May 2, 2024

MALNAD TV

HEART OF COFFEE CITY

ಕೋಡಿ ಬಿದ್ದ ಕೆರೆಯಲ್ಲಿ ಮೀನಿಗಾಗಿ ಸ್ಪರ್ಧೆ

1 min read

ಬೆಳವಾಡಿ : ಬೆಳವಾಡಿ ಕೆರೆ ಕೋಡಿ ಬಿದ್ದಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದರೆ, ಗ್ರಾಮಸ್ಥರಲ್ಲಿ ಮೀನು ಹಿಡಿಯುವ ಸ್ಪರ್ಧೆ ಕಂಡು ಬಂದಿತು.

ಹದಿನೈದು ವರ್ಷಗಳಿಂದ ಬೆಳವಾಡಿ ಕೆರೆ ತುಂಬದೆ ಸುತ್ತಮುತ್ತಲ ಗ್ರಾಮಗಳು ಬರಗಾಲದಂತಾಗಿದ್ದಲ್ಲದೆ, ಜಾನುವಾರುಗಳಿಗೆ, ಪ್ರಾಣಿಪಕ್ಷಿಗಳಿಗೆ, ಜಲಚರಗಳಿಗೆ ನೀರಿಲ್ಲದೆ ಪರಿತಪಿಸುತ್ತಿದ್ದವು. ಬೆಳವಾಡಿ ಕೆರೆಯಲ್ಲಿ ನೀರು ತುಂಬಿದರೆ ಸುತ್ತಮುತ್ತಲ ಗ್ರಾಮಗಳ ಜನರು ಮೀನಿ ಶಿಕಾರಿಗೆ ಹೋಗುತ್ತಿದದ್ದು ವಾಡಿಕೆಯಾಗಿತ್ತು. ಆದರೆ ಹದಿನೈದು ವರ್ಷಗಳಿಂದ ಕೆರೆ ತುಂಬದೆ ಇರುವುದರಿಂದ ಕೃಷಿ ಸೇರಿದಂತೆ, ಮೀನು ಶಿಕಾರಿಯು ಸಂಪೂರ್ಣ ಸ್ತಭ್ದಗೊಂಡು ಗ್ರಾಮ ಕಳೆಗುಂದಿತ್ತು. ಇದೀಗ ಉತ್ತಮ ಮಳೆ ಹಾಗೂ ಮಾನವ ಪ್ರಯತ್ನದಿಂದ ಬೆಳವಾಡಿ ಕೋಡಿ ಬಿದ್ದ ಹಿನ್ನೆಲೆ ಸ್ಥಳೀಯ ಗ್ರಾಮಸ್ಥರು ಅಟ್ಟ ಸೇರಿದ್ದ ಮೀನಿನ ಬಲೆಗಳೊಂದಿಗೆ ಕೆರೆ ಅಂಗಳಕ್ಕೆ ಇಳಿದು, ಕೋಡಿ ಬಿದ್ದು ಹರಿದು ಹೋಗುವ ನೀರಿನಲ್ಲಿ ಮೀನು ಹಿಡಿಯುವ ಸ್ಪರ್ಧೆಯಂತೆ ಮೀನು ಹಿಡಿಯುತ್ತಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!