April 29, 2024

MALNAD TV

HEART OF COFFEE CITY

ದತ್ತಪೀಠದಲ್ಲಿ ಶಂಖನಾದ, ಪೂಜೆ, ರುದ್ರಾಭಿಷೇಕ, ಆರತಿ ನೋಡಿ ಖುಷಿಯಾಯ್ತು : ಪ್ರಮೋದ್ ಮುತಾಲಿಕ್ 

1 min read

 

 

ಚಿಕ್ಕಮಗಳೂರು. ತಾಲೂಕಿನ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕವಾಗಿ ಪೂಜೆ, ರುದ್ರಾಭಿಷೇಕ, ಶಂಖನಾದ, ಆರತಿ ಎಲ್ಲವನ್ನೂ ನೋಡಿ-ಕೇಳಿ ಬದುಕು ಧನ್ಯವಾಯಿತು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ತಾಲೂಕಿನ ದತ್ತಪೀಠದಲ್ಲಿ ದತ್ತಾತ್ರೇಯರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, 30 ವರ್ಷಗಳ ಸುದೀರ್ಘವಾದ ಹೋರಾಟಕ್ಕೆ ಬೆಲೆ ಸಿಕ್ಕಿದೆ. ಅದಕ್ಕಾಗಿ ರಾಜ್ಯ ಸರ್ಕಾರ, ಶಾಸಕ ಸಿ.ಟಿ. ರವಿಯವರಿಗೆ ಧನ್ಯವಾದ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಾನೂನಾತ್ಮಕವಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ವಿನ ಕೆಲಸವಾಗಬೇಕು. ಮುಸ್ಲಿಂ ಸಮಾಜಕ್ಕೆ ವಿನಂತಿ ಮಾಡಿಕೊಳ್ಳುತ್ತೇನೆ. ಗುಹೆಯೊಳಗಡೆ ಸೌಹಾರ್ದಯುತವಾಗಿ ಪಾದುಕೆಯ ಪೂಜೆ, ರುದ್ರಾಭಿಷೇಕವಾಗುತ್ತಿದೆ. ಆರತಿ, ಘಂಟೆ, ಶಂಖನಾದ ಎಲ್ಲವೂ ಇಸ್ಲಾಮಿಗೆ ವಿರುದ್ಧವಾಗಿದೆ. ಹಾಗಾಗಿ ಇದನ್ನು ಬಿಟ್ಟುಕೊಟ್ಟು ನಾಗೇನಹಳ್ಳಿಯಲ್ಲಿ ನಮಾಝ್, ಪೂಜೆ ಪುನಸ್ಕಾರಗಳನ್ನು ಮಾಡಿಕೊಳ್ಳಬೇಕು ಎಂದು ಮುಸ್ಲಿಮರಿಗೆ ಮನವಿ ಮಾಡಿದ್ದಾರೆ.

25 ವರ್ಷಗಳ ಹಿಂದೆಯೂ ಕೂಡಾ ಇಲ್ಲಿನ ಹಿರಿಯರಾದ ನಾಣಯ್ಯ, ವಿಠ್ಠಲ್ ರಾಯ್, ದತ್ತಾತ್ರೆಯ ಶೆಟ್ಟಿ ಸೇರಿದಂತೆ ಅನೇಕರು ಪರಿಶ್ರಮಪಟ್ಟಿದ್ದಾರೆ. ಇಂದು ಅವರಿಗೂ ಕೂಡ ಹಿಂದೂ ಅರ್ಚಕರ ನೇಮಕ ಆನಂದವಾಗಿದೆ ಎಂದರು. ಇನ್ನು ಗರ್ಭಗುಡಿಯ ಒಳಗೆ ಪೂಜೆ ನಡೆಯುತ್ತಿರುವುದರಿಂದ ನಾಸ್ತಿಕವಾದಿಗಳು, ಗೋ ಹಂತಕರು, ಗೋ ಭಕ್ಷಕರು, ಮೂರ್ತಿ ಪೂಜೆ ನಂಬಲಾರದವರು ದತ್ತಪಾದುಕೆಯ ಗರ್ಭಗುಡಿಯ ಒಳಗೆ ಹೋಗಬಾರದು ಎಂದರು. ಕುರಾನಿನ ಪ್ರಕಾರ ಅದು ನಿಷಿದ್ಧ. ದತ್ತಪೀಠದ ಆವರಣ ಪೂರ್ಣ ಪ್ರಮಾಣದಲ್ಲಿ ದತ್ತಪೀಠ ಹಿಂದೂ ಪೀಠವಾಗುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತೆ ಎಂದರು. ದತ್ತಪೀಠದಲ್ಲಿ ನಮಾಜ್, ಉರುಸ್ ಮಾಡುತ್ತಾರೆ. ಅವುಗಳೆಲ್ಲವನ್ನು ಸ್ಥಳಾಂತರಗೊಳಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಹಾಸನದಲ್ಲಿ ಕೊರಿಯರ್‍ನಲ್ಲಿ ಬಂದ ಮಿಕ್ಸಿ ಸ್ಪೋಟಗೊಂಡ ಪ್ರಕರಣದ ಕುರಿತು ಮಾತನಾಡಿದ ಅವರು, ಕೊರಿಯರ್ ಮೂಲಕ ಬಂದ ಮಿಕ್ಸಿ ಓಪನ್ ಮಾಡಿದಾಗ ಬ್ಲಸ್ಟ್ ಆಗಿದೆ. ಇದೊಂದು ವ್ಯವಸ್ಥಿತವಾದ ಟೆರರಿಸಂನ ಭಾಗ ಎಂದರು. ಶಾರಿಕ್ ಮೂಲಕ ಕುಕ್ಕರ್‍ನಲ್ಲಿ ಸ್ಫೋಟ ಮಾಡಲು ಯತ್ನಿಸಿದ್ದು. ಈ ರೀತಿಯಾಗಿ ಅನೇಕ ವಿಧಾನಗಳ ಮೂಲಕ ಮಾಡುವ ಕುಕೃತ್ಯಗಳನ್ನು ತಡೆಯುವ ಕೆಲಸ ಆಗಬೇಕು ಎಂದರು. ಕೇಂದ್ರದ ನರೇಂದ್ರ ಮೋದಿ ನೇತೃತ್ವ ಸರ್ಕಾರ ಬಹಳ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದ ಬಾಂಬ್ ಬ್ಲಾಸ್ಟ್ ಪ್ರಕರಣಗಳನ್ನು ಹತ್ತಿಕ್ಕುವ ಕೆಲಸ ಮಾಡಿದೆ. ಅದನ್ನು ತಡೆದುಕೊಳ್ಳಲಾಗದೆ. ಅಲ್ಲಲ್ಲಿ ಬೇರೆ-ಬೇರೆ ರೀತಿಯಲ್ಲಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿದೆ ಅದನ್ನೂ ಹತ್ತಿಕ್ಕುವ ಕೆಲಸ ನಡೆಯಬೇಕು ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!