May 2, 2024

MALNAD TV

HEART OF COFFEE CITY

ತರುವೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವು

1 min read

ಕೊಟ್ಟಿಗೆಹಾರ;ಕಳೆದ 27 ರಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಜಯಭೇರಿ ಬಾರಿಸಿದ್ದಾರೆ.
ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿನ್ನಡಿ ಮತಗಟ್ಟೆಯಲ್ಲಿ ಎರಡು ಅಭ್ಯರ್ಥಿಗಳಾದ ಸುಶೀಲ ಹಾಗೂ ಮೌಲ್ಯ ಎಂಬವರು ಸರಾಸರಿ 94 ಮತಗಳನ್ನು ಪಡೆದು ಸಮಬಲ ಸಾಧಿಸಿದ್ದು ಚೀಟಿ ಎತ್ತುವ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಶೀಲ ಮೇಲುಗೈ ಸಾಧಿಸಿದರು. ತರುವೆಯ ಗ್ರಾಮ ಪಂಚಾಯಿತಿಯಲ್ಲಿ 4 ಸ್ಥಾನಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಬಿ.ಎಂ.ಸತೀಶ್, ಎ.ಎನ್. ರಘು, ಸ್ಮಿತಾ, ಹಾಗೂ ಜೆಡಿಎಸ್, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸ್ವರೂಪ ಪ್ರಶಾಂತ್ ಅವರು ಗೆಲುವು ಸಾಧಿಸಿದ್ದಾರೆ.

ಬಣಕಲ್ ಗ್ರಾ.ಪಂ ಚುನಾವಣೆಯಲ್ಲಿ ಒಟ್ಟು 15 ವಾರ್ಡ್‍ನಲ್ಲಿ 10 ವಾರ್ಡ್‍ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಮಧುಕುಮಾರ್, ಆಧಂ, ಲೀಲವತಿ, ಸುಜಾತ ದಿನೇಶ್, ಇರ್ಪಾನ್, ಆತೀಕಾ ಭಾನು, ಝರೀನಾ, ವಿನಯಕುಮಾರ್, ಸಿರಾಜ್, ರತ್ನ ಜಯಗಳಿಸಿದ್ದು 5 ವಾರ್ಡ್‍ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸರೋಜ, ರೇಣುಕಾ, ಸುರೇಶ್, ಸುನೀತಾ, ತಾರಾನಾಥ್ ಜಯಗಳಿಸಿದ್ದಾರೆ.
ಕೊಟ್ಟಿಗೆಹಾರದಲ್ಲಿ ಚುನಾವಣೆಯಲ್ಲಿ ಜಯ ಗಳಿಸಿದ ತರುವೆ ಗ್ರಾ.ಪಂ ಚುನಾವಣೆಯ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮಾಡಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!