April 30, 2024

MALNAD TV

HEART OF COFFEE CITY

ಎಲ್ಲೆಂದರಲ್ಲಿ ಕಸ ಸುರಿದರೆ ಬೀಳುತ್ತೇ ಕ್ರಿಮಿನಲ್ ಕೇಸ್: ಪೌರಾಯುಕ್ತ ಬಸವರಾಜ್ ಎಚ್ಚರಿಕೆ

1 min read

ಚಿಕ್ಕಮಗಳೂರು-ನಗರದಲ್ಲಿ ಎಲ್ಲೆಂದರಲ್ಲಿ ಕಸ ಸುರಿದು, ನೈರ್ಮಲ್ಯವನ್ನು ಹಾಳುಮಾಡುವವರು ಕಂಡು ಬಂದಲ್ಲಿ ಅಂತವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ, ನಗರಸಭೆಯಿಂದ ನೀಡಲಾಗುವ ಮೂಲಭೂತ ಸೌಲಭ್ಯಗಳನ್ನು ತಡೆಹಿಡಿಯಎಲ್ಲೆಂದರಲ್ಲಿ ಕಸ ಸುರಿದರೆ ಬೀಳುತ್ತೇ ಕ್ರಿಮಿನಲ್ ಕೇಸ್: ಪೌರಾಯುಕ್ತ ಬಸವರಾಜ್ ಎಚ್ಚರಿಕೆ
ಚಿಕ್ಕಮಗಳೂರು-ನಗರದಲ್ಲಿ ಎಲ್ಲೆಂದರಲ್ಲಿ ಕಸ ಸುರಿದು, ನೈರ್ಮಲ್ಯವನ್ನು ಹಾಳುಮಾಡುವವರು ಕಂಡು ಬಂದಲ್ಲಿ ಅಂತವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ, ನಗರಸಭೆಯಿಂದ ನೀಡಲಾಗುವ ಮೂಲಭೂತ ಸೌಲಭ್ಯಗಳನ್ನು ತಡೆಹಿಡಿಯಲಾಗುವುದು ಎಂದು ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ ಎಚ್ಚರಿಸಿದರು.

ನಗರದ ದರ್ಜಿಬೀದಿಯಲ್ಲಿ ನಗರದ ಸ್ವಚ್ಚತೆ ಕುರಿತು ಜನಜಾಗೃತಿ ಮೂಡಿಸುವ ವಿವಿಧ ಚಿತ್ರಪಟ ಹಾಗೂ ಫಲಕಗಳನ್ನು ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರದ ಸ್ವಚ್ಚತೆಗಾಗಿ ನಗರಸಭೆ ಹಲವು ವರ್ಷಗಳಿಂದ ನಗರದ 35 ವಾರ್ಡ್‍ಗಳಲ್ಲಿ ಆಟೋ ಟಿಪ್ಪರ್‍ಗಳಿಂದ ನಿತ್ಯ ಕಸ ಸಂಗ್ರಹಣೆ ಮಾಡಲಾಗುತ್ತಿದೆ, ಆದರೆ ಕೆಲವು ವಾರ್ಡ್‍ಗಳಲ್ಲಿನ ಕಿಡಿಗೇಡಿಗಳು ಕಸ ಸಂಗ್ರಹಣೆಗೆ ಹಣ ನೀಡಬೇಕು ಎಂಬ ದುರುದ್ದೇಶದಿಂದ ಆಟೋ ಟಿಪ್ಪರ್‍ಗಳಿಗೆ ನೀಡದೆ ರಾತ್ರಿ ವೇಳೆ ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ. ಇದರಿಂದ ನಗರದ ನೈರ್ಮಲ್ಯ ಹಾಳಾಗುತ್ತಿದ್ದು ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದರು.
ಎಲ್ಲೆಂದರಲ್ಲಿ ಕಸ ಹಾಕುವುದನ್ನು ತಪ್ಪಿಸುವ ಕ್ರಮಗಳ ಬಗ್ಗೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದಾಗ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಆಯ್ದ ಭಾಗಗಳಲ್ಲಿ ಫ್ಲೆಕ್ಸ್ ಹಾಕಲು ತೀರ್ಮಾನಿಸಲಾಗಿದೆ. ರಸ್ತೆ ಬೀದಿಗಳಲ್ಲಿ ಕಸಹಾಕುವವರಿಗೆ ಹೆದರಿಕೆ ಹುಟ್ಟಿಸುವ ದೇವರು, ಭೂತ0ದ ಚಿತ್ರಪಟಗಳನ್ನು ನಗರದ ಎಲ್ಲಾ ವಾಡ್‍ಗಳಲ್ಲಿ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

ಕೆಲವರು ರಾಜಾರೋಷವಾಗಿ ಬೆಳ್ಳಂಬೆಳಗ್ಗೆಯೇ ರಸ್ತೆ, ಚರಂಡಿಗೆ ಕಸ ತಂದು ಸುರಿಯುತ್ತಿದ್ದಾರೆ, ಇಂತಹ ಘಟನೆಗಳು ಕಂಡು ಬಂದಲ್ಲಿ ಅಂತವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಿ, ನಗರಸಭೆಯಿಂದ ನೀಡಲಾಗುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ತಡೆಹಿಡಿಯಲಾಗುವುದು. ಇತ್ತೀಚಿಗೆ ಉಪ್ಪಳ್ಳಿಯಲ್ಲಿ ಯುವಕನೋರ್ವ ಕಸ ತಂದು ಸುರಿಯುವಾಗ ಶಾಸಕರ ಕೈಗೆ ಸಿಕ್ಕು ಹಿಗ್ಗಾಮುಗ್ಗಾ ಮಾತಿನ ಚಾಟಿ ಬೀಸಿದ್ದರು. ನಗರದ ಸ್ವಚ್ಚತೆಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿದರೂ ಪ್ರಯೋಜನವಾಗಿಲ್ಲ, ನಗರವನ್ನು ಸ್ವಚ್ಚ ಹಾಗೂ ಸುಂದರವಾಗಿಸುವಲ್ಲಿ ಜನರ ಸಹಕಾರ ಅಗತ್ಯವಿದೆ ಎಂದು ವಿನಂತಿಸಿಕೊಂಡರು.

ನಗರದಲ್ಲಿ ಕಸ ಬಿಸಾಡುವ 150 ರಿಂದ 200ಕಸದ ಪಾಯಿಂಟ್‍ಗಳನ್ನು ಗುರುತಿಸಲಾಗಿದೆ. ಆ ಭಾಗದಲ್ಲಿ ಜನರಿಗೆ ಅರಿವು ಮೂಡಿಸುವ ಫಲಕಗಳ ಜತೆಗೆ ದೇವರು, ಭೂತದ ಚಿತ್ರಪಟಗಳನ್ನು ಅಳವಡಿಸಿ ಎಚ್ಚರಿಕೆ ನೀಡಲಾಗುತ್ತಿದ್ದೆ ಇದರಿಂದಾರೂ ಅವರ ಮನಬದಲಾಗಬಹುದು ಎಂಬ ನಂಬಿಕೆಯಷ್ಟೇ ಎಂದರು.
ನಗರದ ಎಲ್ಲಾ ವಾರ್ಡ್‍ಗಳಲ್ಲಿ 24 ಆಟೋ ಟಿಪ್ಪರ್‍ಗಳ ಮೂಲಕ ಮನೆ ಮನೆ ಕಸ ಸಂಗ್ರಹಣೆ ಮಾಡಲಾಗುತ್ತಿದ್ದು ಸಂಗ್ರಹಿಸಿದ ಕಸದಿಂದ ಗೊಬ್ಬರವನ್ನು ತಯಾರಿಸಲಾಗುತ್ತಿದೆ ಮುಂದಿನ ಎರಡು ತಿಂಗಳಲ್ಲಿ ಹೈಟೆಕ್ ಕಸ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.ಲಾಗುವುದು ಎಂದು ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ ಎಚ್ಚರಿಸಿದರು.
ನಗರದ ದರ್ಜಿಬೀದಿಯಲ್ಲಿ ನಗರದ ಸ್ವಚ್ಚತೆ ಕುರಿತು ಜನಜಾಗೃತಿ ಮೂಡಿಸುವ ವಿವಿಧ ಚಿತ್ರಪಟ ಹಾಗೂ ಫಲಕಗಳನ್ನು ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರದ ಸ್ವಚ್ಚತೆಗಾಗಿ ನಗರಸಭೆ ಹಲವು ವರ್ಷಗಳಿಂದ ನಗರದ 35 ವಾರ್ಡ್‍ಗಳಲ್ಲಿ ಆಟೋ ಟಿಪ್ಪರ್‍ಗಳಿಂದ ನಿತ್ಯ ಕಸ ಸಂಗ್ರಹಣೆ ಮಾಡಲಾಗುತ್ತಿದೆ, ಆದರೆ ಕೆಲವು ವಾರ್ಡ್‍ಗಳಲ್ಲಿನ ಕಿಡಿಗೇಡಿಗಳು ಕಸ ಸಂಗ್ರಹಣೆಗೆ ಹಣ ನೀಡಬೇಕು ಎಂಬ ದುರುದ್ದೇಶದಿಂದ ಆಟೋ ಟಿಪ್ಪರ್‍ಗಳಿಗೆ ನೀಡದೆ ರಾತ್ರಿ ವೇಳೆ ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ. ಇದರಿಂದ ನಗರದ ನೈರ್ಮಲ್ಯ ಹಾಳಾಗುತ್ತಿದ್ದು ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದರು.
ಎಲ್ಲೆಂದರಲ್ಲಿ ಕಸ ಹಾಕುವುದನ್ನು ತಪ್ಪಿಸುವ ಕ್ರಮಗಳ ಬಗ್ಗೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದಾಗ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಆಯ್ದ ಭಾಗಗಳಲ್ಲಿ ಫ್ಲೆಕ್ಸ್ ಹಾಕಲು ತೀರ್ಮಾನಿಸಲಾಗಿದೆ. ರಸ್ತೆ ಬೀದಿಗಳಲ್ಲಿ ಕಸಹಾಕುವವರಿಗೆ ಹೆದರಿಕೆ ಹುಟ್ಟಿಸುವ ದೇವರು, ಭೂತÀದ ಚಿತ್ರಪಟಗಳನ್ನು ನಗರದ ಎಲ್ಲಾ ವಾಡ್‍ಗಳಲ್ಲಿ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

ಕೆಲವರು ರಾಜಾರೋಷವಾಗಿ ಬೆಳ್ಳಂಬೆಳಗ್ಗೆಯೇ ರಸ್ತೆ, ಚರಂಡಿಗೆ ಕಸ ತಂದು ಸುರಿಯುತ್ತಿದ್ದಾರೆ, ಇಂತಹ ಘಟನೆಗಳು ಕಂಡು ಬಂದಲ್ಲಿ ಅಂತವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಿ, ನಗರಸಭೆಯಿಂದ ನೀಡಲಾಗುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ತಡೆಹಿಡಿಯಲಾಗುವುದು. ಇತ್ತೀಚಿಗೆ ಉಪ್ಪಳ್ಳಿಯಲ್ಲಿ ಯುವಕನೋರ್ವ ಕಸ ತಂದು ಸುರಿಯುವಾಗ ಶಾಸಕರ ಕೈಗೆ ಸಿಕ್ಕು ಹಿಗ್ಗಾಮುಗ್ಗಾ ಮಾತಿನ ಚಾಟಿ ಬೀಸಿದ್ದರು. ನಗರದ ಸ್ವಚ್ಚತೆಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿದರೂ ಪ್ರಯೋಜನವಾಗಿಲ್ಲ, ನಗರವನ್ನು ಸ್ವಚ್ಚ ಹಾಗೂ ಸುಂದರವಾಗಿಸುವಲ್ಲಿ ಜನರ ಸಹಕಾರ ಅಗತ್ಯವಿದೆ ಎಂದು ವಿನಂತಿಸಿಕೊಂಡರು

.
ನಗರದಲ್ಲಿ ಕಸ ಬಿಸಾಡುವ 150 ರಿಂದ 200ಕಸದ ಪಾಯಿಂಟ್‍ಗಳನ್ನು ಗುರುತಿಸಲಾಗಿದೆ. ಆ ಭಾಗದಲ್ಲಿ ಜನರಿಗೆ ಅರಿವು ಮೂಡಿಸುವ ಫಲಕಗಳ ಜತೆಗೆ ದೇವರು, ಭೂತದ ಚಿತ್ರಪಟಗಳನ್ನು ಅಳವಡಿಸಿ ಎಚ್ಚರಿಕೆ ನೀಡಲಾಗುತ್ತಿದ್ದೆ ಇದರಿಂದಾರೂ ಅವರ ಮನಬದಲಾಗಬಹುದು ಎಂಬ ನಂಬಿಕೆಯಷ್ಟೇ ಎಂದರು.
ನಗರದ ಎಲ್ಲಾ ವಾರ್ಡ್‍ಗಳಲ್ಲಿ 24 ಆಟೋ ಟಿಪ್ಪರ್‍ಗಳ ಮೂಲಕ ಮನೆ ಮನೆ ಕಸ ಸಂಗ್ರಹಣೆ ಮಾಡಲಾಗುತ್ತಿದ್ದು ಸಂಗ್ರಹಿಸಿದ ಕಸದಿಂದ ಗೊಬ್ಬರವನ್ನು ತಯಾರಿಸಲಾಗುತ್ತಿದೆ ಮುಂದಿನ ಎರಡು ತಿಂಗಳಲ್ಲಿ ಹೈಟೆಕ್ ಕಸ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!