May 3, 2024

MALNAD TV

HEART OF COFFEE CITY

ಎಚ್ಚರ ಯುವಕರೇ.. ಎಚ್ಚರ.. ನಕಲಿ ಉದ್ಯೋಗದ ಮಾಯಾಜಾಲ..! ಜಾಬ್ ಸ್ಕ್ಯಾಮ್ ಜಾಲಕ್ಕೆ ಸಿಲುಕಿದ ಚಿಕ್ಕಮಗಳೂರಿನ ಯುವಕ.. ಮಗನ ಸ್ಥಿತಿ ನೆನೆದು ಕಣ್ಣೀರಿಡುತ್ತಿರುವ ಹೆತ್ತವರು..!

1 min read

ಚಿಕ್ಕಮಗಳೂರು: ಜಾಬ್ ಸ್ಕ್ಯಾಮ್ ಎಂಬ ಜಾಲಕ್ಕೆ ಸಿಲುಕಿ ಕಾಫಿನಾಡಿನ ಯುವಕ ವಿದೇಶದಲ್ಲಿ ಬಂಧಿಯಾಗಿರುವ ಘಟನೆ ನಡೆದಿದೆ. ಹೌದು ವಿದೇಶದಲ್ಲಿ ಕೆಲಸ, ಕೈ ತುಂಬಾ ಸಂಬಳ.. ಐಷಾರಾಮಿ ಬದುಕು ಸಾಗಿಸ್ಬೇಕು.. ತಂದೆ ತಾಯಿಯನ್ನ ಚನ್ನಾಗಿ ನೋಡ್ಕೋಬೇಕು – ಇದು ಇಂದಿನ ಯುವ ಜನತೆಯ ಕನಸು.. ಆದ್ರೆ ಹೀಗೆ ಹತ್ತಾರು ಕನಸು ಹೊತ್ತು ವಿದೇಶಕ್ಕೆ ಹೋದವರ ಕಥೆ ಏನಾಗಿದೆ ಗೊತ್ತಾ..? ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಮಾಗುಂಡಿ ಸಮೀದ ಮಹಲ್ಗೋಡು ಗ್ರಾಮದ ಸುರೇಶ್, ಪ್ರೇಮಾ ದಂಪತಿಯ ಮೊದಲ ಪುತ್ರ ಅಶೋಕ್ ಎಂಬ ಯುವಕ. ಬಿಕಾಂ ಓದು ಮುಗಿಸಿ ಊರಲ್ಲೇ ಕೆಲಸ ಮಾಡ್ಕೊಂಡಿದ್ದ ಈ ಯುವಕನಿಗೆ ಎನ್.ಆರ್. ಪುರ ಮೂಲದ ನಿಕ್ಷೇಪ್ ಮತ್ತು ಭರತ್ ಎನ್ನುವವರ ಪರಿಚಯವಾಗುತ್ತೆ.. ‘ನಿನಗೆ ವಿದೇಶದಲ್ಲಿ ಕೆಲಸ ಕೊಡಿಸ್ತೀವಿ 800 ಡಾಲರ್ ಸಂಬಳ ಸಿಗುತ್ತೆ’ ಅಂತ ಅಶೋಕ್ ಗೆ ಆಸೆ ಹುಟ್ಟಿಸಿದ್ದಾರೆ. ಫಾರಿನ್ ನಲ್ಲಿ ಕೆಲಸ, ಲಕ್ಷಗಟ್ಟಲೆ ಸಂಬಳ ಅಂದ್ರೆ ಯಾರು ತಾನೇ ಬೇಡ ಅಂತಾರೆ ಹೇಳಿ.. ಯುವಕರ ಬಣ್ಣ ಬಣ್ಣದ ಮಾತು ಕೇಳಿದ ಅಶೋಕ್ ಹಿಂದೆ ಮುಂದೆ ಯೋಚಿಸದೆ ಓಕೆ ಅಂದಿದ್ದಾನೆ.
ಆದ್ರೆ ಅಲ್ಲಿಗೆ ಹೋದಮೇಲೆ ಅಶೋಕ್ ಗೆ ದೊಡ್ಡ ಶಾಕ್ ಒಂದು ಕಾದಿತ್ತು. ತಾನು ಅದೊಂದು ದೊಡ್ಡ ಜಾಲದೊಳಗೆ ಸಿಕ್ಕಿಹಾಕ್ಕೊಂಡಿದ್ದೀನಿ ಅನ್ನೋ ಅರಿವಾಗಿತ್ತು.. ತಿಂಗಳು ಕಳೆದಂತೆ ಚಿತ್ರಹಿಂಸೆಗಳು ಶುರುವಾಗಿತ್ತು.‌. ಹೇಗಾದ್ರೂ ಮಾಡಿ ನನ್ನನ್ನು ಭಾರತಕ್ಕೆ ವಾಪಸ್​ ಕರೆಸಿಕೊಳ್ಳಿ ಅಂತ ಚೀರಾಡೋಕೆ ಶುರು ಮಾಡಿದ್ದ.. ಅಶೋಕನ ಪರಿಸ್ಥಿತಿ ಕಂಡ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈತೊಳೀತಿದೆ..

ಕ್ರೌನ್ ಕೆಸಿನೋ ಎಂಬ ಕಂಪೆನಿಯಲ್ಲಿ ಕೆಲಸಕ್ಕೆ ನೀವು ಆಯ್ಕೆಯಾಗಿದ್ದೀರಾ, ತಕ್ಷಣವೇ ನೀವು ಕಾಂಬೋಡಿಯಾಗೆ ಬರಬೇಕು, ತಿಂಗಳಿಗೆ 800 ಡಾಲರ್ ಸಂಬಳ ಎಂಬ ಆಫರ್ ಲೆಟರ್ ಒಂದು ಕಳೆದ ಮೂರು ತಿಂಗಳ ಹಿಂದೆ ಅಶೋಕ್ ಕೈ ಸೇರಿತ್ತು. ಇದನ್ನು ನಂಬಿಕೊಂಡು ಕಾಂಬೋಡಿಯಾಕ್ಕೆ ಹೋದ ಆಶೋಕ್ ಗೆ ಅಲ್ಲಿ ದೊಡ್ಡ ಶಾಕ್ ಕಾದಿತ್ತು.. ಅಲ್ಲಿ ಆತನಿಗೆ ಇದ್ದ ಕೆಲಸವೇ ಬೇರೆ ಆಗಿತ್ತು. ಕಳೆದ ಎರಡು ವರ್ಷದಿಂದ ನಮ್ಮ ಸ್ನೇಹಿತರ, ಪರಿಚಯ ಇರುವವರ ಫೇಸ್ಬುಕ್, ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಆಗಿ, ನನಗೆ ಎಮರ್ಜೆನ್ಸಿ ಇದೆ, ಹಣ ಹಾಕಿ ಎಂಬ ಮೆಸೇಜ್ ಗಳು ಬರ್ತಿದ್ದಿದ್ದು ನಿಮಗೆ ನೆನಪಿರಬಹುದೇನೋ..

ಹೌದು ಅದೆಲ್ಲಾ ಮಾಡ್ತಿದ್ದಿದ್ದು ಇದೇ ಕಾಂಬೋಡಿಯಾ ಮೂಲದ ಚೀನಿ ಆ್ಯಪ್ ಗ್ಯಾಂಗ್.. ಅದಕ್ಕೆ ಬಳಸಿಕೊಳ್ತಿದ್ದಿದ್ದು ಇದೇ ಭಾರತೀಯ ಮೂಲದ ಅಮಾಯಕ ಯುವಕರನ್ನ.. ಟೂರಿಸ್ಟ್ ವೀಸಾ ಮೂಲಕ ಭಾರತೀಯರನ್ನು ಕರೆತಂದು ಅದನ್ನು ಬಿಸಿನೆಸ್ ವೀಸಾಗೆ ಬದಲಾಯಿಸ್ತಾರೆ.. ಅಲ್ಲಿಂದ ಒಂದು ವರ್ಷ ಕೆಲಸಕ್ಕೆ ತೆರಳಿದ ಈ ಯುವಕರನ್ನ ಬಂಧಿಯಾಗಿಸ್ತಾರೆ. 800 ಡಾಲರ್ ಸಂಬಳದ ಆಸೆ ಹುಟ್ಟಿಸಿ ಭಾರತೀಯ ಅಮಾಯಕ ಯುವಕರನ್ನು ಕರೆದುಕೊಂಡು ಹೋಗ್ತಾರೆ.. ಅಲ್ಲಿ ಅವರನ್ನು ಒತ್ತೆಯಾಳಾಗಿರಿಸಿಕೊಂಡು ಅವರಿಂದಲೇ ಭಾರತೀಯರಿಗೆ ಮೋಸ ಮಾಡಿಸುವ ಕೆಲಸಕ್ಕೆ ಈ ಕುತಂತ್ರಿ ಚೀನಾ ಮುಂದಾಗಿದೆ.

ಸದ್ಯ ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿರೋ ಯುವಕ ಅಶೋಕ್ ತನ್ನನ್ನು ಭಾರತಕ್ಕೆ ಕರೆತರುವಂತೆ ಮನವಿ ಮಾಡ್ತಿದ್ದಾನೆ. ಪ್ರತಿದಿನ ನರಕ ಯಾತನೆ ಅನುಭವಿಸ್ತಿದ್ದಾನೆ. ಅಶೋಕ್ ಭಾರತಕ್ಕೆ ತೆರಳಬೇಕು ಎಂದಿದಕ್ಕೆ ಆತನ ಕುಟುಂಬಕ್ಕೆ 13 ಲಕ್ಷ ರೂಪಾಯಿ ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಕತ್ತಲೆ ಕೋಣೆಯಲ್ಲಿ ಕೂಡಿಟ್ಟು ಆತನಿಗೆ ಕರೆಂಟ್ ಶಾಕ್ ಕೊಡ್ತಿದೆಯಂತೆ..
ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿರೋ ಯುವಕ ಆಶೋಕನ ತಂದೆ ಈಗಾಗಲೇ ಬಾಳೆಹೊನ್ನೂರು ಪೊಲೀಸರಿಗೆ ತಮ್ಮ ಮಗನನ್ನು ಕರೆಸಿಕೊಡುವಂತೆ ಮನವಿ ಮಾಡಿದ್ದಾರೆ. ಪ್ರಕರಣದ ಗಂಭೀರತೆ ಅರಿತು ಇನ್ನಾದ್ರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಕುರಿತು ಎಚ್ಚೆತ್ತು ಚೀನಾಗೆ ತಕ್ಕ ಪಾಠ ಕಲಿಸ್ಬೇಕಿದೆ.. ಅಲ್ಲಿರುವ ಭಾರತೀಯ ಯುವಕರನ್ನ ಮರಳಿ ಕರೆತರಬೇಕಿದೆ‌‌.

ನಕಲಿ ಉದ್ಯೋಗದ ಬಗ್ಗೆ ಮಾಹಿತಿ ಹಬ್ಬಿಸಿ, ಕೊನೆಗೆ ಉದ್ಯೋಗಕ್ಕಾಗಿ ಹಾತೊರೆಯುವ ಯುವಕ-ಯುವತಿಯರಿಂದ ಹಣ ವಸೂಲಿ ಮಾಡುವ ಅನೇಕ ಘಟನೆಗಳು ಬೆಳಕಿಗೆ ಬರುತ್ತಿರುತ್ತದೆ. ಆದರೀಗ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ದಿನನಿತ್ಯ ಒಬ್ಬರಾದರೂ ಇಂತಹ ಪ್ರಕರಣಕ್ಕೆ ಸಿಲುಕಿ ಹಣ ಕಳೆದುಕೊಳ್ಳದೇ ಇರಲಾರರು. ತಂತ್ರಜ್ಞಾನ ಬೆಳೆದಂತೆ ಮೋಸದ ಜಾಲಗಳು ಬಲಗೊಳ್ಳುತ್ತಿವೆ. ಇದನ್ನೇ ಅಸ್ತ್ರವನ್ನಾಗಿ ಇಟ್ಟುಕೊಂಡು ಮೋಸ ಮಾಡುತ್ತಿದ್ದಾರೆ. ಆದರೆ ಎಷ್ಟೇ ಜಾಗೃತೆ ವಹಿಸಿದರೂ ಇಂತಹ ಮೋಸದ ಜಾಲಕ್ಕೆ ಯುವಕ ಯುವತಿಯರು ಬಲಿಯಾಗುತ್ತಿದ್ದಾರೆ. ಆದ್ದರಿಂದ ಇಂತಹ ಜಾಲಕ್ಕೆ ಯುವಕ- ಯುವತಿಯರು ಬಲಿಯಾಗಬಾರದು ಈ ಎಂಬುದು ನಮ್ಮ ಆಶಯ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!