May 2, 2024

MALNAD TV

HEART OF COFFEE CITY

ಬಿಜೆಪಿ ಜನಪ್ರಿಯತೆ ಅಂತ್ಯ_ಬಿ.ಎಲ್ ಶಂಕರ್

1 min read

 

ಚಿಕ್ಕಮಗಳೂರು: ದೇಶದಲ್ಲಿ ಬಿಜೆಪಿಯ ಜನಪ್ರಿಯತೆ ಅಂತ್ಯ ಆರಂಭಗೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಸೈದ್ಧಾಂತಿಕ ರಾಜಕೀಯ ಧೃವೀಕರಣಗೊಳ್ಳಲಿದೆ ಎಂದು ಕೆಪಿಸಿಸಿ ವಕ್ತಾರ ಡಾ.ಬಿ.ಎಲ್.ಶಂಕರ್ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ  ಮಾತನಾಡಿ, ದೇಶದಲ್ಲಿ ಬದಲಾವಣೆ ತರುತ್ತೇವೆಂದು ಭರವಸೆ ನೀಡುವ ಮೂಲಕ ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ ಬಹುಮತ ಇದೆ ಎಂಬ ಕಾರಣಕ್ಕೆ ವಿರೋಧಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸಂಸತ್ತಿನಲ್ಲಿ ಚರ್ಚೆನಡೆಸದೆ ಧ್ವನಿಮತದ ಮೂಲಕ ಹಲವು ಕಾನೂನುಗಳನ್ನು ಜಾರಿಗೆತಂದಿದ್ದು, ೩ಕೃಷಿಕಾಯ್ದೆಗೆ ಸಂಬಂಧಿಸಿದಂತೆ ಈಗ ಜನ ಶಕ್ತಿ ಮತ್ತು ಜನಾಭಿಪ್ರಾಯಕ್ಕೆ ಮಣಿಯಬೇಕಾಯಿತು ಎಂದು ಹೇಳಿದರು.

ಯಾವುದೇ ಕಾಯ್ದೆ ಜಾರಿಗೊಳ್ಳುವ ಮೊದಲು ಸಂವಾದ, ಚರ್ಚೆ, ವಿಚಾರವಿನಿಯಮ ಮೂಲಕ ಎಲ್ಲಾ ಪ್ರಕ್ರಿಯೆಗಳು ನಡೆದು ಯಾವುದೇ ಒಳ್ಳೆಯದು ಎಂದು ತೀರ್ಮಾನಿಸಿ ಸ್ವೀಕಾರಿಸುವುದು ಹಿಂದಿನಿಂದ ನಡೆದುಬಂದಿದೆ. ೭ ವರ್ಷದಿಂದ ದೇಶದಲ್ಲಿ ಸಂಸದೀಯ ಚರ್ಚೆ, ಸಂವಾದ ಕಡಿಮೆಯಾಗಿದೆ. ಬಹುಮತ ಇದೆ ಎಂಬ ಒಂದೇ ಒಂದು ಕಾರಣಕ್ಕೆ ಗದ್ದಲದ ನಡುವೆ ಧ್ವನಿಮತದ ಮೂಲಕ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ ಎಂದರು. ಮೂರು ಕೃಷಿಕಾಯ್ದೆಗಳನ್ನು ಜಾರಿಗೊಳಿಸುವಾಗ ಹಾಗೂ ಹಿಂದಕ್ಕೆ ಪಡೆಯುವಾಗಲೂ ಚರ್ಚೆನಡೆಯಲಿಲ್ಲ, ಕೋವಿಡ್-೧೯ರ ನಿರ್ಬಂಧ ಬಳಸಿಕೊಂಡು ಸುಗ್ರಿವಾಜ್ಞೆಮೂಲಕ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಯಾವುದೇ ಸದಸ್ಯ ವಿರೋಧ ವ್ಯಕ್ತಪಡಿಸಿದಾಗ ಪರ,ವಿರೋಧದ ಚರ್ಚೆಗೆ ಅವಕಾಶಮಾಡಿಕೊಡಬೇಕು. ಆದರೆ, ಧ್ವನಿಮತದ ಮೂಲಕ ಕಾಯ್ದೆಗಳನ್ನುಪಾಸ್ ಮಾಡಲಾಯಿತು ಎಂದು ನುಡಿದರು.ದೆಹಲಿಯಲ್ಲಿ ಕೃಷಿಕಾಯ್ದೆ ಜಾರಿಗೊಳಿಸಿರುವುದನ್ನು ವಿರೋಧಿಸಿ ರೈತರು ೧ ವರ್ಷ ಚಳವಳಿ ನಡೆಸಿರುವುದು ೭ ದಶಕದಲ್ಲೆ ಅಪರೂಪ ೭೫೦ ಮಂದಿ ಸಾವಪ್ಪಿದ್ದು, ಸ್ವಾತಂತ್ರö್ಯ ಹೋರಾಟದಲ್ಲಿ ಆದ ಬಲಿದಾನಕ್ಕೆ ಸರಿಸಮವಾಗಿದೆ. ಕೃಷಿಕಾಯ್ದೆ ಹಿಂಪಡೆದಿರುವುದನ್ನು ಗಮನಿಸಿದರೆ ಜನಶಕ್ತಿಮುಂದೆ ರಾಜಶಕ್ತಿ ತಲೆಬಾಗಲೇ ಬೇಕೆನ್ನುವುದಕ್ಕೆ ಸ್ಪಷ್ಟನಿದರ್ಶವೆಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!