ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ.

ಸಖರಾಯಪಟ್ಟಣ ಆಡಳಿತಾತ್ಮಕವಾಗಿ ಕಡೂರು ತಾಲ್ಲೂಕು ವ್ಯಾಪ್ತಿಗೆ ಸೇರಿದ್ದರೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವುದರಿಂದ ತಾಲ್ಲೂಕುವಾರು ಅನುದಾನ ಮತ್ತು ಗುಣಮಟ್ಟದ ಆರೋಗ್ಯ ಕೇಂದ್ರವೇ ಇಲ್ಲದಿರುವುದರಿಂದ ಹಾಗೂ ಸರ್ಕಾರದ ಇನ್ನಿತರ ಪರಿಹಾರಗಳ ಹಂಚಿಕೆಯಲ್ಲಿ ನಮ್ಮ ಭಾಗಕ್ಕೆ ತಾರತಮ್ಯವಾಗುತ್ತಿದೆ ಎಂದು ಪ್ರತ್ಯೇಕ ತಾಲೂಕಿಗೆ ಮನವಿ ಸಲ್ಲಿಸಲು ಹೋರಾಟ ಸಮಿತಿ ಮುಂದಾಗಿದೆ.
ಸಖರಾಯಪಟ್ಟಣ ಹೋಬಳಿ 11 ಪಂಚಾಯಿತಿಗಳು ಮತ್ತು ಲಕ್ಯಾ ಹೋಬಳಿ 10 ಪಂಚಾಯಿತಿಗಳನ್ನು ಒಳಗೊಂಡಂತೆ ಸುಮಾರು 1.5 ಲಕ್ಷದಷ್ಟು ಜನಸಂಖ್ಯೆ ಇದ್ದು 1 ಲಕ್ಷ ಮೀರಿದ ಮತದಾರರಿರುತ್ತಾರೆ, ಈ ಭಾಗದಲ್ಲಿ ತಾಲ್ಲೂಕು ಆರೋಗ್ಯ ಕೇಂದ್ರಕ್ಕಾಗಿ, ತಾಲ್ಲೂಕು ಕಛೇರಿಗಾಗಿ, ಉನ್ನತ ವ್ಯಾಸಾಂಗಕ್ಕಾಗಿ ಕಾಲೇಜು, ವಿದ್ಯಾಸಂಸ್ಥೆಗಳ ನಿರ್ಮಾಣಕ್ಕಾಗಿ ಈ ಭಾಗದ ಶಾಶ್ವತ ನೀರಾವರಿ ಯೋಜನೆಗಳಿಗಾಗಿ ಹಾಗೂ ಪ್ರವಾಸೋಧ್ಯಮಕ್ಕಾಗಿ, ತಾಲ್ಲೂಕು ನ್ಯಾಯಾಲಯಕ್ಕಾಗಿ, ಎ.ಪಿ.ಎಂ.ಸಿ ಮಾರುಕಟ್ಟೆಗಾಗಿ ಸರ್ಕಾರದ ಅನುದಾನದ ಸಮಪಾಲಿಗೋಸ್ಕರ ಪ್ರತ್ಯೇಕ ತಾಲ್ಲೂಕಿನ ಬೇಡಿಕೆ ಇಟ್ಟಿದ್ದು, ಪಾದಯಾತ್ರೆ ಜನವರಿ 26 ಬೆಳಿಗ್ಗೆ 8 ಕ್ಕೆ ಸಖರಾಯಪಟ್ಟಣದಿಂದ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ಬಂದು ಸಚಿವ ಕೆ.ಜೆ ಜಾರ್ಜ್ ಅವರಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ ಎಂದು ಹೋರಾಟ ಸಮಿತಿ ತಿಳಿಸಿದೆ. 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!