May 3, 2024

MALNAD TV

HEART OF COFFEE CITY

ಹರಾಜಕತೆ ಸೃಷ್ಠಿಸೋದು ನಾಯಕತ್ವದ ಲಕ್ಷಣವಲ್ಲ : ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ

1 min read

ಚಿಕ್ಕಮಗಳೂರು : ಹರಾಜಕತೆ ಸೃಷ್ಠಿಸೋದೆ ನಾಯಕತ್ವದ ಲಕ್ಷಣ ಅಲ್ಲ, ಜನರನ್ನು ಎತ್ತಿಕಟ್ಟೋದು, ಹರಜಾಕತೆ ಸೃಷ್ಟಿಸೋದು ಸುಲಭ ಎಂದು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಇಷ್ಟು ದಿನ ರೈತ ನಾಯಕ, ಈಗ ಕಾರ್ಮಿಕ ನಾಯಕ, ಸಂದರ್ಭ-ಪರಿಸ್ಥಿತಿ ಅರ್ಥೈಸಿಕೊಂಡು ಬೇಡಿಕೆ ಈಡೇರಿಕೆಗೆ ಮುಂದಾಗಬೇಕು, ಅತಿ ಒತ್ತಡ ಹೇರಿದರೆ ಸಂಬಂಧ ಹರಿದು ಹೋಗುತ್ತೆ, ಸಂಬಂಧ ಹರಿದರೆ ಸರ್ಕಾರಕ್ಕಿಂತ ದೊಡ್ಡವರು ಯಾರೂ ಇಲ್ಲ, ಬೆದರಿಕೆ ಮೂಲಕ ಸರ್ಕಾರ ಮಣಿಸೋದು ಅಸಾಧ್ಯ. ಸರ್ಕಾರ ರೈತರ ಪರ ತೆಗೆದುಕೊಂಡ ತೀರ್ಮಾನಗಳನ್ನು ರೈತ ವಿರೋಧಿ ಅಂತಿದ್ರು. ಸರ್ಕಾರದ ಮೂರು ಮಸೂದೆ ರೈತ ಪರ ಇರುವ ಮಸೂದೆ. ಬೆಳೆಗಳನ್ನ ಎಲ್ಲಿ ಬೇಕಾದ್ರು ಮಾರಲು ಅವಕಾಶ ಕೇಳಿದ್ದರು. ಮುಕ್ತ ಅವಕಾಶ ಸಿಕ್ಕ ಮೇಲೆ ರೈತ ವಿರೋಧಿ ಎಂದು ಹೇಳುತ್ತಾರೆ. ಸಚಿವರು ಕೆಎಸ್‌ಆರ್‌ಟಿಸಿ ನೌಕರರ ಜೊತೆ ಮಾತನಾಡಿ ಸಮಯ ಕೇಳಿದ್ದಾರೆ. ನೌಕರರು ಒಂದು ತಿಂಗಳು ಸಮಯ ಕೊಟ್ಟು ಕಾದು ನೋಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ .

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!