May 18, 2024

MALNAD TV

HEART OF COFFEE CITY

ಜನರ ನಿರೀಕ್ಷೆ ಈಡೇರಿಸುವಲ್ಲಿ ಬೊಮ್ಮಾಯಿ ಸರ್ಕಾರ ವಿಫಲ : ಹರಿಪ್ರಸಾದ್

1 min read
bommai-government-failed-to-fulfill-peoples-expectations-hariprasad

bommai-government-failed-to-fulfill-peoples-expectations-hariprasad

ಚಿಕ್ಕಮಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರ ಮೇಲೆ ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆ ನಿರೀಕ್ಷೆ ಹುಸಿಯಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ್ ಬೊಮ್ಮಾಯಿ ಅವರು ಸಂಘ ಪರಿವಾರದ ಹಿನ್ನಲೆಯವರಲ್ಲ ಸಮಾಜವಾದದ ಹಿನ್ನಲೆಯುಳ್ಳ ವ್ಯಕ್ತಿ ಹಾಗೂ ಅವರ ಕುಟುಂಬದ ಹಿನ್ನಲೆಯಲ್ಲಿ ಜನರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿ ದ್ದರು. ಆದರೆ, ಇವರ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಬೆಂಗಳೂರಿನಲ್ಲಿರುವ ಮಲ್ಟಿ ನ್ಯಾಷನಲ್ ಕಂಪನಿಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿವೆ. ಕಾಂಗ್ರೆಸ್ ಅಧಿಕಾರವಾಧಿಯಲ್ಲಿ ಸಿಟಿ ಆಫ್ ಆಪಚ್ಯುನಿಟಿ ಹೆಗ್ಗಳಿಕೆಗೆ ಪಾತ್ರ ವಾಗಿದ್ದ ಬೆಂಗಳೂರಿನಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಬೆಲೆ ಏರಿಕೆಯಿಂದ ಬಡವರು ಮತ್ತು ಮದ್ಯಮ ವರ್ಗದ ಜನರು ತತ್ತರಿಸಿ ಹೋಗಿದ್ದಾರೆ ಎಂದರು.
ಡಾ|ಮನಮೋಹನ್‍ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅಂದಾಜು 26 ಕೋಟಿ ಜನರು ಬಡತನ ರೇಖೆಯಲ್ಲಿದ್ದ ಜನರು ಆರ್ಥಿಕ ಚೇತರಿಕೆಯನ್ನು ಕಂಡಿದ್ದರು. ಬಿಜೆಪಿ ಸರ್ಕಾರ ನೀತಿಯಿಂದ ಜನರು ಆರ್ಥಿಕವಾಗಿ ಕುಂಠಿತವಾಗುತ್ತಿದ್ದಾರೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ 8ವರ್ಷದ ಆಡಳಿತಾವಧಿಯಲ್ಲಿ 16ಕೋಟಿ ಉದ್ಯೋಗ ಕಲ್ಪಿಸಬೇಕಿತ್ತು. ಆದರೆ. 40ಲಕ್ಷ ಉದ್ಯೋಗ ಸೃಷ್ಟಿಸುವಲ್ಲಿಯೂ ವಿಫಲರಾಗಿ ದ್ದಾರೆ. ಕೇಂದ್ರ ಸರ್ಕಾರ ಅವೈಜ್ಞಾನಿಕ ಅಗ್ನಿಪಥ್ ಯೋಜನೆಯಿಂದ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳಿಂದ ಮುಂದಿನ ಯುವ ಪೀಳಿಗೆಗೆ ಭವಿಷ್ಯ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆಡಳಿತಾರೂಢ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿ ವಿಫಲವಾಗಿದ್ದು, ಪ್ರತೀನಿತ್ಯ ಸುಳ್ಳು ಹೇಳು ವುದು ಮತ್ತು ಹಿಂಸೆಗೆ ಪ್ರಚೋಧನೆ ಮಾಡುವಂತಹ ಕೆಲಸ ಮಾಡುತ್ತಿದೆ. ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ. ರಾಷ್ಟ್ರ ಕವಲುದಾರಿಯಲ್ಲಿ ನಿಂತಿದ್ದು ದೇಶ ದಿವಾಳಿಯತ್ತಾ ಸಾಗುತ್ತಿದೆ ಎಂದರು.
ಬಿಜೆಪಿ ಸಿದ್ದಾಂತಗಳನ್ನು ಜನರ ಮೇಲೆ ಒತ್ತಾಯಪೂರ್ವಕವಾಗಿ ಹೇರಲು ಈ ಸರ್ಕಾರ ಮುಂದಾಗಿದೆ. ದೇಶದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದ್ದು ಅಂತರ ಕಲಹದ ಲಕ್ಷಣಗಳು ಗೋಚರಿಸುತ್ತಿದೆ ಎಂದ ಅವರು, ಜನರು ಎಚ್ಚೇತ್ತುಕೊಂಡು ಬಿಜೆಪಿ ಪಕ್ಷಕ್ಕೆ ತಕ್ಕಪಾಠವನ್ನು ಮುಂದಿನ ಚುನಾವಣೆಯಲ್ಲಿ ಕಲಿಸಬೇಕೆಂದು ಹಾಗೂ ಅವರು ಈ ಹಿಂದೇ ಇದ್ದ ಸ್ಥಾನಕ್ಕೆ ಕಳಿಸಬೇಕೆಂದು ಮನವಿ ಮಾಡಿದರು.

ಕೋಮುಭಾವನೆ ಬಿತ್ತುತ್ತಿರುವ ಬಿಜೆಪಿ ಸರ್ಕಾರ, ಉದಯಾಪುರ ಘಟನೆಯಲ್ಲಿ ಬಿಜೆಪಿ ಐಟಿಸೆಲ್ ಮುಖಂಡರೇ ಭಾಗಿಯಾಗಿರುವುದು ನೋಡಿದರೇ, ರಾಷ್ಟ್ರದಲ್ಲಿ ಅಶಾಂತಿ ಸೃಷ್ಟಿ ಸಲು ದೊಡ್ಡ ಷಡ್ಯಂತರ ನಡೆಯುತ್ತಿದೆ ಎಂದ ಅವರು, ಸಂಘಪರಿವಾರದ ಸಿದ್ದಾಂತದಂತೆ ಬಡವರನ್ನು ಆರ್ಥಿಕವಾಗಿ ಕುಗ್ಗಿಸಿ ಅವರ ಹಿಡಿತದಲ್ಲಿ ಇಟ್ಟುಕೊಳ್ಳುವ ಕೆಲಸಕ್ಕೆ ಮುಂದಾಗಿ ದ್ದಾರೆಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಡಾ|ಕೆ.ಪಿ.ಅಂಶುಮಂತ್, ಶಿವಾನಂದ ಸ್ವಾಮಿ, ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.

“ಕಾಂಗ್ರೆಸ್ ಮುಕ್ತ ಮಾಡುತ್ತೇವೆನ್ನುತ್ತಿದ್ದ ಬಿಜೆಪಿಯವರಿಗೆ ಶಿಕ್ಷಕ ಕ್ಷೇತ್ರ ಮತ್ತು ಪದ ವೀಧರ ಕ್ಷೇತ್ರ ಚುನಾವಣೆಯಲ್ಲಿ ಪ್ರಜ್ಞಾವಂತರು ತಕ್ಕಪಾಠ ಕಲಿಸಿದ್ದಾರೆ. ಬಿಜೆಪಿ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಶೇ.20ರಷ್ಟು ಇರುವ ಜನರನ್ನು ಬೆದರು ಗೊಂಬೆ ಮಾಡಿಕೊಂಡು ಹಿಂದುತ್ವದ ಹೆಸರಿನಲ್ಲಿ ಶೇ.80ರಷ್ಟು ಜನರನ್ನು ಭಯಭೀತರನ್ನಾಗಿ ಸುತ್ತಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕಪಾಠ ಕಲಿಸಲಿದ್ದಾರೆ.”

“ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತೀ ಕ್ಷೇತ್ರದ ಅಭ್ಯರ್ಥಿಗಳನ್ನು ಮೂರು ತಿಂಗಳ ಮುಂಚಿತವಾಗಿ ಘೋಷಣೆ ಮಾಡಲಾಗುವುದು. -ಬಿ.ಕೆ.ಹರಿಪ್ರಸಾದ್.”

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!