May 19, 2024

MALNAD TV

HEART OF COFFEE CITY

ಭಾರತ್ ಬಂದ್ ವಿಫಲ, ವಿಪಕ್ಷಗಳಿಗೆ ಮುಖಭಂಗ : ಬಿಜೆಪಿ ವ್ಯಂಗ್ಯ

1 min read

ಚಿಕ್ಕಮಗಳೂರು.ಸಂಘಟನೆಗಳಲ್ಲಿ ಹೊಂದಾಣಿಕೆ ಇಲ್ಲದೆ ಬೇರೆ-ಬೇರೆಯಾಗಿ ಹೋರಾಟ ನಡೆಸಿರುವುದನ್ನ ನೋಡಿದರೆ ಕೃಷಿ ಕಾಯ್ದೆಯ ಬಗ್ಗೆ ಅರಿವಿಲ್ಲ ಎಂಬುದು ಅರಿವಾಗುತ್ತದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ವರಸಿದ್ಧಿ ವೇಣುಗೋಪಾಲ್ ಭಾರತ್ ಬಂದ್ ಕುರಿತು ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜಿಲ್ಲೆಯಲ್ಲಿ ಇಂದು 23 ಸಂಘಟನೆಗಳು ಸೇರಿ ನಡೆಸಿದ ಭಾರತ್ ಬಂದ್ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ. ಸಾರ್ವಜನಿಕರು ಕೂಡ ಬಂದ್‍ಗೆ ಬೆಂಬಲ ನೀಡದೆ ವಿರೋಧ ಪಕ್ಷಗಳಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಲೇವಡಿ ಮಾಡಿದ್ದಾರೆ. ಒಂದು ಸುಳ್ಳನ್ನ ನೂರು ಬಾರಿ ಹೇಳಿದರೆ ಅದು ಸತ್ಯವಾಗುವುದಿಲ್ಲ. ಕಾಂಗ್ರೆಸ್ ಕೃಪಾಪೆÇೀಷಿತ ಬಂದ್ ಯಶಸ್ವಿಯಾಗದೆ ಸಂಪೂರ್ಣ ವಿಫಲವಾಗಿದೆ. ಇದಕ್ಕೆ ಕಾರಣ ಸಾರ್ವಜನಿಕರಲ್ಲಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಇರುವ ನಂಬಿಕೆಯೇ ಕಾರಣ ಎಂದಿದ್ದಾರೆ. ಇನ್ನು ಮುಂದಾದರೂ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸೇರಿದಂತೆ ಸೈದ್ಧಾಂತಿಕ ವಿರೋಧಿಗಳು ಹಾಗೂ ಸ್ವಯಂ ಘೋಷಿತ ಬುದ್ಧಿ ಜೀವಿಗಳು ಕೃಷಿ ಕಾಯ್ದೆಯನ್ನ ಸರಿಯಾಗಿ ಅರಿತು, ಸಾರ್ವಜನಿಕರಲ್ಲಿ ಮತ್ತು ರೈತಾಪಿ ವರ್ಗದಲ್ಲಿ ಗೊಂದಲ ನಿರ್ಮಾಣ ಮಾಡುವುದನ್ನು ಬಿಡಬೇಕಿದೆ ಎಂದು ಕಿವಿಮಾತು ಹೇಳಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿ ನಡೆಸಿದ್ದ ಭಾರತೀಯ ಜನತಾ ಪಾರ್ಟಿ ಭಾರತ್ ಬಂದ್‍ಗೆ ಬೆಂಬಲ ನೀಡಬಾರದೆಂದು ಮನವಿ ಮಾಡಿದ್ದರು. ಆಟೋ ಚಾಲಕರು, ಲಾರಿ ಮಾಲೀಕರು, ಸಾರ್ವಜನಿಕರು, ಹೋಟೇಲ್ ಮಾಲೀಕರು, ವರ್ತಕರು ಹಾಗೂ ಇನ್ನಿತರ ವ್ಯಾಪಾರಸ್ಥರು ಬಂದ್‍ಗೆ ಬೆಂಬಲಿಸದೇ ಭಾರತೀಯ ಜನತಾ ಪಾರ್ಟಿಯ ಮನವಿಗೆ ಸ್ಪಂದಿಸಿ ದಿನನಿತ್ಯದ ಚಟುವಟಿಕೆಯಲ್ಲಿ ಎಂದಿನಂತೆ ಭಾಗವಹಿಸಿ ಬಂದ್ ವಿಫಲಗೊಳಿಸಿದ್ದಾರೆ ಎಂದು ಅವರಿಗೆ ಧನ್ಯವಾದ ತಿಳಿಸಿದ್ದಾರೆ.

 

ಬಂದ್‍ಗೆ ನೀರಸ ಪ್ರತಿಕ್ರಿಯೆ : ಜಿಲ್ಲಾದ್ಯಂತ ಭಾರತ್ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜಿಲ್ಲಾದ್ಯಂತ ಜನಜೀವನ ಎಂದಿನಂತೆ ಆರಂಭಗೊಂಡಿತ್ತು. ಆಟೋ, ಸರ್ಕಾರಿ-ಖಾಸಗಿ ಬಸ್‍ಗಳು ಎಂದಿನಂತೆ ರಸ್ತೆಗೆ ಇಳಿದಿದ್ದವು. ಅಂಗಡಿ-ಮುಂಗಟ್ಟುಗಳು ಕೂಡ ಎಂದಿನಂತೆ ತೆರೆದು ವರ್ತಕರು-ಗ್ರಾಹಕರು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ಪ್ರತಿಭಟನಾಕಾರರು ಬಂದ್‍ಗೆ ಬೆಂಬಲಿಸುವಂತೆ ನಗರದ ಐ.ಜಿ.ರಸ್ತೆ, ಎಂ.ಜಿ.ರಸ್ತೆ ಹಾಗೂ ಮಾರ್ಕೇಟ್ ರಸ್ತೆಯಲ್ಲಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸುವಂತೆ ಆಟೋದಲ್ಲಿ ಅನೌನ್ಸ್ ಮಾಡಿ ಮನವಿ ಮಾಡಿಕೊಂಡಿದ್ದರು. ಆದರೆ, ಜನ ಬಂದ್‍ಗೆ ಬೆಂಬಲ ನೀಡದೆ ಎಂದಿನಂತೆ ವ್ಯಾಪಾರ-ವಹಿವಾಟಿನಲ್ಲಿ ತೊಡಗಿದ್ದರು. ಬಳಿಕ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ಹಾಗೂ ಬೆಲೆ ಏರಿಕೆಗೆ ವಿರುದ್ಧ ಆಕ್ರೋಶ ಹೊರಹಾಕಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!