May 17, 2024

MALNAD TV

HEART OF COFFEE CITY

ಪ್ರಧಾನಿ ಮೋದಿ ಎದುರು 30 ಜನರ ತಂಡದಿಂದ ಕೆಂಪೇಗೌಡರ ಕುರಿತ ನೃತ್ಯ : ಜ್ಯೋತಿ ಪ್ರಕಾಶ್

1 min read

ಚಿಕ್ಕಮಗಳೂರು-ಕರ್ನಾಟಕ ಸರ್ಕಾರ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರವು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ೧೦೮ ಅಡಿಗಳ ಕೆಂಪೇಗೌಡರ ಕಂಚಿನ ಭವ್ಯ ಪ್ರತಿಮೆಯ ಅನಾವರಣವನ್ನು ನವೆಂಬರ್ ೧೧ ರ ಶುಕ್ರವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ನಡೆಸಲಿದ್ದು ಈ ಭವ್ಯ ಪ್ರತಿಮೆಯನ್ನು ಪ್ರಗತಿಯ ಪ್ರತಿಮೆ ಎಂದು ಕರೆಯಲಾಗುತ್ತಿದೆ.

ಈ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರಿನ ನೂಪುರ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯ ನಿರ್ದೇಶಕಿ ಜ್ಯೋತಿಪ್ರಕಾಶ್ ಸೇರಿದಂತೆ ೩೦ ಜನರ ನೃತ್ಯ ಕಲಾವಿದರ ತಂಡವು ನಾಡಪ್ರಭು ಕೆಂಪೇಗೌಡರು ಎಂಬ ಕೆಂಪೇಗೌಡರ ಕುರಿತಾದ ನೃತ್ಯರೂಪಕವನ್ನು ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಪ್ರದರ್ಶಿಸಲಿದ್ದಾರೆ. ಈ ಹಿಂದೆಯು ಸಹ ೨೦೧೯ ರಲ್ಲಿ ಸಿಂಗಾಪುರದಲ್ಲಿ ನಡೆದ ಅಂತರಾಷ್ಟ್ರೀಯ ಕೆಂಪೇಗೌಡ ಜಯಂತಿಯಲ್ಲಿ ನೃತ್ಯರೂಪಕವನ್ನು ಪ್ರದರ್ಶಿಸಿ ಅಲ್ಲಿಯ ಸಭೀಕರ ಪ್ರಶಂಸೆಗೆ ಪಾತ್ರರಾಗಿದ್ದರು.ನೃತ್ಯರೂಪಕದ ಮೂಲಕ ಕೆಂಪೇಗೌಡರಿಗೆ ನೃತ್ಯ ನಮನವನ್ನು ಸಲ್ಲಿಸುತ್ತಿರುವ ಜ್ಯೋತಿಪ್ರಕಾಶ್ ರವರು ನಮಗೆ ದೊರೆತಿರುವ ಈ ಅವಕಾಶವು ನೂಪುರ ಸಂಸ್ಥೆ ಹಾಗೂ ಚಿಕ್ಕಮಗಳೂರಿಗೆ ಹೆಮ್ಮೆಯ ವಿಷಯ ಎಂದು ಅಭಿಮಾನ ವ್ಯಕ್ತಪಡಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!