May 6, 2024

MALNAD TV

HEART OF COFFEE CITY

ದತ್ತಮಾಲಾಧಾರಿಗಳಿಗೆ ಡಿ.ಸಿ ಅವಮಾನ; ಸಿ.ಟಿ‌ ರವಿ ಖಂಡನೆ

1 min read

 

ಚಿಕ್ಕಮಗಳೂರು: ದತ್ತಮಾಲಾಧಾರಿಗಳು ಕುಡಿದು ಶೋಭಾಯಾತ್ರೆಗೆ ತೆರಳುತ್ತಾರೆಂಬ ಹಾಸನ ಜಿಲ್ಲಾಧಿಕಾರಿ ಬಳಸಿರುವ ಭಾಷೆ ಅಗೌರವ ತರುವ ಸಂಗತಿಯಾಗಿದ್ದು ಇದು ಖಂಡನೀಯವಾಗಿದ್ದು ಅವರು ಆದೇಶವನ್ನು ಹಿಂಪಡೆಯಬೇಕು ಎಂದು ಶಾಸಕ ಸಿಟಿ ರವಿ ಆಗ್ರಹಿಸಿದರು.ದತ್ತಜಯಂತಿ ಹಿನ್ನೆಲೆಯಲ್ಲಿ ಹಾಸನ ಮಾರ್ಗವಾಗಿ ಬರುವ ದತ್ತಮಾಲಾಧಾರಿಗಳು ಮದ್ಯಪಾನ ಮಾಡಿ ದುರ್ವರ್ತನೆ ತೋರುತ್ತಾರೆ ಎಂಬ ಉದ್ದೇಶದಿಂದ ಮದ್ಯದಂಗಡಿಯನ್ನು ಬಂದ್ ಮಾಡಿ ಆದೇಶ ಹೊರಡಿಸಿದ್ದು ಇದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ ರವಿ ಚಿಕ್ಕಮಗಳೂರಿನಲ್ಲಿ ಹಾಸನ ಜಿಲ್ಲಾಧಿಕಾರಿ ನಡೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿಗಳು ದತ್ತಮಾಲಾ ದಾರಿಗಳನ್ನು ಅವಹೇಳನ ಮಾಡುವ ರೀತಿಯಲ್ಲಿ ನೋಟಿಸ್ ನಲ್ಲಿ ಚಿತ್ರಿಸಿದ್ದಾರೆ ಆದ್ದರಿಂದ ಅವರು ಕ್ಷಮೆಯಾಚನೆ ಮಾಡಬೇಕು ಎಂದರು.ಅವರು ಆದೇಶದಲ್ಲಿ ಹೇಳಿರುವ ರೀತಿ ಅವರ ತಪ್ಪುಕಲ್ಪನೆಯನ್ನು ಎತ್ತಿ ತೋರಿಸುತ್ತದೆ ಒಂದು ರೀತಿ ಅವಮಾನ ಮಾಡುವ ರೀತಿಯಲ್ಲಿ ಆದೇಶವನ್ನು ಹೊರಡಿಸಿದ್ದಾರೆ ಆದ್ದರಿಂದ ಈ ಕುರಿತು ಕ್ಷಮೆಯಾಚಿಸಬೇಕು ಎಂದರು

ಇನ್ನು ಇದೇ ವೇಳೆ ಎಂಇಎಸ್ ಪುಂಡಾಟಿಕೆ ಕುರಿತು ಮಾತನಾಡಿದ ಅವರು ಕೆಲವರು ಅರಾಜಕತೆ ಹಾಗೂ ಸಂಘರ್ಷವನ್ನು ಹುಟ್ಟುಹಾಕಬೇಕೆಂದು ಕೆಲವರು ಸಂಚು ನಡೆಸಿದ್ದು, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಬಾವುಟ ಸುಟ್ಟಿದ್ದು ಹಾಗೂ ಇಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಸಿಬಳಿಯುವ ಕೆಲಸ ಮಾಡಿರುವ ಹಿಂದೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಸಂಘರ್ಷ ಆಗಲಿ ಎಂದು ಅರಾಜಕತಾ ವಾದಿಗಳು ಸೃಷ್ಟಿ ಮಾಡಿರುವ ಸಂಚು ಇದಾಗಿರುವ ಸಾಧ್ಯತೆ ಇದೆ ಎಂದು ಹೇಳಿದರು

ಸಾರ್ವಜನಿಕರು ಈ ಹಿನ್ನೆಲೆಯಲ್ಲಿ ಅರಾಜಕತಾವಾದಿಗಳ ಸಂಚಿಗೆ ಬಲಿಯಾಗಬಾರದು ನಾವು ಸೌಹಾರ್ದತೆ ಹಾಗೂ ಶಾಂತಿಯನ್ನು ಕಾಪಾಡಬೇಕಿದೆ ಮಹಾರಾಷ್ಟ್ರದಲ್ಲಿ ಲಕ್ಷಾಂತರ ಕನ್ನಡಿಗರು ಇದ್ದಾರೆ ಕರ್ನಾಟಕದಲ್ಲಿ ಲಕ್ಷಾಂತರ ಜನ ಮರಾಠಿಗರು ಇದ್ದಾರೆ. ನಮ್ಮೇಲ್ಲರ ಭಾವನೆ ರಾಷ್ಟ್ರೀಯತೆಯ ಜೊತೆಗೆ ಹಾಸುಹೊಕ್ಕಾಗಿದೆ ಇದಕ್ಕೆ ಧಕ್ಕೆ ತರುವ ಸಂಚು ನಡೆಸಲಾಗುತ್ತಿದ್ದು ಎಚ್ಚರದಿಂದಿರುವ ಅಗತ್ಯ ಇದೆ ಎಂದು ಹೇಳಿದರು.

* ದತ್ತಜಯಂತಿ ಹಿನ್ನೆಲೆ ಪಡಿಸಂಗ್ರಹ

 

ದತ್ತಪೀಠದಲ್ಲಿ ದತ್ತಜಯಂತಿ ಆಚರಣೆ ಹಿನ್ನೆಲೆಯಲ್ಲಿ ಶನಿವಾರ ಸಿ.ಟಿ.ರವಿ ಸೇರಿ ಮಾಲಾಧಾರಿಗಳಿಂದ ಪಡಿ ಸಂಗ್ರಹ ಮಾಡಲಾಯಿತು.

ಚಿಕ್ಕಮಗಳೂರು ನಗರದ ನಾರಯಣಪುರ, ರಾಘವೇಂದ್ರ ಮಠದ ರಸ್ತೆಯಲ್ಲಿ ಭಿಕ್ಷಾಟನೆ ಮಾಡುವ ಮೂಲಕ ಪಡಿ ಸಂಗ್ರಹಿಸಲಾಯಿತು. ಈ ವೇಳೆ ಸ್ಥಳೀಯರು ಬೆಲ್ಲ, ಅಕ್ಕಿ, ಎಲೆ, ಅಡಿಕೆ, ಕೊಬ್ಬರಿ, ಬಾಳೆಹಣ್ಣು ನೀಡಿದರು.ಇಂದು ಸಂಗ್ರಹ ಮಾಡಿದ ಪಡಿಯನ್ನು ನಾಳೆ ಇರುಮುಡಿ ರೂಪದಲ್ಲಿ ದತ್ತಾತ್ರೇಯ ಸ್ವಾಮಿಗೆ ಮಾಲಾಧಾರಿಗಳು ಅರ್ಪಿಸಲಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!