May 19, 2024

MALNAD TV

HEART OF COFFEE CITY

ಅನುಸೂಯ ಜಯಂತಿ ಹಿನ್ನೆಲೆ; ಐ.ಡಿ ಪೀಠದಲ್ಲಿ ವಿಶೇಷ ಪೂಜೆ, ಅದ್ದೂರಿ ಸಂಕಿರ್ತನಾ ಯಾತ್ರೆ

1 min read

ಚಿಕ್ಕಮಗಳೂರು: ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆಯುತ್ತಿರುವ ದತ್ತಜಯಂತಿ ಉತ್ಸವದ ಅಂಗವಾಗಿ ಇಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಸಾವಿರಾರು ಮಹಿಳೆಯರು ದತ್ತಪೀಠಕ್ಕೆ ತೆರಳಿ ಅನುಸೂಯ ದೇವಿ ದರ್ಶನ ಪಡೆದು ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡರು. ತಾಲೂಕಿನ ಇನಾಂ ದತ್ತಾತ್ರೇಯ ಪೀಠದ ಕಬ್ಬಿಣದ ಸರಪಳಿಯೊಳಗೆ ಸಾಗಿ ಗುಹೆಯೋಳಗಿನ ಅನುಸೂಯ ದೇವಿ ಹಾಗೂ ದತ್ತಾತ್ರೇಯರ ಪಾದುಕೆ ದರ್ಶನ ಪಡೆದ ಬಳಿಕ ಇನಾಂ ದತ್ತಪೀಠ ಆವರಣದಲ್ಲಿನ ಹೋಮ ಮಂಟಪದಲ್ಲಿ ದತ್ತಾತ್ರೇಯರಿಗೆ ಹಾಗೂ ಅನುಸೂಯ ದೇವಿಗೆ ಅತ್ರಿ ಪೂಜೆ ಹಾಗೂ ದತ್ತಾತ್ರೇಯರಿಗೆ ಕಲ್ಪ ಪೂಜೆ ಹಾಗೂ ಗಣಪತಿ ಹೋಮವನ್ನು ನೇರವೇರಿಸಲಾಯಿತು.

ಶುಭ್ರವೃತಪ್ರಾಣಾ ಮಾತಾಜಿ ನೇತೃತ್ವದಲ್ಲಿ ಅರ್ಚಕರು ಪೂರ್ಣಾಹುತಿ ನೇರವೇರಿಸಿದರು. ಖಾಂಡ್ಯದ ಕೇಶವ ಮೂರ್ತಿ ತಂಡದಿoದ ಹೋಮ ಹವನ ವಿಶೇಷ ಪೂಜೆಗಳನ್ನು ನೇರವೇರಿಸಲಾಯಿತು.ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಆದಿಶಕ್ತಿ ನಗರದ ಶಾರದ ಮಠದ ಶುಭ್ರವೃತಪ್ರಾಣಾ ಮಾತಾಜಿ ಮಾತನಾಡಿದರು. ದತ್ತಪೀಠದ ಪವಿತ್ರ ವಾತಾವರಣ ಆಧ್ಯಾತ್ಮಿಕವಾದ ಚಿಂತನೆಗಳನ್ನು ಮನಸ್ಸಿನಲ್ಲಿ ಮೂಡಿಸುತ್ತದೆ ಅದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ ಎಂದರು. ಈ ಜಾಗ ಅತ್ರಿಮುನಿ, ಅನುಸೂಯ ದೇವಿ ತಪ್ಪಸ್ಸು ಮಾಡಿದ ಜಾಗವಾದ್ದರಿಂದ ಆಧ್ಯಾತ್ಮಿಕ ಭಾವ ಹೆಚ್ಚಾಗುತ್ತದೆ. ಆ ಅನುಭವವನ್ನು ನಾವು ಪಡೆಯಬೇಕು ಎಂದು ಹೇಳಿದರು. ಆಧ್ಯಾತ್ಮಿಕ ಜೀವನದಲ್ಲಿ ನಮಗೆ ಯಾವ ದೇವರು ಇಷ್ಟವೋ ಆ ದೇವರನ್ನು ನಾವು ಪೂಜಿಸಬಹುದು ಸಂಪೂರ್ಣ ಮನಸ್ಸು ಪೂರ್ವಕವಾಗಿ ನಾವು ಪೂಜೆ ಮಾಡಬೇಕು ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮೊಳಗೇ ಭಗವಂತ ಇದ್ದಾನೆ ಅವನನ್ನು ಅತ್ಯಂತ ಭಕ್ತಿ ಹಾಗೂ ಪ್ರತಿಯಿಂದ ಪೂಜಿಸಬೇಕು ಎಂದು ಭಕ್ತರಿಗೆ ತಿಳಿಸಿದರು.

ನಮ್ಮ ದೇವಸ್ಥಾನಗಳು ಹೆಚ್ಚಾಗಿ ಪರ್ವತ, ನದಿಗಳ ಬಳಿ ಇರುವುದಕ್ಕೆ ಅಲ್ಲಿನ ಸುಂದರ ಪರಿಸರ ಕಾರಣ. ಅಲ್ಲಿ ನಾವು ಬಂದು ಭಗವಂತನನ್ನು ಆರಾಧನೆ ಮಾಡಬೇಕು, ಪ್ರಕೃತಿ ಜೊತೆಗೆ ನಾವು ಒಂದಾಗಬೇಕು. ಭಗವಂತ ನಮ್ಮೊಳಗೆ ಹಾಗೂ ನಮ್ಮ ಹೊರಗೂ ಸಹ ಇದ್ದಾನೆ ಅದನ್ನು ನಾವು ನಮ್ಮದೇ ರೀತಿಯಲ್ಲಿ ಕಂಡುಕೊಳ್ಳಬೇಕು ಎಂದು ತಿಳಿಸಿದರು.ಯಾರಿಗೆ ಮಾತ್ಸರ್ಯ ಇಲ್ಲವೋ, ಅಸೂಯೆ ಇಲ್ಲವೋ, ಎಲ್ಲರನ್ನು ತಮ್ಮವರಾಗಿ ಮಾಡಿಕೊಂಡಿರುತ್ತಾರೆಯೋ ಅವರೇ ಅನುಸೂಯೆಯ ಗುಣುಳ್ಳುವರು. ಅಂತಹವರು ಪ್ರೀತಿಸುತ್ತಾರೆ, ಎಲ್ಲರನ್ನು ಗೆಲ್ಲುತ್ತಾರೆ ಎಂದು ಹೇಳಿದರು. ನಮ್ಮಲ್ಲಿ ಸತ್ವಗುಣ, ಋಜ್ವಗುಣ ಹಾಗೂ ತಾಮಸಿಕ ಗುಣವುಳ್ಳವರು ಇರುತ್ತಾರೆ. ಆದರೆ ತಾಮಸಿಕ ಗುಣವನ್ನು ಬಿಟ್ಟು ಸತ್ವಗುಣದೆಡೆಗೆ ಸಾಗಬೇಕು ಆಗ ನಾವು ದಯಾಸಂಪನ್ನರಾಗುತ್ತೇವೆ. ಅಂತಹ ಗುಣವನ್ನು ಹೊಂದಿದವರೇ ಅನುಸೂಯಾ ದೇವಿ ಎಂದು ಕಥೆಯ ಮೂಲಕ ತಿಳಿಸಿದರು.

ರಾಷ್ಟ್ರೀಯವಿಶ್ವಹಿಂದೂ ಪರಿಷತ್ ರಾಜ್ಯ ಉಪಾಧ್ಯಕ್ಷೆ ವಿಜಯಲಕ್ಷ್ಮಿಮಾನೆ ಮಾತನಾಡಿ, ನಾವು ಯಾವಗಲೂ ಜನಹಿತ ಹಾಗೂ ಲೋಕಕಲ್ಯಾಣಕ್ಕಾಗಿ ಕೆಲಸ ಮಾಡಬೇಕು. ಅಂತಹ ಸಂದರ್ಭದಲ್ಲಿ ಕಷ್ಟಗಳು ಬಂದ್ರೆ ಎಲ್ಲವನ್ನು ಮರೆತು ಸಮಾಜಮುಖಿಯಾಗಿ ಚಿಂತಿಸಬೇಕು ಎಂದರು.

ಅದ್ಧೂರಿ ಸಂಕಿರ್ತನಾ ಯಾತ್ರೆ

 

ದತ್ತಜಯಂತಿ ಅಂಗವಾಗಿ ನಗರದಲ್ಲಿ ಅನುಸೂಯದೇವಿ ಪೂಜೆ ಹಾಗೂ ಸಂಕೀರ್ತನಾ ಯಾತ್ರೆ ವಿಜೃಂಭಣೆಯಿoದ ಜರುಗಿತು. ಬೆಳಿಗ್ಗೆ ನಗರದ ಬೋಳರಾಮೇಶ್ವರ ದೇವಸ್ಥಾನ ಆವರಣದಲ್ಲಿ ವಿಶ್ವಹಿಂದೂ ಪರಿಷತ್ ರಾಷ್ಟ್ರೀಯ ಉಪಾಧ್ಯಕ್ಷೆ ಡಾ|ವಿಜಯಲಕ್ಷ್ಮಿ ದೇಶಮಾನೆ ಅನುಸೂಯ ದೇವಿ ಪೂಜೆ ಹಾಗೂ ಸಂಕೀರ್ತನಾ ಯಾತ್ರೆಗೆ ಚಾಲನೆ ನೀಡಿದರು.ಅನುಸೂಯದೇವಿ ಮೂರ್ತಿಯ ಪಲ್ಲಕ್ಕಿಯೊಂದಿಗೆ ಹೊರಟ ಯಾತ್ರೆ ಐ.ಜಿ.ರಸ್ತೆ ತೊಗರಿ ಹಂಕಲ್ ಸರ್ಕಲ್, ಮಲ್ಲಂದೂರು ವೃತ್ತ, ಎಂಇಎಸ್ ವೃತ್ತ, ವಿಜಯಪುರ ರಸ್ತೆ ಮೂಲಕ ಸಾಗಿದ ಯಾತ್ರೆ ಕಾಮಧೇನು ಗಣಪತಿ ದೇವಸ್ಥಾನದ ವರೆಗೂ ಸಾಗಿತು.

ಸಂಕೀರ್ತಾನ ಯಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಜಿಲ್ಲೆಯ ವಿವಿಧ ತಾ ಲ್ಲೂಕುಗಳಿಂದ ಸಾವಿರಾರು ಮಹಿಳೆಯರು ಕೇಸರಿ ಸೀರೆ ಉಟ್ಟು, ಕೇಸರಿ ಶಾಲುಹೊದ್ದು ಕೇಸರಿ ಬಾವುಟಗಳನ್ನು ಕೈಯಲ್ಲಿ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಐ.ಜಿ.ರಸ್ತೆಯ ಎರಡು ಇಕ್ಕೆಲಗಳಲ್ಲೂ ಸರತಿ ಸಾಲಿನಲ್ಲಿ ಶಿಸ್ತುಬದ್ಧಾಗಿ ಸಾಗಿದ ಮಹಿಳೆ ಯರು ಮೆರೆವಣಿಗೆಯುದ್ದಕ್ಕೂ ದತ್ತಪೀಠ ಹಿಂದೂಗಳ ಪೀಠ, ದತ್ತಪೀಠವನ್ನು ಹಿಂದೂ ಗಳಿಗೆ ಒಪ್ಪಿಸಬೇಕು ಎಂದು ಘೋಷಣೆಗಳನ್ನು ಕೂಗಿದರು. ಮೆರವಣಿಗೆಯ ಮಧ್ಯೆ ಮಧ್ಯೆ ತಂಡೋಪ ತಂಡವಾಗಿ ಸಾಗುತ್ತಿದ್ದ ಮಹಿಳೆಯರ ಗುಂಪು ದೇವರ ಭಜನೆ, ಕೀ ರ್ತನೆಗಳನ್ನು ಹಾಡುತ್ತಾ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಮೀಪದಲ್ಲಿರುವ ಕಾಮಧೇನು ಗಣಪತಿ ದೇವಸ್ಥಾನವನ್ನು ತಲುಪಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!